ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ಪ್ರಭಾವನೆ ಮಾತ್ರ ಮೇಲಿಂದಮೇಲೆ ಆಗುತ್ತಲೇ ಇರುತ್ತದೆ. ಇದಕ್ಕಾಗಿ ಹಲವಾರು ಸಂಘ ಸಂಸ್ಥೆಗಳು ಬೇರೆ ಬೇರೆ ಸಂಧರ್ಭಗಳಲ್ಲಿ ಪ್ರಭಾವ ಬೀರುತ್ತಲೇ ಇವೆ. ಇವುಗಳಲ್ಲಿ "*ಸುಹಾಸ್ತಿ ಯುವ ಜೈನ ಮಿಲನವೂ*" ಒಂದು, ಈ ಸಂಸ್ಥೆಯಲ್ಲಿ ಉತ್ಸಾಹಿ ಯುವ ಪಡೆಯೇ ಇದೆ ಜೈನ ಧರ್ಮದ ಇತಿಹಾಸ ಪರಂಪರೆ ಸಂಸ್ಕೃತಿ ಉಳಿಸುವ ರಕ್ಷಿಸುವ ಮುಂದುವರೆಸುವ ಮಹಾನ್ ಕಾರ್ಯವನ್ನು ಈ ಸುಹಾಸ್ತಿ ಯುವ ಜೈನ ಮಿಲವು ಮಾಡುತ್ತಿದೆ ಇದು ನಿಜಕ್ಕೂ ಶ್ಲ್ಯಾಘನೀಯ.
     ▫️ಈ ಸಂಸ್ಥೆಯ ಪುರಾತನ ಐತಿಹಾಸಿಕ ಪಾಳುಬಿದ್ದ ಜಿನಮಂದಿರಗಳನ್ನು ಸ್ವಚ್ಛಗೊಳಿಸುವದು, ಜಿನಬಿಂಬಗಳನ್ನು ರಕ್ಷಿಸುವದು ಧರ್ಮಕ್ಕೆ ಅನ್ಯಾಯ ಅವಮಾನ ಅದಾಗಲೆಲ್ಲ ಹೋರಾಟಮಾಡುವದು ಜಾಗ್ರತಿಗೊಳಿಸುವದು ಸಂಘಟಿಸುವದು ಇತ್ಯಾದಿ ಪ್ರಮುಖ ಕಾರ್ಯವನ್ನು ಮಾಡುತ್ತ ಮುಂಚೂಣಿಯಲ್ಲಿದೆ, ಇದು ಇಂದಿನ ಅಗತ್ಯ ಕೂಡ, ಸಮಾಜದ ಹಲವಾರು ಯುವಕರು ಇದರಿಂದ ಪ್ರೇರೇಪಿತರಾಗಿದ್ದಾರೆ, ಸ್ಫೂರ್ತಿಪಡೆದಿದ್ದಾರೆ ನಾಡಿನಾದ್ಯಂತ ಸಮಾಜದ ಯುವಪಡೆ ಅದನ್ನು ಅನುಸರಿಸಬೇಕಿದೆ, ಆಧುನಿಕತೆಯ ಪ್ರಭಾವಕ್ಕೊಳಗಾಗದೆ ಜಿನ ಧರ್ಮ ಪರಂಪರೆ ರಕ್ಷಣೆ  ಯುವಕರು ಮುಂದಾಗಬೇಕಿದೆ ಇದು ಅವರ ಕೈಯಲ್ಲಿದೆ. 
     ▫️ಈ ನಿಟ್ಟಿನಲ್ಲಿ ಸುಹಾಸ್ತಿ ಯುವ ಜೈನ ಮಿಲನವು ಈ ಬಾರಿ ಜೈನ ಮಿಲನ್ ದುಬೈ ಇವರ ಸಹಯೋಗದಲ್ಲಿ ಬರುವ ದಿಶೆಂಬರ್ 3,4  ರಂದು ದುಬೈನಲ್ಲಿ,ಸನ್ಮಾನ್ಯ ಶ್ರೀ ಡಿ ಸುರೇಂದ್ರಕುಮಾರ ಹೆಗ್ಗಡೆ ಇವರ ಅದ್ಯಕ್ಷತೆಯಲ್ಲಿ ನಾಡೋಜ ಡಾ.ಹಂಪಾನಾ ಉದ್ಘಾಟನೆಯೊಂದಿಗೆ  ಹಾಗು ಇತರ ಗಣ್ಯಾತಿಗಣ್ಯರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಜಿನ ಸಮ್ಮಿಲನ ನಡೆಸಲು ಆಯೋಜಿಸಲಾಗಿದೆ, ಈ ಸಮ್ಮೇನನಕ್ಕ ವಿಶ್ವದ ಅನೇಕ ರಾಷ್ಟ್ರಗಳಿಂದ ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಹುಬ್ಬಳ್ಳಿಯೂ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಸುಮಾರು 250 ಕ್ಕೂ ಹೆಚ್ಚು ಜನ ಪಾಲ್ಗೊಳ್ಳುತ್ತಿದ್ದಾರೆ. ಈ ಸಮ್ಮೇಳನ ಚಾರಿತ್ರಿಕ ಧಾಖಲೆಯಾಗಲಿದೆ. ಸಮ್ಮೇಳನದಲ್ಲಿ ಪ್ರಮುಖ ವಿಷಯಗಳ ಚರ್ಚೆಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜೈನಧರ್ಮದ ಪ್ರಭಾವ ಪಸರಿಸಲಿ,ಗಮನ ಸೆಳೆಯಲಿ ಮತ್ತು ಅತ್ಯಂತ ಯಶಸ್ವಿಯಾಗಲಿ ಎನ್ನುವ ಆಶಯದೊಂದಿಗೆ ಭಾಗವಹಿಸುತ್ತಿರುವ ಎಲ್ಲ ಪ್ರನಿಧಿಗಳ ಪ್ರಯಾಣ ಸುಖಕರವಾಗಲಿ ಎಂದು ಪ್ರಾರ್ಥಿಸುತ್ತೇವೆ ಮತ್ತು ಆಯೋಜನೆಗೆ ವ್ಯವಸ್ಥೆಗೊಳಿಸಿದ ಸರ್ವಶ್ರೀ ಚಿತ್ತಾ ಜಿನೇಂದ್ರ,ಮಾಳ ಹರ್ಷೇoದ್ರ ಕುಮಾರ, ವಜ್ರಕುಮಾರ, ವಿಮಲ್ ತಾಳಿಕೋಟಿ ಇನ್ನಿತರರಿಗೆ ಅಭಿನಂದನೆಗಳು.🙏🏻
==============
▪️ಶಾಂತರಾಜ ಮಲ್ಲಸಮುದ್ರ 
        ಧಾರವಾಡ 
      8762235112

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...