Showing posts with label ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು. Show all posts
Showing posts with label ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು. Show all posts

ಪ್ರಸಿದ್ದ ಜೈನ ಸಿದ್ದ ಕ್ಷೇತ್ರ ಮಂಧರಗಿರಿ ಕಳತೆಗೆದು-ಸಸಿನೆಡುವ ಕಾರ್ಯಕ್ರಮ

ತುಮಕೂರು : ಯುವ ಜೈನ್ ಮಿಲನ್ ಬೆಂಗಳೂರು ವಿಭಾಗ ಮತ್ತು ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ಖ್ಯಾತ ಚಿತ್ರ ಶಿಲ್ಪಾಕಲಾವಿದರಾದ
ಜಿನೇಂದ್ರ ಎಂ.ಎಂ.ರವರ ನೆತ್ರತ್ವದಲ್ಲಿ ನಡೆದ ವಿಶ್ವ ಪರಿಸರದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಬೆಂಗಳೂರು ಉತ್ತರ ಜೈನ ಸಮಾಜದ ಕಾರ್ಯಕ್ರಮಗಳಾದ ಶ್ರೀ ಅಶೋಕ್ ಜೈನ್ ರವರು ಉದ್ಗಾಟಿಸಿದರು..
ನೂರಾರು ಸಂಖ್ಯೆಲ್ಲಿ ಭಾಗವಹಿಸಿದ್ದ ಜಿನ ಬಂಧುಗಳು ಚಂದ್ರಪ್ರಭ ತೀರ್ಥಂಕರ ಮೂರ್ತಿ ಆವರಣ, ಬಸದಿ ಆವರಣ, ಶಾಂತಿಸಾಗರ ಮಹಾರಾಜರ ಪಿಂಚಿ ಮಂದಿರ ಆವರಣ, ಉದ್ಯಾನವನಗಳಲ್ಲಿದ್ದ ಕಳೆ ಗಿಡಗಂಟೆಗಳನ್ನ ಕಿತ್ತು, ಪ್ಲಾಸ್ಟೀಕ್, ಕಸ ತೆಗೆದು, ಸ್ವಚ್ಛಗೊಳಿಸಿ, ಆವರಣದದಲ್ಲಿ ಉತ್ತಮ ಜಾತಿಯ ಗಿಡಗಳನ್ನು ನೆಟ್ಟು ನೀರೆರೆದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಡಿ.ಎಸ್. ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು, ತುಮಕೂರಿನ ಜಿನಬಂಧುಗಳು, ಜಿಲ್ಲಾ ಜಿನಸಮಾಜ, ಶೃತ ಜೈನಮಿಲನ್, ಶೃತ ಯುವ ಜೈನ್ ಯುವ ಮಿಲನ್, ಸದಸ್ಯರು ಬೆಂಗಳೂರು ಉತ್ತರ ಜೈನಮಿಲನ್ ಸುಹಾಸ್ತಿ ಜೈನ್ ಯುವ ಮಿಲನ್ ಸೇರಿದಂತೆ ಇನ್ನತರ ಜಿನ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ನಾಂದಿಯಾಡಿದರು. ಬೆಂಗಳೂರು ಯುವ ಜೈನ್ ಮಿಲನ್ ಕಾರ್ಯದರ್ಶಿ ಎಂ.ಎಂ. ಜಿನೇಂದ್ರ, ಸುಹಾಸ್ ಯುವ ಜೈನ್ ಮಿಲನ್ ಕಾರ್ಯದರ್ಶಿ ಧರ್ಮಪಾಲ್, ಶಾಶೃತ ನಿಧಿ ಲಿ., ಪದ್ಮಪ್ರಸಾದ್, ಜಯವರ್ಮ ಜೈನ್, ಶೃತ ಜೈನ್ ಮಿಲನ್ ವೈ.ಡಿ. ಶಾಮಲಾ ಧರಣೇಂದ್ರಯ್ಯ, ಅಧ್ಯಕ್ಷೆ ಚಂದ್ರಪ್ರಭ, ಪದ್ಮಸುರೇಂದ್ರ, ಶಾಂತಲಾ ಅಜಿತ್, ಶೃತ ಜೈನ್ ಯುವ ಮಿಲನ್ ಅಧ್ಯಕ್ಷೆ ಪೂಜಾ, ಅರಕೆರೆ ಪದ್ಮಶ್ರೀ, ಮೇಘನ, ಮಾನಸ, ಜಿಲ್ಲಾ ಜೈನ ಸಮಾಜದ ಉಪಾಧ್ಯಕ್ಷ ಜಿ.ಡಿ. ವರ್ಧಮಾನ, ನಿರ್ದೇಶಕರಾದ ಆನಂದ್, ವಿಜಯಕುಮಾರ್, ಸುನೀಲ್, ಶಾಂತೇಶ್, ಬಳ್ಳಾರಿ ಬಾಹುಬಲಿ, ಪದ್ಮಣ್ಣ, ಪಚ್ಚೇಶ್ ಜೈನ್, ಪೇಪರ್ ಪ್ರಸಾದ್ ಜೈನ್, ಕೆ.ವಿ. ವೀರೇಂದ್ರಕುಮಾರ್ ಭಾಗವಹಿಸಿದ್ದರು.


ನಂತರ ನಡೆದ ಕಾರ್ಯಕ್ರಮದಲ್ಲಿ..
ಚಿತ್ತಾ ಜಿನೇಂದ್ರ ಪ್ರತಿಜ್ಞಾ ವಿಧಿ ಬೋದಿಸಿದರು
ಧರ್ಮಪಾಲ್ ಅವರು ಮಾತನಾಡಿ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಿ ಕೊಂಡು ಬರುತ್ತಿದ್ದೆವೆ ಇದಲ್ಲದೆ ಸುಹಾಸ್ತಿ ಯುವ ಜೈನ್ ಮಿಲನ್ ನ ಹಲವು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
 ತುಮಕೂರು ಜೈನ ಸಮಾಜದ ನಿರ್ದೇಶಕರಾದ ಆನಂದ್ ರವರು ವಂದನಾರ್ಪಣೆ ನಡೆಸಿ ಕೊಟ್ಟರು...






ಬನ್ನಿ ಒಂದಸಲ ಈ ಹಳೇಬೀಡಿನ ಶ್ರೀ ಪಾರ್ಶನಾಥರ ದರ್ಶನ ಮಾಡೋಣಾ‌.





ಜೈನ ದರ್ಶನ
ಹಾಂ!
ಬೆಲೂರ ಅಂದಕ್ಷಣ ನೆನಪಿಗೆ ಬರುವುದು ಶಿಲಾಬಾಲಿಕೆ.ವಿಷ್ಣುವರ್ಧನ್ ಶಾಂತಲೆ, ಚೆನ್ನಕೇಶವ ದೇವಾಲಯ.
ಅದರೆ ನನಗೆ ಬೇಲೂರು ಹಳೆಬೀಡಿನ ಶಿಲ್ಪಕಲೆಯ ಅದ್ಬುತ ಅನ್ನುತ್ತಿದ್ದೆ! ಯಾವಾಗ ಹಳೇಬೀಡಿನ ಶ್ರೀ ಪಾರ್ಶನಾಥ ಮಂದಿರ ಒಳಗೆ ಪ್ರವೇಶ ಮಾಡಿದೆ .ಎಲ್ಲಾ ಆಯಾಸ ,ಎಲ್ಲಾ ಕ್ಷೇತ್ರಕ್ಕೂ ಮಿಗಿಲಾಗಿ ನನಗೆ ಕಾಣಿತು. ಸಾಕಷ್ಟು ಜನ ಪ್ರವಾಸ ಕೈಗೊಂಡಾಗ ,ಅಥವಾ ಯಾತ್ರೆ ಕೈಗೊಂಡಾಗ ಒಂದಿಷ್ಟು ಹೆಸರು ಮಾಡಿರುವ ಕ್ಷೇತ್ರ ನೋಡಿಕೊಂಡು ತೆರಳುತ್ತಾರೆ. ಬೇರೆಬೇರೆ ಸ್ಥಳದ ಕಡೆಗೆ ಹೆಚ್ಚಿನ ಗಮನ ಮಹತ್ವ ಕೊಡದೆ ಮುಂದೆ ಗಡಿಬಿಡಿಯಲ್ಲಿ ಹೊಗುತ್ತಾರೆ .ಉದಾಹರಣೆಗೆ ಜೊಗಪಾಲ್ಸ ಹೊಗುತ್ತಾರೆ ,ಅದರೆ ಅದಕ್ಕಿಂತಲೂ ಅದ್ಬುತ ರಮಣೀಯವಾದ ಸಾಕಷ್ಟು ಬರಚುಕ್ಕೆ ,ಗಗನಚುಕ್ಕಿ,ಉಂಚ್ಚಳ್ಳಿ ಪಾಲ್ಸ .ಹೀಗೆ ಸಾಗುವಾಗ ಸಾಕಷ್ಟು ಪ್ರವಾಸಿ ತಾಣಗಳು ಕೆಲವೇ ಕಿಮೀ ಅಂತರ ಇದ್ದರು ನೊಡದೆ ಹೊಗುತ್ತಾರೆ.ಜೊಗಪಾಲ್ಸ ಹೊಗುತ್ತಾರೆ ವಡನಬೈಲು ಕೇವಲ ಹತ್ತು ಹದಿನಾಲ್ಕು ಕಿಮೀ ಅಂತರ ಇರುತ್ತದೆ ಆ ಕ್ಷೇತ್ರ ನೆನಪಿಗೆ ಬರುವುದೆ ಇಲ್ಲ‌.ಗೆರುಸೊಪ್ಪು ಕ್ಷೇತ್ರ ಹೀಗೆ ಅತೀ ಸಮೀಪ ಇದ್ದರು ನೊಡಲು ಅಸಕ್ತಿ ತೋರುವುದಿಲ್ಲ. ಇರಲಿ ವಿಷಯಕ್ಕೆ ಬರುತ್ತೇನೆ...
ಹಳೇಬೀಡು ಬಿಂದಿದ್ದಿರಿ.ಅಥವಾ ಬರುವವರು ಇದ್ದರೆ! .ಅದರ ಹಿಂದಗಡೆ ಅರ್ಧ ಕಿಲೋ ಮೀಟರ್‌ ಅಂತರದಲ್ಲಿ  ಅಪ್ರತೀಮ ,ಭಗವಾನ್ ಬಾಹುಬಲಿ ನಿಂತಹಾಗೆ ನಮಗೆ ಸ್ವಾಗತಿಸುವ ಶ್ರೀ ಭಗವಾನ್‌ ಪಾರ್ಶನಾಥರ ದರ್ಶನವಾಗುತ್ತದೆ. ನೋಡಿದ ತಕ್ಷಣ ಮನಸ್ಸು ಶಾಂತ ,ಸಂತಸವಾಗುತ್ತದೆ.
ಹಳೇಬೀಡು ಕಲೆಯ ತವರೂರು ಅದೆಷ್ಟೋ ಪುರಾತನ ಮಂದಿರಗಳು ,ಶಿಲಾಶಾಸನಗಳು ಬೇಲೂರಿನಲ್ಲಿ ಕೂಡ ಜೈನ ,ಹಿಂದುಗಳ ಸಮಾಗಮ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ. ಅದರೆ ಜೈನ ಮಂದಿರ ಮಾತ್ರ ಹಳೇಬೀಡಿನ ಅತ್ಯಂತ ಸೂಕ್ಷ್ಮ ,ಕಲೆಯ ನೈಪುಣ್ಯತೆಯನ್ನು ಸಾರುವ ಏಕೈಕ ಜೈನ ಮಂದಿರವಿದು ,ಇಲ್ಲಿವರಗೆ ನಾನು ನೋಡಿದ ಹಾಗೆ. ಹಳೇಬೀಡಿನ ಈ ಪಾರ್ಶನಾಥ ಮಂದಿರವನ್ನು *ದ್ಯಾಸೋಜಾ*
*ಲಿಂಗಣ್ಣಾಚಾರಿ*
*ಮಲ್ಲಣ್ಣಾಚಾರಿ* ಕೆತ್ತಿದನೆಂದು ಶಿಲಾಶಾಸನಗಳು ಇವೆ.
ಮಂದಿರದಲ್ಲಿ ವಿಶಾಲವಾದ ಚೌರಂಗ ,ಬಲ ಎಡಬದಿಯಲ್ಲಿ ಪದ್ಮಾವತಿ ,ಧರಣೇಂದ್ರರ ಸ್ಥಾಪನೆ ಆಗಿತ್ತು ಈಗ ಅಲ್ಲಿ ಕಾಣುವುದಿಲ್ಲ ಮತ್ತೆ ಈ ನಾಲ್ಕು ಕಂಬಗಳು ಅದರ ಕೆತ್ತನೆ ನೋಡಿದರೆ ಖಡ್ಗದ ಅಲಗಿನಂತೆ ಅಷ್ಟು ಹರಿತವಾಗಿ, ನುಣಪಾಗಿ ಕೆತ್ತನೆ ಆಗಿದೆ.ಜೊತೆಯಲ್ಲಿ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬ ಕಾಣುತ್ತದೆ.
ಒಂದನೆಯ ಬಲಕಂಬದಲ್ಲಿ ನಮ್ಮ ಪ್ರತಿಬಿಂಬ ಎರಡು ಪ್ರತ್ಯೇಕವಾಗಿ ಕಾಣುತ್ತದೆ.
ಎರಡನೇ ಎಡ ಕಂಬದಲ್ಲಿ ಪ್ರತಿಬಿಂಬದಲ್ಲಿ ಅಂದರೆ ಕನ್ನಡಿ ಹಾಗೆ ಸ್ಪಷ್ಟವಾಗಿ ಅವರು ತೊಟ್ಟ ಬಟ್ಟೆಯ ಬಣ್ಣ ಕಾಣುತ್ತದೆ.
ಇನ್ನೂ ಮೂರನೆಯ ಬಲಕಂಬ ಸ್ವಲ ಮಸುಕಾಗಿತ್ತು .ಅಲ್ಲಿ ಸ್ಪಷ್ಟವಾಗಿ ಎನು ಗೊಚರಿಸುವದಿಲ್ಲ.
ನಾಲ್ಕನೇಯ ಕಂಬ ನಮ್ಮ ಪ್ರತಿಬಿಂಬ ತಲೆ ಕೆಳಗಾಗಿ ಕಾಣುತ್ತದೆ. ಎಲ್ಲಾ ನಾಲ್ಕು ಕಂಬಗಳಲ್ಲಿ ಸಂಗೀತ ಹೊರಹೊಮ್ಮುತ್ತದೆ.ಅಷ್ಟು ತೆಳುವಾದ ಪದರಿನಿಂದ ಕೂಡಿದ ಕಂಬಗಳು ಇವು. ಇಷ್ಟೆಲ್ಲಾ ಅದ್ಬುತ ಜಿನಮಂದಿರ ಇದ್ದರೂ ಕೂಡ ಅಲ್ಲಿ ಜೈನ ಕುಟುಂಬ ಎರಡು ಮನೆಗಳು ಮಾತ್ರ.ಅವರೆ ಎರಡು ಬಸದಿಯನ್ನು ನೊಡಿಕೊಳ್ಳುತ್ತಾರೆ. ಇದು ಮುಜರಾಯಿ ಆಡಳಿತದಲ್ಲಿ ಇದೆ.ಅದರ ನಿರ್ವಹಣೆಯಲ್ಲಿ ಅಲ್ಲಿನ ಪಂಡಿತರು ಜೀವನ ಸಾಗಿಸುತ್ತಿದ್ದಾರೆ .ಅಲ್ಪಸ್ವಲ್ಪ ನಮ್ಮ ಜನ ದರ್ಶನ ಬಂದರೆ ಅವರಿಗೂ ಖುಷಿ ,ಸಂತಸ....
ಬನ್ನಿ ಒಂದಸಲ ಈ ಹಳೇಬೀಡಿನ ಶ್ರೀ ಪಾರ್ಶನಾಥರ ದರ್ಶನ ಮಾಡೋಣಾ‌.ಮಾಡುವರಿಗೆ ಮಾಹಿತಿ ತಿಳಿಸೋಣಾ.
ದರ್ಶನ ಕರ್ಮ ಕಳೆಯೋಣಾ.
ದರ್ಶನದ ಫಲ ಪಡೆಯೋಣಾ.
ಜೈಜಿನೇಂದ್ರ

ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು

ಸುಹಾಸ್ತಿ ಯುವ ಜೈನ್ ಮಿಲನ ಬೆಂಗಳೂರು ಇದರ   ಜನವರಿ ತಿಂಗಳ ಸಭೆಯೂ ಶ್ರೀ ಶೀತಲನಾಥ ಜಿನಮಂದಿರದ ಟ್ರಸ್ಟ್ (ರಿ)
         ಪುಟ್ಟೇನಹಳ್ಳಿ ನಡೇಯಿತು. ಸಭೆಯನ್ನು ಆಯೋಜಿಸಲು ಅವಕಾಶ ಕಲ್ಪಿಸಿದ —ಸನ್ಮಾನ್ಯ ,ಸಮಾಜ ರತ್ನ ಶ್ರೀ ಬಿ. ಪ್ರಸನ್ನಯ್ಯ ಅವರಿಗೆ ಸುಹಾಸ್ತಿ ಜೈನ್ ಮಿಲನ್ ಪರವಾಗಿ ತುಂಬು ಹೃದಯದ ವದಂನೆಗಳು,

ನಮ್ಮಎಲ್ಲಾ ಕಾರ್ಯಕ್ರಮವನ್ನು “ಜಿನದರ್ಶನ”ಕ್ಕಾಗಿ
  ಚಿತ್ರೀಕರಿಸಿದ ಚಂದನ ವಾಹಿನಿಯ ತಂಡದ ಎಲ್ಲಾ ಸದಸ್ಯರಿಗೂ ವದಂನೆಗಳು.
              
ಸುಹಾಸ್ತಿ ಜೈನ್ ಮಿಲನ್.ಧರ್ಮ ಬಂಧುಗಳೆ.ಜೈ ಜಿನೇಂದ್ರ
ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಇದರ ಜನವರಿ ತಿಂಗಳ ಸಭೆಯು ದಿನಾಂಕ 14/1/2018ರಂದು ,ಶ್ರೀಭಗವಾನ್ ಶೀತಲನಾಥ  ಜಿನಮಂದಿರ🌻ಪುಟ್ಟೆನಹಳ್ಳಿಯಲ್ಲಿ ನಡಯಿತು .
.  ಶ್ರೀ  ಕ್ಷೇತ್ರ ಶ್ರವಣಬೆಳಗೊಳದಿಂದ ಧರ್ಮ ಪ್ರಭಾವನಾ ನಿಮಿತ್ತ ಹೊರಟಿರುವ ಶುಭಮಂಗಳ ರಥವನ್ನು  ಪುಟ್ಟೆನಹಳ್ಳಿಯ ಜೈನ ಸಮಾಜ ಜೊತೆಗೆ ಸೆರಿ ಬರಮಾಡಿಕೊಂಡೆವು

ಜೈನ್ ಮಿಲನ್ ಯಶಸ್ವಿ ಮುನ್ನಡೇಗಾಗಿ ಮತ್ತು ಲೋಕ ಕಲ್ಯಾಣಕಾಗಿ   ಶ್ರೀಭಗವಾನ್ ಶೀತಲನಾಥ  ಜಿನಮಂದಿರ ದಲ್ಲ ಮಿಲನ್ ವತಿಯಿಂದ ವಿಶೇಷ ಪೂಜೆ ಯನ್ನು ಮಾಡಿಸಲಾಯಿತು ಎಲ್ಲಾ ಸದಸ್ಯರೂ ಈ ಸಂದರ್ಭದಲ್ಲಿ    ಹಾಜರಿದ್ದು ಭಗವಂತನ ಕೃಪೆಗೆ ಪಾತ್ರರಾದೆವು.
ನಂತರ ನಡೆದ ಮಿಲನ್ ಸಬೆಯಲ್ಲ  ಇತ್ತೀಚೆಗೆ ಜಿನೈಕರಾದ ಪರಮ ಪೂಜ್ಯ108 ಶ್ರೀ ಕುಂದ ಕುಂದ ಮಹಾರಾಜ ರಿಗೆ ಮತ್ತು ಪರಮ ಪೂಜ್ಯ 108  ಶ್ರೀ ದೇವಸಸೇನ ಮುನಿಗಳಿಗೇ ಮತ್ತು ನಾಂದಣಿ ಶ್ರೀ ಜೈನ ಮಠದ *ಪ.ಪೂ.ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ  ಯವರಿಗೆ ಮಿಲನ್ ವತಿಯಿಂದ ಭಕ್ತಿಯನ್ನು ಅರ್ಪಿಸಿದೆವು.ಕಾರ್ಯಕ್ರಮ ವಿಶೇಷ ಅತಿಥಿ ಆಗಿ ಆಗಮಿಸಿದ ಯುವ ಜೈನ್ ಮಿಲನ್ ಮೆಂಟರ್ ಆಗಿರುವ ಶ್ರೀ  P.ಅಜಿತ್ ಜೈನ್ ರವರು ಮಾತನಾಡಿ ಜೈನ್ ಮಿಲನ ಕಾರ್ಯವನ್ನು  ಸ್ಲಾಘಿಸಿದರು ,ವಿವಿಧ ಕ್ಷೇತ್ರದಲ್ಲಿ  ಜೈನ್ ಮಿಲನ್ ತೋಡಗೀಸಿಕೊಂಡಿರುದಕ್ಕೆ ಮೇಚ್ಚುಗೆ ವ್ಯಕ್ತ ಪಡಿಸಿದವರು..ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ಮಿಲನ್ ಸದಸ್ಯರಿಗೆ ಫಲ ವನ್ನು ಗೌರವವಿಸಲಾಯಿತು ಮತ್ತು 2016 &2017 ನೇ ಸಾಲಿನಲ್ಲಿ ಸುಹಾಸ್ತಿ ಜೈನ್ ಮಿಲನ್ ಸಹ ಖಜಾಂಚಿ ಆಗಿ ಕೆಲಸ ಮಾಡಿದ ಸಂತೋಷ್ ಬಿ ಜೈನ್ ಇವರನ್ನು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಪ್ರತಿಯೊಂಬ್ಹ ಸದಸ್ಯರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರವಣ ಬೆಳಗೂಳ ದಲ್ಲಿ ನಡೇಯಲಿರುವ ಮಹಾ ಮಸ್ತಕಾಅಭಿಷೇಕದಲ್ಲಿ ಸುಹಾಸ್ತಿ ಮಿಲನ್ ಪಾತ್ರದ ಬಗ್ಗೆ ಚರ್ಚೆ ನಡೆಸಿದರು.ಶ್ರವಣ ಬೆಳಗೂಳ ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲು ಸದಸ್ಯರು ಆಸಕ್ತಿ ಇರುವ ಬಗ್ಗೆ ತೆಳಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.ಮಿಲನ್ ನ 20 ಸದಸ್ಯರು ಪಾಲ್ಗೊಂಡಿದ್ದರು.
ಭೋಜನದ ವ್ಯವಸ್ಥೆ :
ಶ್ರೀಭಗವಾನ್ ಶೀತಲನಾಥ ಜಿನಮಂದಿರ ಟ್ರಸ್ಟನವರು
:ಆಯೋಜಿಸಲು ಅವಕಾಶ ಕಲ್ಪಿಸಿದ —ಸನ್ಮಾನ್ಯ ,ಸಮಾಜ ರತ್ನ ಶ್ರೀ ಬಿ. ಪ್ರಸನ್ನಯ್ಯ ಅವರಿಗೆ ಸುಹಾಸ್ತಿ ಜೈನ್ ಮಿಲನ್ ಪರವಾಗಿ ತುಂಬು ಹೃದಯದ ವದಂನೆಗಳು,

ನಮ್ಮಎಲ್ಲಾ ಕಾರ್ಯಕ್ರಮವನ್ನು “ಜಿನದರ್ಶನ”ಕ್ಕಾಗಿ
  ಚಿತ್ರೀಕರಿಸಿದ ಚಂದನ ವಾಹಿನಿಯ ತಂಡದ ಎಲ್ಲಾ ಸದಸ್ಯರಿಗೂ ವದಂನೆಗಳು

ದಿನಾಂಕ#14/01/2018
ಸಮಯ#9:30 ಭೆ,

ಸ್ಥಳ: ಶ್ರೀಭಗವಾನ್ ಶೀತಲನಾಥ  ಜಿನಮಂದಿರ ಪುಟ್ಟೆನಹಳ್ಳಿ.

ಹಾರಿಗೆ ಬಸದಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ

ಓಂ
ಸುಹಾಸ್ತಿ ಯುವ ಜೈನ್ ಮಿಲನ್ ನಿಂದ ಮಲೆನಾಡಿನ ಬಸದಿಯಲ್ಲಿ ಜಿನಕರ ಸೇವೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಾರಿಗೆ ಶ್ರೀ ಭಗವಾನ್  ಶ್ರೀ ನೇಮಿನಾಥ ಸ್ವಾಮಿ ಜಿನ ಮಂದಿರದಲ್ಲಿ ಬೆಂಗಳೂರಿನ ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ತಾ,21ರ ಶನಿವಾರದಂದು ಜಿನಕರ ಸೇವೆ ನಡೆಯಿತು
ಬೆಳಗ್ಗೆ 9 ಗಂಟೆಯಿಂದ. ಮದ್ಯಾಹ್ನ 2 ಗಂಟೆಯ ವರೆಗೂ ನಡೆದ ಈ ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಬಸದಿಯ ಆವರಣದಲ್ಲಿ ಕಸ, ಕೊಳೆ,ಯನ್ನು ತೆಗೆಯಲಾಯಿತು. ಬೆಳೆದಿದ್ದ ಗಿಡ ಬಳ್ಳಿಗಳನ್ನು ಕಿತ್ತು ಸ್ವಚ್ಛ ಗೊಳಿಸಲಾಯಿತು
ಈ ಯುವ ಶಕ್ತಿ ಸಂಘಟನಾ ಸೇವಾ ಕಾರ್ಯ ಸಂದರ್ಭದಲ್ಲಿ ಜೈನ ಸಮಾಜದ ಉಪಧ್ಯಕ್ಷ ರಾದ ಶ್ರೀ ಕಾಂತರಾಜ್ ಜೈನ್ ಚಂದೋಳ್ಳಿ
ತಾಲ್ಲೂಕು ಪಂಚಾಯ್ತಿ ಹಾಗೂ ತಾಲ್ಲೂಕು ಬೋರ್ಡ್ ನ ಮಾಜಿ ಸದಸ್ಯರಾದ ಶ್ರೀ K. P. ದೇವರಾಜ್ ಮತ್ತಿತರರು ಈ "ಯುವ ಸಂಘಟನೆ" ಈ ವಿಶೇಷ ಕ್ರಿಯಾಶೀಲ ಚಟುವಟಿಕೆಯನ್ನು ಮೆಚ್ಚಿ. ಪ್ರಶಂಸಿಸಿ. ಸಾಮಾಜಿಕ ಕಾರ್ಯಕ್ರಮ ಮಾದರಿಯಾಗಿದೆ ಎಂದು ಶ್ಲಾಫಸಿದರು.
ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಯುವ ಮಿಲನ್ ಸದಸ್ಯರು ಊರಿನವರು ಹಾಗೂ ಸುಮಾರು 40 ಯುವಕರು ಉತ್ಸುಕತೆ ಯಿಂದ ಭಾಗವಹಿಸಿ ಸಮರ್ಪಣ ಭಾವ ತೋರಿದರು.
ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ಭಾರತೀಯ ಜೈನ್ ಮಿಲನ್ ಬೃಹತ್ ಸಂಘಟನಾ ಸಂಸ್ಥೆಯ ಯುವ ವಿಭಾಗದ ಶಾಖೆಯ
ಈ ಸುಹಾಸ್ತಿ ಯುವ ಜೈನ್ ಮಿಲನ್2014.ರಲ್ಲಿ
ಅಸ್ತಿತ್ವ ಗೊಂಡಿದ್ದು
ಈ ಯುವ ಮಿಲನ್ ಹಲವು ಜಿನಮಂದಿರಗಳಲ್ಲಿ ಜಿನಕರ ಸೇವೆ ವಿದ್ಯಾರ್ಥಿ ವೇತನಾ ವೈದ್ಯಕೀಯ ಚಿಕಿತ್ಸಾ ನೆರಹು
ಸಭೆ ಸಮಾರಂಭಗಳಲ್ಲಿ ಸ್ವಯಂ ಸೇವಕತ್ವಾ ಪರಿಸರ ದಿನಾಚರಣೆ ಯೋಗಾ ದಿನಾಚರಣೆ. ವನ ಮಹೋತ್ಸವ ಇತ್ಯಾದಿ ಜನಪರ ಸೇವಾ ತತ್ವರತೆಯಲ್ಲಿ ಸದಾ ಕ್ರಿಯಾ ಶೀಲಾ ಗೊಂಡಿದೆ
ಈ ಸೇವಾ ಸಂಸ್ಥೆಯ ವಿಶೇಷ ಸೇವಾಕತ್ವರತೆಯನ್ನು ಮಾನ್ಯಗೊಳಿಸಿ ಮೊದಲನೇ ವರ್ಷ ವಾರ್ಷಿಕ ಸಮಾವೇಶದಲ್ಲಿ ಬಹುಮಾನ
ಗಳಿಸಿತ್ತು
ಪ್ರತಿ ತಿಂಗಳು 2ನೇ ಭಾನುವಾರ ದಂದು ಮಾಸಿಕ ಸಭೆಯಲ್ಲಿ ಈ ಯುವ ಮಿಲನ್ ಸದಸ್ಯರು ಒಂದೇ ಕಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಆರ್ಥಿಕತೆ, ಧಾರ್ಮಿಕತೆ ಯನ್ನು ಉತ್ತಮ ಪಡಿಸಿಕೊಂಡಿದ್ದಾರೆ
ಹಾಗೂ ವಿಶೇಷ ಕಾರ್ಯ ಚಟುವಟಿಕೆಗಾಗಿ ಉತ್ಸು ಕತೆಯಿಂದ ಯೋಜನೆ ರೂಪಿಸುತ್ತಿರುತ್ತಾರೆ.
ಈ ಯುವ ಸಂಘಟನೆಯಲ್ಲಿ ಸಾಗರ ಹಾಗೂ ಕರಾವಳಿ ಪ್ರದೇಶದ ಯುವಕರು ಸದಸ್ಯರಾಗಿರುತ್ತಾರೆ.
ಈಗ ಹುಟ್ಟಿದೂರಿನ ಕಡೆಗೂ ಸೇವಾ ಕಾರ್ಯಗಳನ್ನು ವಿಸ್ತರಿಸೂವ ಉದಾರ ಯೋಚನೆ ಮಲೆನಾಡಿನ ಹಾರಿಗೆ ಜಿನ ಮಂದಿರದಲ್ಲಿ ಸ್ವಚ್ಚತಾ ಅಭಿಯಾನವನ್ನು ಕೃತಜ್ಞತಾ ಭಾವದಲ್ಲಿ ವ್ಯವಸ್ಥಿತ ಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ  ಜಿನ ಮಂದಿರದ ಎದುರುಗಿನ ನಿವೇಶನದಲ್ಲಿ ಗಿಡ ಗಳನ್ನು ಕಿತ್ತು.
ಪಾರ್ಕಿಂಗ್ ಗೆ ವ್ಯವಸ್ಥೆ ಸಿದ್ದ ಪಡಿ ಸಲಾಯಿತ್ತು.

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...