ಪ್ರಸಿದ್ದ ಜೈನ ಸಿದ್ದ ಕ್ಷೇತ್ರ ಮಂಧರಗಿರಿ ಕಳತೆಗೆದು-ಸಸಿನೆಡುವ ಕಾರ್ಯಕ್ರಮ

ತುಮಕೂರು : ಯುವ ಜೈನ್ ಮಿಲನ್ ಬೆಂಗಳೂರು ವಿಭಾಗ ಮತ್ತು ಸುಹಾಸ್ತಿ ಯುವ ಜೈನ್ ಮಿಲನ್ ವತಿಯಿಂದ ಖ್ಯಾತ ಚಿತ್ರ ಶಿಲ್ಪಾಕಲಾವಿದರಾದ
ಜಿನೇಂದ್ರ ಎಂ.ಎಂ.ರವರ ನೆತ್ರತ್ವದಲ್ಲಿ ನಡೆದ ವಿಶ್ವ ಪರಿಸರದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಬೆಂಗಳೂರು ಉತ್ತರ ಜೈನ ಸಮಾಜದ ಕಾರ್ಯಕ್ರಮಗಳಾದ ಶ್ರೀ ಅಶೋಕ್ ಜೈನ್ ರವರು ಉದ್ಗಾಟಿಸಿದರು..
ನೂರಾರು ಸಂಖ್ಯೆಲ್ಲಿ ಭಾಗವಹಿಸಿದ್ದ ಜಿನ ಬಂಧುಗಳು ಚಂದ್ರಪ್ರಭ ತೀರ್ಥಂಕರ ಮೂರ್ತಿ ಆವರಣ, ಬಸದಿ ಆವರಣ, ಶಾಂತಿಸಾಗರ ಮಹಾರಾಜರ ಪಿಂಚಿ ಮಂದಿರ ಆವರಣ, ಉದ್ಯಾನವನಗಳಲ್ಲಿದ್ದ ಕಳೆ ಗಿಡಗಂಟೆಗಳನ್ನ ಕಿತ್ತು, ಪ್ಲಾಸ್ಟೀಕ್, ಕಸ ತೆಗೆದು, ಸ್ವಚ್ಛಗೊಳಿಸಿ, ಆವರಣದದಲ್ಲಿ ಉತ್ತಮ ಜಾತಿಯ ಗಿಡಗಳನ್ನು ನೆಟ್ಟು ನೀರೆರೆದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಡಿ.ಎಸ್. ಕುಮಾರ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರು, ತುಮಕೂರಿನ ಜಿನಬಂಧುಗಳು, ಜಿಲ್ಲಾ ಜಿನಸಮಾಜ, ಶೃತ ಜೈನಮಿಲನ್, ಶೃತ ಯುವ ಜೈನ್ ಯುವ ಮಿಲನ್, ಸದಸ್ಯರು ಬೆಂಗಳೂರು ಉತ್ತರ ಜೈನಮಿಲನ್ ಸುಹಾಸ್ತಿ ಜೈನ್ ಯುವ ಮಿಲನ್ ಸೇರಿದಂತೆ ಇನ್ನತರ ಜಿನ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ನಾಂದಿಯಾಡಿದರು. ಬೆಂಗಳೂರು ಯುವ ಜೈನ್ ಮಿಲನ್ ಕಾರ್ಯದರ್ಶಿ ಎಂ.ಎಂ. ಜಿನೇಂದ್ರ, ಸುಹಾಸ್ ಯುವ ಜೈನ್ ಮಿಲನ್ ಕಾರ್ಯದರ್ಶಿ ಧರ್ಮಪಾಲ್, ಶಾಶೃತ ನಿಧಿ ಲಿ., ಪದ್ಮಪ್ರಸಾದ್, ಜಯವರ್ಮ ಜೈನ್, ಶೃತ ಜೈನ್ ಮಿಲನ್ ವೈ.ಡಿ. ಶಾಮಲಾ ಧರಣೇಂದ್ರಯ್ಯ, ಅಧ್ಯಕ್ಷೆ ಚಂದ್ರಪ್ರಭ, ಪದ್ಮಸುರೇಂದ್ರ, ಶಾಂತಲಾ ಅಜಿತ್, ಶೃತ ಜೈನ್ ಯುವ ಮಿಲನ್ ಅಧ್ಯಕ್ಷೆ ಪೂಜಾ, ಅರಕೆರೆ ಪದ್ಮಶ್ರೀ, ಮೇಘನ, ಮಾನಸ, ಜಿಲ್ಲಾ ಜೈನ ಸಮಾಜದ ಉಪಾಧ್ಯಕ್ಷ ಜಿ.ಡಿ. ವರ್ಧಮಾನ, ನಿರ್ದೇಶಕರಾದ ಆನಂದ್, ವಿಜಯಕುಮಾರ್, ಸುನೀಲ್, ಶಾಂತೇಶ್, ಬಳ್ಳಾರಿ ಬಾಹುಬಲಿ, ಪದ್ಮಣ್ಣ, ಪಚ್ಚೇಶ್ ಜೈನ್, ಪೇಪರ್ ಪ್ರಸಾದ್ ಜೈನ್, ಕೆ.ವಿ. ವೀರೇಂದ್ರಕುಮಾರ್ ಭಾಗವಹಿಸಿದ್ದರು.


ನಂತರ ನಡೆದ ಕಾರ್ಯಕ್ರಮದಲ್ಲಿ..
ಚಿತ್ತಾ ಜಿನೇಂದ್ರ ಪ್ರತಿಜ್ಞಾ ವಿಧಿ ಬೋದಿಸಿದರು
ಧರ್ಮಪಾಲ್ ಅವರು ಮಾತನಾಡಿ ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ವತಿಯಿಂದ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಿ ಕೊಂಡು ಬರುತ್ತಿದ್ದೆವೆ ಇದಲ್ಲದೆ ಸುಹಾಸ್ತಿ ಯುವ ಜೈನ್ ಮಿಲನ್ ನ ಹಲವು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
 ತುಮಕೂರು ಜೈನ ಸಮಾಜದ ನಿರ್ದೇಶಕರಾದ ಆನಂದ್ ರವರು ವಂದನಾರ್ಪಣೆ ನಡೆಸಿ ಕೊಟ್ಟರು...






No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...