ಶಿವಪ್ಪ ನಾಯಕರ ಸಾಧನೆ

ಶಿವಪ್ಪ ನಾಯಕ ಶಿವಮೊಗ್ಗವನ್ನು ಆಳಿದ ಪ್ರಮುಖ ದೊರೆ ಈತ ಭಾರತದಲ್ಲಿ ಭೂಮಿಯ ಅಳತೆಗೆ ಮಾಪನವನ್ನು ಕಂಡುಕೊಂಡ ಮೊದಲ ದೊರೆ ಅಲ್ಲದೆ ಶಿಸ್ತಿಗೆ ಹೆಸರಾಗಿ ಶಿಸ್ತುಗಾರ ಶಿವಪ್ಪ ನಾಯಕ ಅಥವಾ ಶಿವಪ್ಪನಾಯಕನ ಶಿಸ್ತು ಎಂದು ಪ್ರಸಿದ್ದಿಯಾದವನು

ಇಂತಹ ಅಪ್ರತಿಮ ದೊರೆಯ ಕುರಿತಾದ ಒಂದು ಸ್ತಬ್ಧ ಚಿತ್ರವನ್ನು ರಚಿಸುವ ಜವಾಬ್ದಾರಿಯನ್ನು ಶಿವಮೊಗ್ಗ ಜಿಲ್ಲಾ ಪಂಚಾಯತ್ ನಮಗೆ ವಹಿಸಿತ್ತು ಆ ಸ್ತಬ್ಧಚಿತ್ರದ ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಅದರೊಂದಿಗೆ ಕೆಲವು ಶಿವಪ್ಪ ನಾಯಕನ ಸಾಧನೆಗಳನ್ನು ನಿಮ್ಮೊಂದಿಗೆ ಶೇರ್ ಮಾಡಿದ್ದೇನೆ ಸಮಯ ಸಿಕ್ಕಾಗ ಪೂರ್ತಿ ಓದಿ
1)ಶಿವಪ್ಪ ನಾಯಕನ ಆಳ್ವಿಕೆಯ  ಅವಧಿ ಸಾವಿರದ ಆರುನೂರ 45 ರಿಂದ ಸಾವಿರ 660
2) ಕೆಳದಿ ದೊರೆಗಳಲ್ಲಿ ಅತಿ ಶ್ರೇಷ್ಠ ಎಂದು ಪರಿಗಣಿಸಲಾಗಿದೆ
3)  ಬಿಜಾಪುರದ ಸುಲ್ತಾನರು ಹಾಗೂ ಪೋರ್ಚುಗೀಸರ ವಿರುದ್ಧ ಹೋರಾಡಿ ಜಯಗಳಿಸಿದವನು
4) ಕೃಷಿಗೆ ಉತ್ತೇಜನ ನೀಡುವುದರೊಂದಿಗೆ ಭೂಮಿ ಕಂದಾಯವನ್ನು ಐದು ವಿಭಾಗಗಳಾಗಿ ಮಾಡಿದ ಮೊದಲ ಅರಸ
5) ಮಹಮದ್ ರವರ ಕೋರಿಕೆಯಂತೆ ಭಟ್ಕಳದಲ್ಲಿ ಯುದ್ಧ ಮಾಡಿ ಜಯಗಳಿಸಿದ ನೆನಪಿಗೆ ಮಹಮದ್ ದಾರಿಗೆ ಹಾಗೂ ನವಾಯಿತ ಮುಸ್ಲಿಮರನ್ನು ಆಡಳಿತಾತ್ಮಕವಾಗಿ ನೇಮಕ ಮಾಡಿದ ಮೊದಲ ರಾಜ
6) ಭಟ್ಕಳದ ಜಾಮಿಯಾ ಮಸೀದಿ ಮೇಲಿರುವ ಚಿನ್ನದ ಕಳಸವು ಇವರ ಕೊಡುಗೆಯಾಗಿದೆ
7) ಭೂಮಿಯನ್ನು ಕೃಷಿ ಭೂಮಿಯನ್ನು ಅಳತೆ ಮಾಡಲು ಮಾಪನವನ್ನು ಆವಿಷ್ಕರಿಸಿದ ಮೊದಲ ದೊರೆ
8) ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದ್ದರು ಹಿಂದು ಮುಸ್ಲಿಂ ಕ್ರೈಸ್ತ ಧರ್ಮಗಳಿಗೆ ಪ್ರಾರ್ಥನೆಗಾಗಿ ಭೂಮಿಯನ್ನು  ನೀಡಿರುವುದು ಸಾಕ್ಷಿಯಾಗಿದೆ
9)  ಸಾಗರದ ಗಣಪತಿ ಕೆರೆಗೆ ಹೊಂದಿಕೊಂಡಂತಿರುವ ಮಸೀದಿ ಮತ್ತು ದೇವಸ್ಥಾನಕ್ಕೆ ಒಂದೇ ದ್ವಾರವಿದ್ದು ಸಾಗರಕ್ಕೆ ಭೇಟಿ ಕೊಟ್ಟ  ಕೊಟ್ಟಾಗಲೆಲ್ಲ ಏಕ ದ್ವಾರದಿಂದ ತೆರಳಿ ಎರಡು ಧರ್ಮದ ದೇವಾಲಯ ಮತ್ತು ಮಸೀದಿ ಗೆ ಪ್ರಾರ್ಥನೆ ಸಲ್ಲಿಸಿ ತೆರಳುತ್ತಿದ್ದು ಇವರ ಧರ್ಮ ಸಹಿಷ್ಣುತೆಗೆ ಈಗಲೂ ಸಾಕ್ಷಿಯಾಗಿದೆ
10) ಕರ್ನಾಟಕದ ದಕ್ಷಿಣ ಭಾಗದಲ್ಲಿ ಪೋರ್ಚುಗೀಸರ ಆಡಳಿತದಲ್ಲಿದ್ದ ಕೋಟೆ ಕೊತ್ತಲಗಳನ್ನು ಹೊಸ ಪಡಿಸಿಕೊಂಡು ತನ್ನ ಆಡಳಿತವನ್ನು ಸ್ಥಾಪಿಸಿದ
11) ಶಿವಮೊಗ್ಗ ಜಿಲ್ಲೆಯ   ಹೊಸನಗರ ತಾಲ್ಲೂಕು ಬಿದನೂರನ್ನು  ರಾಜ್ಯದಾನಿ ಯನ್ನಾಗಿ ಇಟ್ಟುಕೊಂಡು ಕೇರಳದ ಕಾಸರಗೋಡಿನ ವರೆಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದ
  ಇವರ ಬಗ್ಗೆ ಬರೆಯಬಹುದಾದ ಸಂಶೋಧಿಸಬೇಕು ಆದ ವಿಷಯಗಳು ಇನ್ನು ಹತ್ತು ಹಲವಿವೆ ಇನ್ನು ಮುಂದಾದರೂ ಸಂಶೋಧನೆಗಾಗಿ ಶಿವಪ್ಪ ನಾಯಕರ ಸಾಧನೆ ಜನಮಾನಸದ ಮನಸ್ಸನ್ನು ತಟ್ಟಲಿ
                       ಇಂತಿ ಚಿತ್ತಾ ಜಿನೇಂದ್ರ ಎಂ ಎಂ

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...