ಭರವಸೆಯ ಬೆಳಕು ಯುವ ಚಿತ್ರ ಕಲಾವಿದ ಶ್ರೀ ಸತೀಶ್ ಬಿರಾದಾರ

ಕಲೆಯ ಮೋಡಿಗಾರ, ಗಾರುಡಿಗನೆಂದೇ ಯುವಕರಲ್ಲಿ ಹೆಸರಾದ ಶ್ರೀ ಸತೀಶ ಪದ್ಮಣ್ಣ ಬಿರಾದಾರ ಅವರು 1977 ಬರಡು ಭೂಮಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಶ್ರೀ ಪದ್ಮಣ್ಣ ಮತ್ತು ಶ್ರೀಮತಿ ಸರೋಜಿನಿ ದಂಪತಿಗಳ ಉದರದಲ್ಲಿ ಜನಿಸಿದರು.
▶ ಬಡತನದ ಬೇಗೆಯಲ್ಲಿ ಬೆಂದು,ನೊಂದು ಕಲಾರಾಧನೆಗೆ ತೊಡಗಿದ ಸತೀಶ್ ಅವರ ಹಾದಿ ಸುಗಮವಾಗಿರಲಿಲ್ಲ .ಆದರೆ ಗುರಿ ಸಾಧಸಬೇಕೆಂಬ ಸದಾಶಯದಿಂದ ಛಲದಂಕ ಮಲ್ಲನಂತೆ ಸತತ ಪರಿಶ್ರಮದ ಬೆನ್ನು ಹತ್ತಿ ಕಲಾದೇವಿಯನ್ನು ವರಿಸಿಕೊಂಡು ,ಆರಾಧಿಸಿ, ಪೂಜಿಸಿ ,ಕಲೆಯ ಸಿರಿಯನ್ನು ಬೆಳಗಿಸಿದ ಮುಗ್ಧ ಯುವ ಕಲಾವಿದ.
▶ಶಿಕ್ಷಣ: ಧಾರವಾಡ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಫೈನ್ ಆಟ೯ ಪದವಿ.ಮೈಸೂರು ಕೆ ಎಸ್ ಒ ಯು ನಿಂದ ಮಾಸ್ಟರ್ ಆಫ್ ಫೈನ್ ಆರ್ಟ್ ಪದವಿಯನ್ನು ಪೂರೈಸಿದ್ದಾರೆ.
▶ 2 ಡಿ ಅನಿಮಟರ್ ಆಗಿ ಬೆಂಗಳೂರಿನಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿ ವಿವಿಧ ಸಂಸ್ಥೆಗಳಲ್ಲಿ ತಮ್ಮ ಸೇವೆ ಸಲ್ಲಿಸಿ ಈಗ ಸ್ವತಃ ಸ್ಟೂಡಿಯೋ ನಡೆಸುತ್ತಿದ್ದಾರೆ.
▶ ಸ್ವ ಆಲೋಚನೆಗಳಿಗೆ ಜೀವ ತುಂಬುವ ವಾಟರ್ ಕಲರ್ ಪೇಂಟಿಂಗ್ ಗಳ ಮೂಲಕ ಗ್ರಾಮೀಣ ಜೀವನ, ಧಾರ್ಮಿಕ ಆಚರಣೆ ,ನಿಸರ್ಗ ಸೌಂದರ್ಯ ಇದಕ್ಕೂ ಮಿಗಿಲಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮತ್ತು ಜಾಗೃತಿ ಮೂಡಿಸುವ ಕಲಾಕೃತಿಗಳನ್ನು ಸತೀಶ್ ಅವರು ತಮ್ಮ ಕಲಾ ಕುಂಚದಲ್ಲಿ ಅರಳಿಸಿ ಕಲಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ .
▶ಅಷ್ಟೇ ಅಲ್ಲ ಅವರ ಹಂಪಿ ವಿರೂಪಾಕ್ಷ ದೇವಾಲಯ, ಗೌಳಿ ಗಲ್ಲಿ ಚಿತ್ರಗಳು ಸೇರಿದಂತೆ ಸತೀಶ್ ಅವರ ಚಿತ್ರಗಳು ವಿಧಾನ ಸೌಧ ಡಿಪಿಎಆರ್ ಶಾಖೆಯಲ್ಲಿ ಸ್ಥಾನ ಪಡೆದಿವೆ ಎಂಬುದು ಸಾಮಾನ್ಯದ ಮಾತಲ್ಲ .
▶ಏಕ ಪ್ರದರ್ಶನಗಳು :1999 ರಿಂದ 2017 ರವರೆಗೆ ಧಾರವಾಡ ,ಕರ್ನಾಟಕ ಜೈನ ಭವನ ಬೆಂಗಳೂರು ಇತ್ಯಾದಿ ಕಡೆಗಳಲ್ಲಿ ತಮ್ಮ  ಪ್ರದರ್ಶನ ಮಾಡಿದ್ದಾರೆ.
▶ಸಮೂಹ ಪ್ರದರ್ಶನಗಳು: 1998ರಿಂದ2018ರವರೆಗೆ ಧಾರವಾಡ,ಮೈಸೂರು ದಸರಾ, pune ,nagpur, ಕರ್ನಾಟಕ ಚಿತ್ರ ಕಲಾ ಪರಿಷತ್ತು ಬೆಂಗಳೂರು, ಬೆಳಗಾವಿಗಳಲ್ಲಿ ಪ್ರದರ್ಶಿಸಿ ಜನಮೆಚ್ಚುಗೆ ಪಡೆದಿದ್ದಾರೆ
🥇ಪ್ರಶಸ್ತಿಗಳು🥇
👉 ರಾಷ್ಟ್ರಮಟ್ಟದ ಪ್ರೊಫೆಸರ್ ಟಿ ಎಸ್ ಮೆಹತಾ ಪ್ರಶಸ್ತಿ ,ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ, ಅಖಿಲ ಭಾರತ ನಾಗರಿಕ ಕೇಂದ್ರ ಔವರಂಗಾಬಾದ ಆದರ್ಶ ಶಿಕ್ಷಕ ಪ್ರಶಸ್ತಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿ ಹಾಗೂ ಬಹುಮಾನದಿಂದ ಪುರಸ್ಕೃತರಾಗಿದ್ದಾರೆ .
🏆ದಿನಾಂಕ 11ರಿಂದ 15 ಜುಲೈ 2018ರಂದು ನಡೆದ ಚಿತ್ರಕಲಾ ಪರಿಷತ್ತಿನಲ್ಲಿನ(ಬೆಂಗಳೂರು)
ಷೋನಲ್ಲಿ 40 ಅಭ್ಯರ್ಥಿಗಳು ಭಾಗಿಯಾಗಿದ್ದರು ಅದರಲ್ಲಿ ಇವರು Best plein Air painter ಎಂಬ ಪ್ರಶಸ್ತಿ ಪಡೆದು ಕಲಾವಿದರ ಕಣ್ಮಣಿ ಆಗಿದ್ದಾರೆ
▶ಭರತ-ಬಾಹುಬಲಿ ಕತೆಯನ್ನು ಕಲೆಯಲ್ಲಿ ಅರಳಿಸಿ ಪ್ರದಶಿ೯ಸುವ ಚಲನಚಿತ್ರ ಯೋಜನೆಯೊಂದನ್ನು ಸಿದ್ದಪಡಿಸುವ ಕನಸುಗಳನ್ನು ಹೊತ್ತು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಅವರ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ .💐
(ಡಾ.ಅಜಿತ ಮುರುಗುಂಡೆ ಅಧೀನ ಕಾರ್ಯದರ್ಶಿ,ವಿಧಾನ ಸೌಧ ,ಬೆಂಗಳೂರು.9448936461)

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...