ಸೂಕ್ಷ್ಮ ಶಿಲ್ಪ ಕಲಾವಿದ ಸಚಿನ್

ಸೂಕ್ಷ್ಮ ಶಿಲ್ಪ ಕಲಾವಿದ ಸಚಿನ್ 

👌ನಮ್ಮ ಜೈನ ಸಮಾಜದಲ್ಲಿ ಪ್ರತಿಭೆ ಹಾಗೂ ಸಾಮರ್ಥ್ಯಗಳಿಗೆ ಏನು ಕೊರತೆ ಇಲ್ಲ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿ ಆಯ್ದುಕೊಂಡ ವ್ಯಕ್ತಿ ಚಿತ್ರ
➡ಶ್ರೀ ಸಚಿನ್ ಅವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಸೂಕ್ಷ್ಮ ಶಿಲ್ಪ ಕಲಾಕಾರ. ಕಲಾವಿದರಾದ ಶ್ರೀ ಸಚಿನ್ ಸಂಘೆ ಎಂ ಜೆ ಅವರು 1989ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮುದುಗೆರೆ ಗ್ರಾಮದಲ್ಲಿ ಜನಿಸಿದರು . ಶ್ರೀ ಎಂ ಜೆ ಜಯಕೀರ್ತಿ ಹಾಗೂ ಶ್ರೀಮತಿ ಚಂದ್ರಕಲಾ ಅವರ ಹೆಮ್ಮೆಯ ಸುಪುತ್ರರು .
➡ಶಾಲೆಗಳಲ್ಲಿ ಕಪ್ಪು ಬೋರ್ಡಿನ ಮೇಲೆ ಬರೆಯಲು ಬಳಸುವ ಚಾಕ್ ಫೀಸನಲ್ಲಿ ಸುಂದರವಾದ ಕಲಾಕೃತಿಯನ್ನು ಮೂಡಿಸುವ ಅಲ್ಲದೆ ಪೆನ್ಸಿಲ್ ಸೀಸದ ಮೇಲೂ ಸಹ ಕಲೆ ಮೂಡಿಸುವ ಶಿಲ್ಪ ಕಲಾವಿದ .ಈ ಕಲೆಯನ್ನು ಸ್ವತಃ ತಾವೇ ಕಲಿತವರು. ವಿದ್ಯಾರ್ಥಿಯಾಗಿದ್ದಾಗಲೇ ಈ ಕಲೆಯನ್ನು ಶುರು ಮಾಡಿದರೂ ಅದನ್ನು ಪೋಷಿಸಿ ಪಾಲಿಸಿಕೊಂಡು ಬರುವುದಲ್ಲದೆ ಅದಕ್ಕೆ "ಚಾಕೃತಿ"ಎಂದು ಹೆಸರಿಟ್ಟು ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಒಂದು ಕೊಡುಗೆಯನ್ನು ನೀಡಿದರು
➡ ಕೆತ್ತನೆಗೆ ಹಿಡಿಯಿರುವ ಸೂಜಿಯನ್ನು ಬಳಸುತ್ತಾರೆ. ಯಾವುದೇ ಲೆನ್ಸ್ ಗಳನ್ನು ಬಳಸುವುದಿಲ್ಲ .ಬರಿಗಣ್ಣಿನಲ್ಲಿ ಅದನ್ನು ಬಿಡಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ .ಒಂದು ಶಿಲ್ಪವನ್ನು ಕೆತ್ತಲು ಕನಿಷ್ಠ ಎಂಟು ಹತ್ತು ಗಂಟೆಗಳು ಬೇಕು. ಕೃತಿಗಳು ಕ್ಲಿಷ್ಟವಾದರೆ ಹೆಚ್ಚು ಸಮಯ ಬೇಕಾಗುತ್ತದೆ.
➡ ಕಳೆದ ಆರು ವರ್ಷದ ಅವಧಿಯಲ್ಲಿ ಎರಡು ನೂರಕ್ಕೂ ಹೆಚ್ಚು ಕೃತಿಗಳನ್ನು ಬಿಡಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ .
👌"ಪ್ರಮುಖ ಚಾಕೃತಿಗಳ" 24 ತೀರ್ಥಂಕರರ ಮೂರ್ತಿಗಳು, ಗಣಪತಿ ,ದುರ್ಗಾ ,ಹನುಮಂತ, ಶಿರಡಿ ಸಾಯಿಬಾಬಾ, ಕನ್ನಡದ ಜ್ಞಾನಪೀಠ ಪ್ರಶಸ್ತಿ ಪಡೆದ ಪುರಸ್ಕೃತರು ,ಡಾ.ರಾಜಕುಮಾರ ,ಎಂ ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ ,ಶ್ರೀ ಶಿವಕುಮಾರ ಸ್ವಾಮೀಜಿ, ನರೇಂದ್ರಮೋದಿ ,ಪ್ರಣವ ಮುಖರ್ಜಿ ,ಸಚಿನ್ ತೆಂಡೂಲ್ಕರ್ ಮೇರು ವ್ಯಕ್ತಿಗಳ ಸೂಕ್ಷ್ಮ ಶಿಲ್ಪ ಕೃತಿಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.
👍 ಐತಿಹಾಸಿಕ ಹಂಪಿ ಕಲ್ಲಿನ ರಥ ,ತಾಜ್ಮಹಲ್ ,ದಂಡಿ ಉಪ್ಪಿನ ಸತ್ಯಾಗ್ರಹ ಘಟನೆಗಳನ್ನು ಹಾಗೂ ವಿಶ್ವ ತಾಯಂದಿರ ದಿನ, ತಂದೆಯರ ದಿನ ,ಸ್ನೇಹಿತರ ದಿನ ,ಯೋಗಗಳ ಪ್ರಯುಕ್ತ ವಿಶೇಷ ಕೃತಿಗಳನ್ನು ರಚಿಸಿದ್ದಾರೆ.
⭐" ಪೆನ್ಸಿಲ್ ಸೀಸದ ಕಲಾಕೃತಿಗಳು "
ಮಹಾವೀರ ತೀರ್ಥಂಕರರ, ರಾಷ್ಟ್ರ ಲಾಂಛನ, ಕ್ರಿಕೆಟ್ ವಿಶ್ವಕಪ್ ಇತ್ಯಾದಿ ಮಹತ್ವದಾಗಿವೆ.
🌞ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ತಮ್ಮ ಇಪ್ಪತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ .ಅವುಗಳಲ್ಲಿ ಮುಂಬಯಿ ಬೆಂಗಳೂರು ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತು ,ಕನ್ನಡ ಚಿತ್ರಕಲಾ ಪರಿಷತ್ತು ,ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮ ಇತ್ಯಾದಿಗಳು.
✒ ರಾಜ್ಯದ ಕನ್ನಡ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಇವರು ಲೇಖನಗಳು ಸಾಪ್ತಾಹಿಕ ಪಾಕ್ಷಿಕ ಮಾಸಿಕ ದೈನಿಕ ಪತ್ರಿಕೆಗಳಲ್ಲಿ ,ಹೊಂಬುಜ ಜೈನ ಮಠದ ಗುರುದೇವ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
➡ಕನ್ನಡದ ಎಲ್ಲ ಪ್ರಮುಖ ಸುದ್ದಿವಾಹಿನಿಗಳಲ್ಲಿ ತಮ್ಮ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಸಂದರ್ಶನಗಳನ್ನು ನೀಡಿದ್ದಾರೆ .
👌ಪ್ರಶಂಸೆಗಳು.... ಕೇಂದ್ರ ಸಚಿವರಾದ ಶ್ರೀ ಅನಂತ್ ಕುಮಾರ್, ಭಾರತದ ಗಣವೆತ್ತ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್, ಭಾರತದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ,ಸಚಿನ್ ತೆಂಡೂಲ್ಕರ್, ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ,ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ , ಲೋಕಸಭಾಧ್ಯಕ್ಷರು ಸುಮಿತ್ರಾ ಮಹಾಜನಯ,ಅಮಿತಾ ಬಚ್ಚನ್ ,ಕೇಂದ್ರ ಸಚಿವೆ ಸ್ಮತಿ ಇರಾನಿ, ರಾಹುಲ್ ದ್ರಾವಿಡ್ cisco ಸಂಸ್ಥೆಯ ಚೇರ್ಮನ್ ಜಾನ್ ರಾಬಿನ್ಸ್ ,ಗಿರೀಶ್ ಕಾಸರವಳ್ಳಿ ,ಪಿ ಶೇಷಾದ್ರಿಇನ್ನೂ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
🥇 ಪ್ರಶಸ್ತಿಗಳು🥇
 ಭಗವಾನ್ ಬಾಹುಬಲಿ ಮಸ್ತಕಾಭಿಷೇಕ 2018ರ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ರಾಷ್ಟ್ರೀಯ ಜೈನ ಯುವ ಸಮ್ಮೇಳನದಲ್ಲಿ ಪರಮಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಂದ ಪಡೆದ ಯುವ ಪ್ರಶಸ್ತಿ ,ಗೌರಿಬಿದನೂರು ತಾಲೂಕು ವತಿಯಿಂದ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಗಣರಾಜ್ಯೋತ್ಸವದ ಸನ್ಮಾನ, ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಪೂಜ್ಯ ಶ್ರೀಗಳಿಂದ ಪ್ರತಿಭಾ ಪುರಸ್ಕಾರ, ಬೆಂಗಳೂರು ಉತ್ತರ ಜೈನಸಮಾಜ ,ಗೌರಿಬಿದನೂರು ಜೈನ ಸಮಾಜದ ವತಿಯಿಂದ ಸನ್ಮಾನಿಸಿದ್ದಾರೆ
💐 ಇವರ ಸೂಕ್ಷ್ಮ ಶಿಲ್ಪ ಕಲಾಕೃತಿಗಳು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಹಾಗೂ ಉತ್ತರೋತ್ತರ ಪ್ರಸಿದ್ಧಿ ಪಡೆಯಲಿ ಎಂದು ಜೈನ ನೌಕರರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ💐
(ಡಾ.ಅಜಿತ ಮುರುಗುಂಡೆ. ಅಧೀನ ಕಾಯ೯ದಶಿ೯.ವಿಧಾನಸೌಧ.ಬೆಂಗಳೂರು.9448936461)

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...