ಸದಭಿರುಚಿಯ ಚಿಂತಕ ಜಿನೇಂದ್ರ ಎಂ ಎಂ ರವರ ದಾರ್ಮಿಕ ಕೆಲಸ ಕಾರ್ಯಗಳ ಒಂದು ಸಣ್ಣ ಪರಿಚಯ

ಜಿನೇಂದ್ರ ಎಂ ಎಂ ಇವರ ಹೆಸರು ಕೇಳಿದರೆ ಕರ್ನಾಟಕದ ಜೖನ ಯುವ ಸಮುದಾಯ ಕ್ಕೆ ಚಿರಪರಿಚಿತರು. ಹಾಗಂತ ಇವರು ಯಾವ ಸೆಲಬ್ರಿಟಿಯೊ ಅಲ್ಲ ಸಾಮಾನ್ಯ ವ್ಯಕ್ತಿ ಅವರ ಕಲಾಚಟುವಟಿಕೆಯಿಂದ ಪರಿಚಿತರಾದರು. ಹೌದು ಹೇಳಿಕೊಳ್ಳದೆ ಅವರ ದೈನಂದಿನ ಕೆಲಸಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರ ಧರ್ಮಸೇವೆಯ ಸಣ್ಣದೂಂದು ಪರಿಚಯ.
        ಮಂದಾರಗಿರಿಯಲ್ಲಿ ನಡೆದ ಜೈನ್ ಮಿಲನ್ ಸಮಾವೇಶ ದಲ್ಲಿ ಜಿನೇಂದ್ರ ಎಂ ಎಂ ರವರನ್ನು ಸನ್ಮಾನಿಸಲಾಯಿತು, ಈ ಸಂದರ್ಭ ದಲ್ಲಿ ತಾವೊಂದು ಮಿಲನ್ ಸ್ಥಾಪಿಸಬೇಕು ಅಂದು ಕೊಂಡಿದ್ದ ಅವರಿಗೆ ಕಮ್ಮಿ ಸಂಖ್ಯೆಯಲ್ಲಿದ್ದ ಆಗಿನ್ನೂ ಬೆಂಗಳೂರಿಗೆ ಬಂದ ಅವರ ಸ್ನೇಹಿತರನ್ನು ಸೇರಿಸಿಕೊಂಡು ಜೈನ್ ಮಿಲನ್ ಸ್ಥಾಪನೆಯ ಚರ್ಚೆ ನಡೆಸಿದರು. ಆದರೇ ಜೈನ್ ಮಿಲನ್ ನಲ್ಲಿ ಕನಿಷ್ಠ 15 ಜನ ಇರಬೇಕು ಎಂಬ ವಿಷಯ ತಿಳಿದು ಕೇವಲ 9 ಜನ ಇದ್ದ ಇವರ ತಂಡ ಪ್ರಚ್ಛನ್ನ ಎಂಬ ಜೈನ್ ಅಸೋಸಿಯೇಷನ್ ಸ್ಥಾಪಿಸಿ ಇವರ ಅಧ್ಯಕ್ಷತೆ ಯಲ್ಲಿ ಸತತ 4 ವರ್ಷ ರಾಜ್ಯ ಮಟ್ಟದ ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆ ಮಾಡಿ ಸೈ ಎನಿಸಿಕೊಂಡವರು. ನಂತರ ಸ್ನೇಹಿತರ ಬಳಗ ದೊಡ್ಡದಾದಂತೆ ಸುಹಾಸ್ತಿ ಎಂಬ ಹೆಸರಿನ ಯುವ ಜೈನ್ ಮಿಲನ್ ಒಂದನ್ನು ಸ್ಥಾಪಿಸಿ ರಾಜ್ಯ ಜೈನ  ಯುವ ಸಮುದಾಯ ದ ಗಮನ ಸೆಳೆದರು. ಮಹಾವೀರ ಜಯಂತಿ ಸಂದರ್ಭ ದಲ್ಲಿ ಇವರು ರಚಿಸಿರುವ ಟ್ಯಾಬ್ಲೂಗಳು ಆಗಾಗ online media ಗಳಲ್ಲಿ share ಆಗಿರುತ್ತದೆ. ಹೌದು ಇವರ ಸತತ ಆರೇಳು ವರ್ಷ ಗಳಿಂದ ಕುರುಬರಳ್ಳಿ, ಕರ್ನಾಟಕ ಜೈನ್ ಭವನ, ಬೆಂಗಳೂರು ಉತ್ತರ ಜೈನ್ ಸಮೂಜ, ಮಹಾಲಕ್ಷ್ಮಿ ಲೇಔಟ್, ಮುಂತಾದ ಜೈನ ಸಂಘಟನೆಗಳಿಗೆ ಟ್ಯಾಬ್ಲೊ ಮಾಡಿಕೊಟ್ಟು ಬೆಂಗಳೂರಿಗರ ಮನ ಗೆದ್ದಿದ್ದಾರೆ.
ಕಳೆದ ಬಾರಿ ಮಹಾವೀರ ಜಯಂತಿ ಯ ಸಂದರ್ಭ ದಲ್ಲಿ ಇವರು ರಚಿಸಿ ಬಿಡುಗಡೆ ಮಾಡಿದ ಯುವ ಜೈನ್ ಮಿಲನ್ ಮಹಾವೀರ ಜಯಂತಿ ಲೋಗೋ ವೈರಲ್ ಆಗಿತ್ತು. ಅದಕ್ಕೂ ಹಿಂದೆ ಮಾಡಿದ ಜಿನಭಜನೆಯ ಲೋಗೋ ಜಿನಭಜನೆಗೋಸ್ಕರ ಮಾಡಿದ ವೇದಿಕೆ ಜೈನ್ ಮಿಲನ್ ನಲೋಂದು ಹೆಜ್ಜೆಗುರುತಿದ್ದಂತೆ. ಮಹಾವೀರ ಜಯಂತಿ ಸಂಧರ್ಭಕ್ಕೂಸ್ಕರ ಪ್ರತಿ ವರ್ಷವೂ ಒಂದಲ್ಲಾ ಒಂದು ವಿಶೇಷ ಕಲಾಕ್ರತಿಯನ್ನು ರಚಿಸುವ ಇವರು ಮಹಾವೀರ ಜಯಂತಿ ಅಂಗವಾಗಿ ರಚಿಸಿದ ಎರಡು ಸಮವಸರಣ ಕಲಾಕ್ರತಿಗಳು ಭಾರತೀಯ ಚಿತ್ರಕಲಾ ಶೈಲಿಯ ಮುಂದುವರೆದ ಭಾಗ ಎಂದರೆ ತಪ್ಪಾಗುವುದಿಲ್ಲ ಎಂದು ಖ್ಯಾತ ಕಲಾ ವಿಮರ್ಶಕ ರಾದ k v ಸುಬ್ರಮಣ್ಯರವರು ಹೇಳಿದ್ದರು. ಇದಲ್ಲದೆ ಯುವ ಜೈನ್ ಮಿಲನ್  ವತಿಯಿಂದ ಇವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳು ಜೈನ್ ಧರ್ಮದ ಮಟ್ಟಿಗೆ ಹೊಸತು ಎನ್ನಬಹುದು. ಇದಲ್ಲದೆ ಕಳೆದೆರಡು ವರ್ಷಗಳಿಂದ ಯುವ ಜೈನ್ ಮಿಲನ್ ಬೆಂಗಳೂರು ವಿಭಾಗದ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಜೈನ ಯುವ ಸಮುದಾಯದ ಆಶಾಕಿರಣ. ಇವರು ಶ್ರವಣಬೆಳಗೂಳದಲ್ಲಿ ನಡೆದ ಮಸ್ತಕಾಭಿಷೇಕ ಸಂದರ್ಭದಲ್ಲಿ ರಚಿಸಿದ ಸ್ತಬ್ದ ಚಿತ್ರಗಳು ನುರಾರು ಮಧ್ಯೆ ಕಣ್ಮನ ಸೆಳೆಯುತಿದ್ದವು. ಇದಲ್ಲದೆ ಅದೇ ಸಂದರ್ಭದಲ್ಲಿ ರಚಿಸಿದ ಬಾಹುಬಲಿಯ ಕಲಾಕೃತಿ ಮತ್ತು ಕಲಾಕ್ರತಿಯಲ್ಲಿನ ಭಗವಾನ್ ಬಾಹುಬಲಿಗೆ ಉದ್ದ ಕೂದಲನ್ನು ಬರೆದಿದ್ದರ ಬಗ್ಗೆ ಅವರು ನೀಡಿದ ವಿಮರ್ಷಾತ್ಮಕ ಉತ್ತರ ಆವರಿಗಿರುವ ಕಲಾ ಆಸಕ್ತಿ ಹಾಗೂ ವಿಭಿನ್ನವಾಗಿ ತೋರಿಸಬೇಕೆನ್ನುವ ಅಭಿರುಚಿಯನ್ನ ಎತ್ತಿ ತೋರಿಸುತ್ತದೆ. ಆನಂತರ ಸೋಂದ ಜೈನ ಮಠದಲ್ಲಿ ನಡೆದ  ಪಂಚಕಲ್ಯಾಣ ಸಂದರ್ಭದಲ್ಲಿ ಪ್ರಕ್ರತಿ ಚಿತ್ರ ಶಿಬಿರದ ನೇತೃತ್ವ ವಹಿಸಿದ್ದರು.  ಅಲ್ಲಿ ಕಲಾವಿದರ ತಂಡ ಹಾಗೂ ಇವರು ರಚಿಸಿದ ಕಲಾಕೃತಿಗಳು ಕಣ್ಮನ ಸೆಳೆದಿದ್ದವು. ಈ ಸಂದರ್ಭದಲ್ಲಿ ಇವರು ರಚಿಸಿದ ಕುಷ್ಮಾಂಡಿನಿ ದೇವಿಯ ಕಲಾಕೃತಿ ಕರ್ನಾಟಕದದ್ಯಾಂತ what's app group  ಗಳಲ್ಲಿ ಹರಿದಾಡಿ Facebook ನಲ್ಲೂ ಸದ್ದು ಮಾಡಿತ್ತು. ಇವರ ಸಾಧನೆಯನ್ನು ಗುರುತಿಸಿ ಜೈನ ಸಮುದಾಯವು ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸುತ್ತಾ ಬಂದಿದೆ. ಮೂಡಬಿದರೆಯ ಜೈನ ಮಠದಿಂದ ತ್ರಿಭುವನಕಲಾ ಪುರಸ್ಕಾರ, ಶ್ರವಣಬೆಳಗೂಳ ಜೈನ ಮಠದಿಂದ ಆದರ್ಶ ಯುವ ಪ್ರಶಸ್ತಿ,  ಮಂದಾರಗಿರಿಯಲ್ಲಿ ನಡೆದ ಜೈನ್ ಮಿಲನ್ ಸಮಾವೇಶದಲ್ಲಿ ಸನ್ಮಾನದಿಂದ ಹಿಡಿದು ಸಾಗರದಲ್ಲಿ ಇತ್ತೀಚೆಗೆ ನಡೆದ ಜಿನೋತ್ಸವ ಕಾರ್ಯಕ್ರಮದ ವರೆಗೆ ಸುಮಾರು 40 ಕ್ಕೂ ಹೆಚ್ಚು  ಜೈನ ಸಂಘಟನೆಗಳು ಸನ್ಮಾನಿಸಿವೆ. ಇದು ಇವರಿಗೆ ಜೈನ ದರ್ಮಿಯರು ನೀಡಿದ ಪ್ರಶಸ್ತಿ ಪುರಸ್ಕಾರಗಳು ಹಾಗೂ ಅವರು ಧರ್ಮಕ್ಕೊಸ್ಕರ ಮಾಡಿದ ಕೆಲಸ ಕಾರ್ಯಗಳ ವಿವರವಷ್ಟೇ. ಇವರು ಕಲಾಕ್ಷೇತ್ರದಲ್ಲಿ ಮಾಡಿದ ಸಾಧನೆ ಇನ್ನಷ್ಟಿದೆ. ಅದನ್ನು ಹೇಳುವುದಕ್ಕೆ ಸಮಯ ಸಾಲಲ್ಲ . ಅವರಿಗೆ ಉತ್ತರೊತ್ತರವಾದ ಯಶಸ್ಸು ಸಿಗಲಿ.

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...