ಬನ್ನಿ ಒಂದಸಲ ಈ ಹಳೇಬೀಡಿನ ಶ್ರೀ ಪಾರ್ಶನಾಥರ ದರ್ಶನ ಮಾಡೋಣಾ‌.





ಜೈನ ದರ್ಶನ
ಹಾಂ!
ಬೆಲೂರ ಅಂದಕ್ಷಣ ನೆನಪಿಗೆ ಬರುವುದು ಶಿಲಾಬಾಲಿಕೆ.ವಿಷ್ಣುವರ್ಧನ್ ಶಾಂತಲೆ, ಚೆನ್ನಕೇಶವ ದೇವಾಲಯ.
ಅದರೆ ನನಗೆ ಬೇಲೂರು ಹಳೆಬೀಡಿನ ಶಿಲ್ಪಕಲೆಯ ಅದ್ಬುತ ಅನ್ನುತ್ತಿದ್ದೆ! ಯಾವಾಗ ಹಳೇಬೀಡಿನ ಶ್ರೀ ಪಾರ್ಶನಾಥ ಮಂದಿರ ಒಳಗೆ ಪ್ರವೇಶ ಮಾಡಿದೆ .ಎಲ್ಲಾ ಆಯಾಸ ,ಎಲ್ಲಾ ಕ್ಷೇತ್ರಕ್ಕೂ ಮಿಗಿಲಾಗಿ ನನಗೆ ಕಾಣಿತು. ಸಾಕಷ್ಟು ಜನ ಪ್ರವಾಸ ಕೈಗೊಂಡಾಗ ,ಅಥವಾ ಯಾತ್ರೆ ಕೈಗೊಂಡಾಗ ಒಂದಿಷ್ಟು ಹೆಸರು ಮಾಡಿರುವ ಕ್ಷೇತ್ರ ನೋಡಿಕೊಂಡು ತೆರಳುತ್ತಾರೆ. ಬೇರೆಬೇರೆ ಸ್ಥಳದ ಕಡೆಗೆ ಹೆಚ್ಚಿನ ಗಮನ ಮಹತ್ವ ಕೊಡದೆ ಮುಂದೆ ಗಡಿಬಿಡಿಯಲ್ಲಿ ಹೊಗುತ್ತಾರೆ .ಉದಾಹರಣೆಗೆ ಜೊಗಪಾಲ್ಸ ಹೊಗುತ್ತಾರೆ ,ಅದರೆ ಅದಕ್ಕಿಂತಲೂ ಅದ್ಬುತ ರಮಣೀಯವಾದ ಸಾಕಷ್ಟು ಬರಚುಕ್ಕೆ ,ಗಗನಚುಕ್ಕಿ,ಉಂಚ್ಚಳ್ಳಿ ಪಾಲ್ಸ .ಹೀಗೆ ಸಾಗುವಾಗ ಸಾಕಷ್ಟು ಪ್ರವಾಸಿ ತಾಣಗಳು ಕೆಲವೇ ಕಿಮೀ ಅಂತರ ಇದ್ದರು ನೊಡದೆ ಹೊಗುತ್ತಾರೆ.ಜೊಗಪಾಲ್ಸ ಹೊಗುತ್ತಾರೆ ವಡನಬೈಲು ಕೇವಲ ಹತ್ತು ಹದಿನಾಲ್ಕು ಕಿಮೀ ಅಂತರ ಇರುತ್ತದೆ ಆ ಕ್ಷೇತ್ರ ನೆನಪಿಗೆ ಬರುವುದೆ ಇಲ್ಲ‌.ಗೆರುಸೊಪ್ಪು ಕ್ಷೇತ್ರ ಹೀಗೆ ಅತೀ ಸಮೀಪ ಇದ್ದರು ನೊಡಲು ಅಸಕ್ತಿ ತೋರುವುದಿಲ್ಲ. ಇರಲಿ ವಿಷಯಕ್ಕೆ ಬರುತ್ತೇನೆ...
ಹಳೇಬೀಡು ಬಿಂದಿದ್ದಿರಿ.ಅಥವಾ ಬರುವವರು ಇದ್ದರೆ! .ಅದರ ಹಿಂದಗಡೆ ಅರ್ಧ ಕಿಲೋ ಮೀಟರ್‌ ಅಂತರದಲ್ಲಿ  ಅಪ್ರತೀಮ ,ಭಗವಾನ್ ಬಾಹುಬಲಿ ನಿಂತಹಾಗೆ ನಮಗೆ ಸ್ವಾಗತಿಸುವ ಶ್ರೀ ಭಗವಾನ್‌ ಪಾರ್ಶನಾಥರ ದರ್ಶನವಾಗುತ್ತದೆ. ನೋಡಿದ ತಕ್ಷಣ ಮನಸ್ಸು ಶಾಂತ ,ಸಂತಸವಾಗುತ್ತದೆ.
ಹಳೇಬೀಡು ಕಲೆಯ ತವರೂರು ಅದೆಷ್ಟೋ ಪುರಾತನ ಮಂದಿರಗಳು ,ಶಿಲಾಶಾಸನಗಳು ಬೇಲೂರಿನಲ್ಲಿ ಕೂಡ ಜೈನ ,ಹಿಂದುಗಳ ಸಮಾಗಮ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಣುತ್ತೇವೆ. ಅದರೆ ಜೈನ ಮಂದಿರ ಮಾತ್ರ ಹಳೇಬೀಡಿನ ಅತ್ಯಂತ ಸೂಕ್ಷ್ಮ ,ಕಲೆಯ ನೈಪುಣ್ಯತೆಯನ್ನು ಸಾರುವ ಏಕೈಕ ಜೈನ ಮಂದಿರವಿದು ,ಇಲ್ಲಿವರಗೆ ನಾನು ನೋಡಿದ ಹಾಗೆ. ಹಳೇಬೀಡಿನ ಈ ಪಾರ್ಶನಾಥ ಮಂದಿರವನ್ನು *ದ್ಯಾಸೋಜಾ*
*ಲಿಂಗಣ್ಣಾಚಾರಿ*
*ಮಲ್ಲಣ್ಣಾಚಾರಿ* ಕೆತ್ತಿದನೆಂದು ಶಿಲಾಶಾಸನಗಳು ಇವೆ.
ಮಂದಿರದಲ್ಲಿ ವಿಶಾಲವಾದ ಚೌರಂಗ ,ಬಲ ಎಡಬದಿಯಲ್ಲಿ ಪದ್ಮಾವತಿ ,ಧರಣೇಂದ್ರರ ಸ್ಥಾಪನೆ ಆಗಿತ್ತು ಈಗ ಅಲ್ಲಿ ಕಾಣುವುದಿಲ್ಲ ಮತ್ತೆ ಈ ನಾಲ್ಕು ಕಂಬಗಳು ಅದರ ಕೆತ್ತನೆ ನೋಡಿದರೆ ಖಡ್ಗದ ಅಲಗಿನಂತೆ ಅಷ್ಟು ಹರಿತವಾಗಿ, ನುಣಪಾಗಿ ಕೆತ್ತನೆ ಆಗಿದೆ.ಜೊತೆಯಲ್ಲಿ ನಾಲ್ಕು ಕಂಬಗಳಲ್ಲಿ ನಮ್ಮ ಪ್ರತಿಬಿಂಬ ಕಾಣುತ್ತದೆ.
ಒಂದನೆಯ ಬಲಕಂಬದಲ್ಲಿ ನಮ್ಮ ಪ್ರತಿಬಿಂಬ ಎರಡು ಪ್ರತ್ಯೇಕವಾಗಿ ಕಾಣುತ್ತದೆ.
ಎರಡನೇ ಎಡ ಕಂಬದಲ್ಲಿ ಪ್ರತಿಬಿಂಬದಲ್ಲಿ ಅಂದರೆ ಕನ್ನಡಿ ಹಾಗೆ ಸ್ಪಷ್ಟವಾಗಿ ಅವರು ತೊಟ್ಟ ಬಟ್ಟೆಯ ಬಣ್ಣ ಕಾಣುತ್ತದೆ.
ಇನ್ನೂ ಮೂರನೆಯ ಬಲಕಂಬ ಸ್ವಲ ಮಸುಕಾಗಿತ್ತು .ಅಲ್ಲಿ ಸ್ಪಷ್ಟವಾಗಿ ಎನು ಗೊಚರಿಸುವದಿಲ್ಲ.
ನಾಲ್ಕನೇಯ ಕಂಬ ನಮ್ಮ ಪ್ರತಿಬಿಂಬ ತಲೆ ಕೆಳಗಾಗಿ ಕಾಣುತ್ತದೆ. ಎಲ್ಲಾ ನಾಲ್ಕು ಕಂಬಗಳಲ್ಲಿ ಸಂಗೀತ ಹೊರಹೊಮ್ಮುತ್ತದೆ.ಅಷ್ಟು ತೆಳುವಾದ ಪದರಿನಿಂದ ಕೂಡಿದ ಕಂಬಗಳು ಇವು. ಇಷ್ಟೆಲ್ಲಾ ಅದ್ಬುತ ಜಿನಮಂದಿರ ಇದ್ದರೂ ಕೂಡ ಅಲ್ಲಿ ಜೈನ ಕುಟುಂಬ ಎರಡು ಮನೆಗಳು ಮಾತ್ರ.ಅವರೆ ಎರಡು ಬಸದಿಯನ್ನು ನೊಡಿಕೊಳ್ಳುತ್ತಾರೆ. ಇದು ಮುಜರಾಯಿ ಆಡಳಿತದಲ್ಲಿ ಇದೆ.ಅದರ ನಿರ್ವಹಣೆಯಲ್ಲಿ ಅಲ್ಲಿನ ಪಂಡಿತರು ಜೀವನ ಸಾಗಿಸುತ್ತಿದ್ದಾರೆ .ಅಲ್ಪಸ್ವಲ್ಪ ನಮ್ಮ ಜನ ದರ್ಶನ ಬಂದರೆ ಅವರಿಗೂ ಖುಷಿ ,ಸಂತಸ....
ಬನ್ನಿ ಒಂದಸಲ ಈ ಹಳೇಬೀಡಿನ ಶ್ರೀ ಪಾರ್ಶನಾಥರ ದರ್ಶನ ಮಾಡೋಣಾ‌.ಮಾಡುವರಿಗೆ ಮಾಹಿತಿ ತಿಳಿಸೋಣಾ.
ದರ್ಶನ ಕರ್ಮ ಕಳೆಯೋಣಾ.
ದರ್ಶನದ ಫಲ ಪಡೆಯೋಣಾ.
ಜೈಜಿನೇಂದ್ರ

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...