ಶಿವಮೊಗ್ಗದ ಬಗ್ಗೆ ನಿಮಗೆ ಗೊತ್ತಿಲ್ಲದ ಪ್ರಮುಖ ಮಾಹಿತಿಗಳು


ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. 3ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: 4ನೇ ಶತಮಾನದಲ್ಲಿ ಕದಂಬರು, 6ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, 8ನೇ ಶತಮಾನದಲ್ಲಿ ರಾಷ್ಟ್ರಕೂಟರು, 11ನೇಯದರಲ್ಲಿ ಹೊಯ್ಸಳರು ಮತ್ತು 15ನೇ ಶತಮಾನದಲ್ಲಿವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು 16ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. 17ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.
ಪ್ರವಾಸೀ ತಾಣಗಳು
ಜೋಗದ ಜಲಪಾತ
ಚಂದ್ರಗುತ್ತಿ "ಶ್ರೀ ರೇಣುಕಾಂಬ ದೇವಸ್ಥಾನ" ಮತ್ತು ಕೋಟೆ.
12ನೇ ಶತಮಾನದ ಲಕ್ಷ್ಮೀ ನರಸಿಂಹ ಸ್ವಾಮೀ ದೇವಸ್ಥಾನ, ಭದ್ರಾವತಿ
ಲಿಂಗನಮಕ್ಕಿ ಅಣೆಕಟ್ಟು
ವನಕೆ-ಅಬ್ಬೆ ಜಲಪಾತ
ಭದ್ರಾ ನದಿ ಯೋಜನೆ, ಲಕ್ಕವಳ್ಳಿ
ತು೦ಗಾ ನದಿ ಯೋಜನೆ,ಗಾಜನೂರು ಅಣೆಕಟ್ಟು,
ಆಗು೦ಬೆಯ ವಿಶ್ವಪ್ರಸಿದ್ದ ಸೊರ್ಯಾಸ್ತ.
ಮ೦ಡಗದ್ದೆಯ ಪಕ್ಷಿದಾಮ.
ಅ೦ಬುತೀರ್ಥ, ಶರಾವತಿಯ ಉಗಮ ಸ್ಥಾನ.
ಕು೦ದಾದ್ರಿ ಬೆಟ್ಟ.
ಕುಪ್ಪಳ್ಳಿಯ ಕವಿಶೈಲ.
ಕೋಟೆ ಶ್ರೀ ಸೀತಾರಾಮಾ೦ಜನೇಯ ಸ್ವಾಮಿ ದೇವಸ್ಥಾನ, ಶಿವಮೊಗ್ಗ.
ಕೂಡ್ಲಿ - ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಆಗುವ ಪ್ರದೇಶ.
ಹಿಡ್ಲುಮನೆ ಜಲಪಾತ (ನಿಟ್ಟೂರು)
ಸಿರಿಮನೆ ಜಲಪಾತ
ದಬ್ಬೆ ಜಲಪಾತ
ಚೀಲನೂರು ಗ್ರಾಮದ ಜೋಗದ ಜಲಪಾತ
ಕೊಡಚಾದ್ರಿ ಬೆಟ್ಟ
ಶಿವಪ್ಪನಾಯಕನ ಕೋಟೆ (ಬಿದನೂರು ನಗರ)
ಸಿಗಂದೂರು
ತಾವರೆ ಕೊಪ್ಪದ ಸಿಂಹ ಧಾಮ
ಚೀಲನೂರು ಸೊರಬ ತಾಲ್ಲೊಕು.
ಸೊರಬ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)
ಗಿರಿ-ಶಿಖರಗಳು
ಆಗುಂಬೆ, ಆಗುಂಬೆ ಸೂರ್ಯಾಸ್ತಕ್ಕೆ ಪ್ರಸಿದ್ಧ
ಕೊಡಚಾದ್ರಿ.
ಕುಂದಾದ್ರಿ ಬೆಟ್ಟ. ಜೈನ ಕ್ಷೇತ್ರ
ಬರೆಕಲ್ ಬತೆರಿ
ನಿಶಾನೆ ಗುಡ್ಡ
ಹೆದ್ದಾರಿಖಾನ್
ಮೊಳಕಾಲ್ಮುರಿ ಗುಡ್ಡ
ಜೊಗಿ ಗುಡ್ಡ
ಮುಪ್ಪಾನೆ
ನದಿಗಳು
ತುಂಗಾ
ಭದ್ರಾ
ಶರಾವತಿ
ಕುಮುದ್ವತಿ
ವೇದಾವತಿ
ವರದಾ
ಕುಶಾವತಿ
ದ೦ಡಾವತಿ
ಚರಿತ್ರೆ ಮತ್ತು ಧರ್ಮ
ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು
ನಗರ, ಬಿದನೂರು ಸಂಸ್ಥಾನದ ರಾಜಧಾನಿ
ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ
ಶಿವಪ್ಪ ನಾಯಕನ ಅರಮನೆ
ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್
ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ.
ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ.
ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ
ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.
ನಾಡಕಲಸಿ ಸಾಗರ ತಾಲ್ಲೂಕು ; ಪ್ರಾಚೀನ ದೇವಾಲಯ
ವನ್ಯಜೀವಿ
ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ
ಸಕ್ಕರೆಬೈಲು, ಆನೆ ತರಬೇತಿ ಶಿಬಿರ
ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
ಸೊರಬ ತಾಲೂಕೀನ ಚೀಲನೂರು ಕಾಡು ನವಿಲುಗಳಿಗೆ ವಾಸಸ್ಥಾನವಾಗಿದೆ.
ಐತಿಹಾಸಿಕ ವ್ಯಕ್ತಿಗಳು
ಕೆಳದಿಯ ಚೆನ್ನಮ್ಮಾಜಿ
ಅಲ್ಲಮಪ್ರಭು ದೇವರು
ಕೆಳದಿ ಶಿವಪ್ಪ ನಾಯಕ
ಅಕ್ಕಮಹಾದೇವಿ, [ ಉಡುತಡಿ ,ಶಿಕಾರಿಪುರ ತಾಲ್ಲೂಕು,ಶಿವಮೊಗ್ಗ ಜಿಲ್ಲೆ]
ರಾಜಕೀಯ ವ್ಯಕ್ತಿಗಳು
         ಕಡಿದಾಳ್ ಮಂಜಪ್ಪ, ಮಾಜಿ ಮುಖ್ಯಮಂತ್ರಿಗಳು
ಶಾಂತವೇರಿ ಗೋಪಾಲಗೌಡ, ಸಮಾಜವಾದಿ ನಾಯಕರು
ದಿ.ಎ.ಆರ್. ಬದರಿನಾರಾಯಣ್- ಮಾಜಿ ಮಂತ್ರಿಗಳು
ದಿ.ಶೀರ್ನಾಳಿ ಚಂದ್ರಶೇಕರ್ -ಮಾಜಿ ಶಾಸಕರು ಹೊಸನಗರ
ದಿ. ರತ್ನಮ್ಮ ಮಾಧವ್ ರಾವ್ - ಮಾಜಿ ಶಾಸಕರು ಶಿವಮೊಗ್ಗ (ಮ್ಯಸೂರು ರಾಜ್ಯ)
ಎಸ್. ಬಂಗಾರಪ್ಪ, ಕರ್ನಾಟಕದ ಮಾಜಿ ಮುಖ್ಯಮಂತ್ರಿ
J H Patel ex CM
ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು ಶಾಸಕರು.
ಕೆ ಎಸ್ ಈಶ್ವರಪ್ಪ,ಮಾಜಿ ಉಪಮಂತ್ರಿಗಳು,ಮಾಜಿ ಪ್ರತಿಪಕ್ಷ ನಾಯಕರು,
ಗೋಪಾಲಕೃಷ್ಣ ಬೇಳೂರು ಮಾಜಿ ಶಾಸಕರು ಸಾಗರ.
ಹೆಚ್.ಹಾಲಪ್ಪ ,ಮಾಜಿ ಮಂತ್ರಿಗಳು, ಸೊರಬ
ಆರಗ ಜ್ನಾನೇ೦ದ್ರ,ಮಾಜಿ ಶಾಸಕರು.
ಕಾಗೋಡು ತಿಮ್ಮಪ್ಪ, ಮಾಜಿ ಮಂತ್ರಿಗಳು ಶಾಸಕರು. ಪ್ರಸ್ಥುತ ವಿಧಾನ ಸಭಾ ಅಧ್ಯಕ್ಷರು (31-5-2013)
ಎಲ್.ಟಿ.ತಿಮ್ಮಪ್ಪ ಹೆಗಡೆ ಮಾಜಿ ಶಾಸಕರು ಲಿಂಗದಹಳ್ಳಿ.
ಕೆ.ಜೆ.ಕುಮಾರ ಸ್ವಾಮಿ,ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕರು.
ಕಿಮ್ಮನೆ ರತ್ನಾಕರ್, ಶಿಕ್ಷ್ನ ಣ ಸಚಿವರು.
ಪ್ರಸನ್ನ ಕುಮಾರ್ -ಶಾಸಕರು ಶಿವಮೊಗ್ಗ
ಮಧು ಬಂಗಾರಪ್ಪ -ಶಾಸಕರು-ಸೊರಬ
ಶಾರದಾ ಪೂರ್ಯಾನಾಯಕ್ -ಶಿವಮೊಗ್ಗ ಗ್ರಾಮಾಂತರ ಶಾಸಕರು
ಅಪ್ಪಾಜಿ ಗೌಡ -ಶಾಸಕರು -ಭದ್ರಾವತಿ
ಪ್ರಮುಖ ವ್ಯಕ್ತಿಗಳು
ರಾಷ್ಟ್ರಕವಿ ಕುವೆಂಪು, ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಮತ್ತು ಲೇಖಕ.
ಡಾ.ಎಸ್.ಆರ್. ರಾವ್ (ಶಿಕಾರಿಪುರ ರಂಗನಾಥ ರಾವ್) ಭಾರತದ ಹೆಸರಾಂತ ಪ್ರಾಚ್ಯ ವಸ್ತು ತಜ್ಞ
ಯು ಆರ್ ಅನಂತಮೂರ್ತಿ, ಕನ್ನಡ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಪಿ.ಲಂಕೇಶ್, ಲೇಖಕ-ಪತ್ರಕರ್ತರು
ನಾ. ಡಿಸೋಜ, ಸಾಹಿತಿ
ಎಮ್.ಕೆ. ಇ೦ದಿರ, ಕಾದ೦ಬರಿಕಾರ್ತಿ
ಕೆ.ವಿ.ಸುಬ್ಬಣ್ಣ, ಸಾಹಿತಿ ಮತ್ತು ನಾಟಕಕಾರ
ಜಿ. ಎಸ್. ಶಿವರುದ್ರಪ್ಪ, ಕರ್ನಾಟಕದ ರಾಷ್ಟ್ರಕವಿ
ಎನ್ ಎಸ್ ಲಕ್ಷ್ಮಿನಾರಾಯಣ ಭಟ್ಟ, ಪ್ರಸಿದ್ದ ಕವಿ
ಗಿರೀಶ್ ಕಾಸರವಳ್ಳಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ
ಡಾ.ಟಿ.ಎಂ.ಶಿವಾನಂದಯ್ಯ ಹಿರಿಯ ಆಯುರ್ವೇದ ವೈದ್ಯರು
ಹೊ.ಅ.ನರಸಿಂಹ ಮೂರ್ತಿ ಅಯ್ಯಂಗಾರ್,ಮಾಜಿ-ರಾಜ್ಯ ರ್ಕಾರ್ಯದರ್ಶಿಗಳು,ವಿಶ್ವ ಹಿಂದೂ ಪರಿಷತ್.
ಅಭಿನಯ ಚಕ್ರವರ್ಥಿ, ಕಿಚ್ಚ ಸುದೀಪ್, ಖ್ಯಾತ ಚಲನಚಿತ್ರ ನಟ
ಪ್ರಮುಖ ಆಕರ್ಷಣೆಗಳು
ಕುವೆಂಪು ವಿಶ್ವವಿದ್ಯಾನಿಲಯ
ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ 27 ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಅತ್ಯುತ್ತಮ ವಿದ್ಯಾ ಕೇಂದ್ರವಾಗಿ ಹೆಸರಾಗಿದೆ. ಶಿವಮೊಗ್ಗ ಜಿಲ್ಲೆಯ ಅತ್ಯಂತ ಪ್ರಸಿಧ್ಹ ಸಾಹಿತಿ ಕೆ ವಿ ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.
ವಿಮಾನ ನಿಲ್ದಾಣ
ಶಿವಮೊಗ್ಗ ವಿಮಾನ ನಿಲ್ದಾಣ (ನಿದಿಗೆ ಸಮೀಪ),ಶಿವಮೊಗ್ಗ ನಗರದಿಂದ 12 ಕಿ ಮೀ ಗಳು ಮಾತ್ರ. ಆದರೆ ಇದರ ಕಾರ್ಯ ಮಂದಗತಿಯಲ್ಲಿ ಸಾಗಿದೆ ಹಾಗೂ ಪೂರ್ಣಗೊಳ್ಳುವುದೋ ಇಲ್ಲವೋ ಎಂಬ ಅನುಮಾನ ಜನರನ್ನು ಕಾಡುತ್ತಿತ್ತು. ಆದರೆ ಈಗ ಕಾರ್ಯಪ್ರಗತಿ ಅತ್ಯಂತ ವೇಗವಾಗಿದ್ದು, ಈಗಾಗಲೇ 2 ಕಿಮಿ ವೇಗದ ರನ್ ವೇ ಕಾರ್ಯ ಸಂಪೂರ್ಣಗೊಂಡಿದ್ದು, ಮೇ - ಜೂನ್ 2018 ರ ವೇಳೆಗೆ ಪೂರ್ಣಗೊಳ್ಳುತ್ತದೆ

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...