"ಜಿನೇಂದ್ರ ಎಂ. ಎಂ".ರವರು ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಪರಿಚಯ..

ಸ್ನೇಹಿತರೇ,.
              ಪ್ರಕೃತಿ ಚಿತ್ರ.ಸಮಕಾಲೀನ ಕಲಾಕೃತಿ ರೇಖಾಚಿತ್ರ. ಶಿಲ್ಪ ಕಲಾಕೃತಿ. ಮ್ಯೂರಲ್ ಗಳು. ಸೆಟ್ ವರ್ಕಗಳು ಕಲಾಕ್ಷೇತ್ರದ ಎಲ್ಲಾ ಆಯಮಗಳಲ್ಲೂ ಅವರ ಪಾಡಿಗೆ ಅವರು ಕೆಲಸ ಮಾಡುತ್ತಿರುವ "ಜಿನೇಂದ್ರ ಎಂ. ಎಂ".ರವರು ಅವರದೇ ಆದ ಶೈಲಿಯನ್ನು ಬೆಳೆಸಿಕೊಂಡು ಬಂದ ಹಾದಿಯ ಪರಿಚಯ..
                                     2004-2005ರಲ್ಲಿ ಕಲಾ ಅಭ್ಯಾಸಕ್ಕಾಗಿ ಶಿವಮೊಗ್ಗಕ್ಕೆ ಬಂದ ಜಿನೇಂದ್ರವರು ನಿಧಾನವಾಗಿ ಕಲಾಕೃತಿಯ ರಚನೆಯಲ್ಲಿ ತೊಡಗಿಕೊಂಡರು.
ಅಂದಿನಿಂದ ಇಂದಿನವರೆಗೂ ಹಲವಾರು ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ. ಹಾಗೂ ರಚಿಸುತ್ತಲೇ ಇದ್ದಾರೆ..
    ಆರಂಭದ ದಿನಗಳಲ್ಲಿ ಪ್ರಕೃತಿ ಚಿತ್ರಗಳತ್ತ ವಾಲಿದ ಅವರು ಶಿವಮೊಗ್ಗದ ಖ್ಯಾತ ಚಿತ್ರಕಲಾವಿಧ S.R ವೆಂಕಟೇಶ್ ರವರ ಮಾರ್ಗದರ್ಶನದಲ್ಲಿ ಹಲವಾರು ಪ್ರಕೃತಿ ಚಿತ್ರಗಳನ್ನು ರಚಿಸಿ ಅವರದ್ದೇ ಆದ ಶೈಲಿಯನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿ ಆದರೂ!.
ಮುಂದಿನ ದಿನದಲ್ಲಿ ಅವರು ಪೋಶಿಸಿದಂತೆ ಕಂಡುಬಂದಿಲ್ಲ.
ಮುಂದೆ ಬರುಬರುತ್ತಾ ರೇಖಾಚಿತ್ರಗಳನ್ನು ರಚಿಸುವುದರ ಜೊತೆಗೆ ಕೆಲವು ಸಮಕಾಲೀನ ವರ್ಣಚಿತ್ರಗಳನ್ನು ರಚಿಸಿದರು. ಆದರೆ ಇವರು ರೇಖಾಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟು ಒಂದು ಸರಣಿ ಕಲಾಕೃತಿಯನ್ನು ರಚಿಸಿ ಪ್ರದರ್ಶಿಸಿದರು.
ಚಿತ್ರಕಲಾ ಪರಿಷತ್ ನಲ್ಲಿ ನಡೆದ ಈ ಪ್ರದರ್ಶನದಲ್ಲಿ 25ಕ್ಕೂ ಹೆಚ್ಚು ರೇಖಾಚಿತ್ರಗಳ ಜೊತೆಗೆ ಕೆಲವು ಮ್ಯೂರಲ್ ಗಳು. ಶಿಲ್ಪಗಳು ಕೆಲವು ಪ್ರಕೃತಿ ಚಿತ್ರಗಳು ಇದ್ದವು.
ಆದರೆ ಹೆಚ್ಚು ಜನರ ಮನ ಗೆದ್ದಿದ್ದು ಅವರ ರೇಖಾಚಿತ್ರಗಳು. ಇವರ ಈ ರೇಖಾಚಿತ್ರಗಳ ಸೀರಿಸ್ ನಲ್ಲಿ ಸಣ್ಣ ಸೂಕ್ಷ್ಮ ಸೌಂದರ್ಯತ್ಮಕ ವಿನ್ಯಾಸದ ಜೊತೆಗೆ ಒಂದು ಕ್ಯಾರೆಕ್ಟರ್ ಬಳಸಿದ್ದು ವಿಭಿನ್ನ ವಾಗಿದ್ದವು. ಅವುಗಳನ್ನು ನೋಡಿದಾಗ ಅವರಿಗಿರುವ ರೇಖೆಗಳ ಮೇಲಿರುವ ಹಿಡಿತ ಅದನ್ನು ಅವರು ದುಡಿಸಿಕೊಂಡಿರುವ ರೀತಿ. ವಿಭಿನ್ನ ದೃಶ್ಯ ಸಂಯೋಜನೆ. ಕಲಾರಸಿಕರು ಹಾಗೂ ಕಲಾವಿಮರ್ಷಕರು ಮೆಚ್ಚಗೆಗೆ ಪಾತ್ರವಾಗಿದ್ದವು.
ನಂತರ ಬಂದ. ಸರಣಿಯೇ  "ಮೆಟ್ರೋ".
  ಇದನ್ನ ನೋಡಿ ವಾವ್ ಅನ್ನದವರೇ ಇಲ್ಲ. ಹೌದು ಇವರದು ವಿಭಿನ್ನ ಕಲ್ಪನೆ ಬೆಂಗಳೂರಿನಲ್ಲಿ ಆಗತಾನೆ ನಿರ್ಮಾಣ ಹಂತದಲ್ಲಿದ (2015-16) ಮೆಟ್ರೋ ರೈಲ್ವೇ ನಿಲ್ದಾಣ ಮೇಲುಸೇತುವೆಯ ಸ್ತಂಭಗಳು. ನೂರಾರು ವರ್ಷಗಳ ಹಿಂದೆ ಅಂದರೆ ನಮ್ಮ ಹೊಯ್ಸಳ. ಚಾಲುಕ್ಯ. ವಿಜಯನಗರ ಸಾಮ್ರಜ್ಯದ ಕಾಲದಲ್ಲಿ ನಿರ್ಮಾಣಗೊಂಡರೆ ಹೇಗಿರುತ್ತಿತ್ತು. ಎನ್ನುವ ಕಲ್ಪನೆಯನ್ನು ಈಗಿನ ಮೆಟ್ರೋ ನಿಲ್ದಾಣದ ವಾಸ್ತು ಶೈಲಿಗೆ ಆಗಿನ ವಾಸ್ತು ಶಿಲ್ಪವನ್ನು ಜೋಡಿಸಿ ನಮ್ಮ ಮುಂದೆ. ಡಿಜಿಟಲಿ ವಿನ್ಯಾಸಗೊಳಿಸಿ ತಂದ ರೀತಿ ಅಹ್ಲಾದಕರ ವಾಗಿತ್ತು ಅದು ನಮ್ಮಂತವರಿಗೆ Unimaginable ಅನಿಸಿದ್ದು ಸತ್ಯ ಮತ್ತು ಅದೇ ತರ ನಿರ್ಮಾಣ ಮಾಡಬಹುದಿತ್ತು. ನಿರ್ಮಿಸಿದರೆ ಚನ್ನಾಗಿರುತ್ತಿತ್ತು.
ಅನ್ನುತ್ತಾರೆ ನೋಡಿದವರೆಲ್ಲಾ. ಈ ಮೆಟ್ರೋ ಸೀರಿಸ್ ನ ಜೊತೆಗೆ ರೇಖೆಗಳನ್ನು ಮರೆಯದೇ ಪೋಶಿಸುತ್ತಾ. ಬಂದ ಅವರ ಫೀವರ್ ಸೀರಿಸ್ ಅನ್ನು ರಚಿಸದರು.
ಸಂಪೂರ್ಣ ನವ್ಯಾ ಶೈಲಿಯಲ್ಲಿದ್ದ. ಈ ಸೀರಿಸ್ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಗ್ರೂಪ್ ಶೋ ಒಂದರಲ್ಲಿ ಪ್ರದರ್ಶನ ಗೊಂಡಿತ್ತು. ಅಲ್ಲಿಗೆ ಬಂದ ಎಂ.ಎಸ್ ಮೂರ್ತಿ ಸರಳ ಹಾಗೂ ಪ್ರಬುದ್ಧ ರೇಖಾ ಸಂಯೋಜನೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ವಿಮರ್ಶಿಸಿದರು.
ಖ್ಯಾತ ಕಲಾ ವಿಮರ್ಷಕರಾದ ಕೆ.ವಿ ಸುಬ್ರಮಣ್ಯರವರು ಈ ಕಲಾಕೃತಿಗಳನ್ನು ಮತ್ತು ಇವರ ರೇಖಾಚಿತ್ರಗಳ ಹಿಂದಿನ ಸೀರಿಸ್ ನ ನೋಡಿ "ಜಿನೇಂದ್ರ"ರವರ ಕಲಾಕೃತಿ ಎಂದರೆ ಸಮಕಾಲೀನ ಮತ್ತು ಪರಂಪರೆಯ ಮುಖಾ ಮುಖಿ ಇದ್ದಂತೆ. ಎಂದಿದ್ದರೂ. ಆದರೂ ಮುಂದಿನ ದಿನಗಳಲ್ಲಿ ಈ ತರದ ರೇಖೆಗಳನ್ನು ಅಷ್ಟೊಂದು ಪೋಶಿಸಿದಂತೆ ಕಂಡುಬರುವುದಿಲ್ಲ. ಹಾಗಂತ ರೇಖಾಚಿತ್ರಗಳನ್ನು ಪೋಷಣೆ ಮರೆತ್ತಿಲ್ಲ. ಅವರು ರೇಖಾಚಿತ್ರಗಳ ಆಯಾಮಗಳನ್ನು ಸಾದ್ಯತೆಯನ್ನು ಹುಡುಕುತ್ತಲೇ ಇದ್ದವರು. ಆಗ ಅವರ ರೇಖಾಚಿತ್ರಗಳೊಂದಿಗೆ ಸೇರಿಕೊಂಡಿದ್ದೇ ಫೋಟೋ ಗ್ರಫೀ ಹೌದು ಫೋಟೋ ಗ್ರಫೀ ಯ ಮೇಲೆ ರೇಖೆಗಳನ್ನು ಎಳೆದು ಹೊಸ ಆಯಮ ವೊಂದನ್ನು ಬರೆಯ ತೊಡಗಿದರು. ವಾವ್ ಎನಿಸುವ ಇವರ ಈ ಸೀರಿಸ್ ನಲ್ಲಿ ಮೊದ ಮೊದಲು ಇವರೇ ತೆಗೆದ ಛಾಯಾಚಿತ್ರದ ಮೇಲೆ ಕೆಲವು ರೇಖೆಗಳನ್ನು ಸೇರಿಸಿ ಅದು ಹೊಸ ಅರ್ಥವನ್ನು, ಹೊಸ ಆಲೋಚನಾ ಲಹರಿಯನ್ನು ನೋಡುಗರಲ್ಲಿ ಕೂತೂಹಲವನ್ನು ಹುಟ್ಟು ಹಾಕಿದ್ದು ಸುಳ್ಳಲ್ಲ ಈ ಸರಣಿಯ ಮುಂದುವರೆಸುತ್ತಾ ಕೆಲವು ಪಕ್ಷಿಗಳ ಮತ್ತು ಹೂವುಗಳ ಫೋಟೋ ಗ್ರಫೀ ಯ ಮೇಲೆ ರೇಖೆಯನ್ನು ಸಂಯೋಜಿಸಿ ಶಿವಮೊಗ್ಗದಲ್ಲಿ ರೇಖೆಗಳು ಎನ್ನುವ ಹೆಸರಿನ ಪ್ರದರ್ಶನದಲ್ಲಿ ಈ ಕಲಾಕೃತಿಗಳನ್ನ ಪ್ರದರ್ಶಿಸಿದರು.
ಆಗಲೂ ಕಲಾ ರಸಿಕರ ಏನ್ ಕಲ್ಪನೆ ಗುರು..ಇವನದ್ದು  creativity ಅಂದರೆ ಇದಪ್ಪ ಅಂದಿದ್ದರು
ಇವರ ಈ ಪ್ರಯತ್ನ ಮುಂದುವರೆಯುತ್ತಲೇ ಇದೆ ಇದರ ಮುಂದುವರೆದ ಬಾಗವೆಂದಂತೆ ಖ್ಯಾತ ಸುದ್ದಿ ನಿರೂಪಕಿ "ನವಿತಾ ಜೈನ್" ರವರ Photo graphey ಮಾಡಿ ಅದರ ಮೇಲೆ ರೇಖಾಚಿತ್ರಗಳನ್ನು ರಚಿಸಿತ್ತಿರುವ ಇವರು. ಇದರ ಜೊತೆಯಲ್ಲೇ ಇರುವೆಗಳ ಫೋಟೋ ಗ್ರಫೀ ಮೇಲೆ ರೇಖಾಚಿತ್ರ ಸೀರಿಸ್ ಕೂಡ ರಚನಾ ಹಂತದಲ್ಲಿದೆ...
                            ಇದೆಲ್ಲಾ ಇದಕ್ಕೋಸ್ಕರನೇ ಸಮಯ ಕೊಟ್ಟು ಬೇರೆ ದೈನಂದಿನ ಕಮಿಷನ್ ವರ್ಕ್ ಗಳೊಂದಿಗೆ ಸಾಮಾಜಿಕ ಕೆಲಸಗಳನ್ನು ಮಾಡುತ ಸೆಟ್ ವರ್ಕ್ ಗಳ ಜೊತೆ ಜೊತೆಗೆ ಮಾಡಿದ ಕಲಾಕೃತಿಗಳು........







No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...