Jinendra M M. ಜಿನೇಂದ್ರ ಎಂ ಎಂ. ಬಣ್ಣ, ಮಣ್ಣು, ಕಲ್ಲು, ಲೋಹ, ಪೈಬರ್, ಹೀಗೆ ಕೈಗೆ ಸಿಕ್ಕ ಎಲ್ಲಾ ಮಾದ್ಯಮಗಳಲ್ಲು ಅವರದೇ ಆದ ಶೈಲಿಯಲ್ಲಿ ಕಲಾಕೃತಿ ರಚಿಸುವ ಭಾವನೆಗಳನ್ನು ಅಬಿವ್ಯಕ್ತಿಸುವ ಇವರು ಕಲಾವಿದ ಜಿನೇಂದ್ರ ಎಂ. ಎಂ. ಪೈಬರ್: ಇದರಲ್ಲಿ ಮದುವೆ, ಸಭಕಾರ್ಯಕ್ರಮ, ಸಿನಿಮಾ ರಿಯಾಲಿಟಿ ಶೋ ಮುಂತಾದ ಕಾರ್ಯಕ್ರಮಗಳಿಗೆ ಹಿನ್ನೆಲೆ ಅನುಕೂಲವಾಗುವ ಕಂಬಗಳು ವಾಲ್ ಗಳು ಮುಂತಾದವನ್ನು ರಚಿಸುತ್ತಾರೆ. ಮಣ್ಣು: ಇದರಲ್ಲಿ ಭಾವಶಿಲ್ಪ ಉಬ್ಬು ಶಿಲ್ಪ, ದೇವರಮೂರ್ತಿಗಳು, ಗೊಂಬೆ, ಮುಂತಾದವುಗಳನ್ನು ಪೈಬರ್ ಮತ್ತು ಬ್ರಾಸ್ ಮಾದ್ಯಮಕ್ಕೆ ಪೂರ್ವಭಾವಿಯಾಗಿ ರಚಿಸುತ್ತಾರೆ. ಕಲ್ಲು: ಪೂಜಾ ವಿಗ್ರಹ ಕೈತೋಟ ಉದ್ಯಾನವನದಲ್ಲಿ ಸ್ಥಾಪಿಸುವ ನವ್ಯಶಿಲ್ಪಗಳು ಮುಂತಾದವನ್ನು ರಚಿಸುತ್ತಾರೆ. ಲೋಹ: ಕಂಚಿನ ಪುತ್ಥಳಿಗಳು, ವೇಸ್ಟ ಮೆಟೀರಿಯಲ್ಸಗಳಿಂದ ಸಿದ್ಧಪಡಿಸಬಹುದಾದ ನವ್ಯಶಿಲ್ಪಗಳು ಮುಂತಾದವನ್ನು ರಚಿಸುತ್ತಾರೆ. ಪೈಂಟಿಂಗ್ಸ್: ಜಲವರ್ಣ, ತೈಲವರ್ಣ, ಅಕ್ರೈಲಿಕ್ ಮುಂತಾದ ಮಾದ್ಯಮಗಳಲ್ಲಿ ಅವರದೇ ಆದ ಕಲಾಕೃತಿಯನ್ನು ರಚಿಸುತ್ತಾರೆ. ಇದಲ್ಲದೇ ಇನ್ನೂ ವಿಬಿನ್ನವಾಗಿ ಗ್ರಾಫಿಕ್ಸ್ ಮಾದ್ಯಮ ಪೋಟೋಗ್ರಪಿಯ ಮೇಲೆ ರೇಖಾಚಿತ್ರ, ಇನ್ಸ್ಟಲೇಶನ್ ಮುಂತಾದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೂಂಡಿದ್ದಾರೆ ಕಲಾಕ್ಷೇತ್ರದ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರದೇ ಆದ ರೀತಿಯಲ್ಲಿ ತೊಡಗಿಸಿಕೂಂಡಿರುವ ಇವರು ಸರಳ ಸಾಮಾನ್ಯ ವ್ಯಕ್ತಿ ಜಿನೇಂದ್ರ ಎಂ ಎಂ

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...