ಅಪ್ಪಟ ಹಿಂದೂ

ನಾನು ಹಿಂದೂ... ಅಪ್ಪಟ ಹಿಂದೂ... ಪ್ರತಿದಿನ ಮನೆಯಿಂದ ಹೊರಹೋಗುವಾಗ ಹಣೆಗೆ ಗಂಧ/ಕುಂಕುಮ/ವಿಭೂತಿ ಇಟ್ಟುಕೊಂಡೇ ಹೋಗುವ ನನಗೆ ಯಾರಿಂದಲೂ ಹಿಂದುತ್ವ ಪಾಠದ ಅವಶ್ಯಕತೆ ಇಲ್ಲ. ನಾನು ಹಿಂದೂ ಅಂತ ನಿರೂಪಿಸೋಕೆ, ಉಳಿದೆಲ್ಲಾ ಧರ್ಮದವರನ್ನು ದ್ವೇಷಿಸಬೇಕು ಅನ್ನೋ ತಲೆಬುಡವಿಲ್ಲದ ವಾದ ನಾನು ಒಪ್ಪುವುದೂ ಇಲ್ಲ... ಸರಿ ಅನಿಸಿದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರಾದರೂ ಸರಿಯೇ... ತಪ್ಪಿದ್ದರೇ ಅವನದದ್ಯಾವ ಧರ್ಮವಾದರೂ ತಪ್ಪೆ...! ನಾನು ಜಾತ್ಯಾತೀತ ಅಂತ ಹೇಳಿಕೊಳ್ಳೋದು ಕಷ್ಟ. ನನ್ನೊಳಗೆ ಹಿಂದುತ್ವದ ಬಹಳಷ್ಟು ಅಂಶಗಳು ರಕ್ತಗತವಾಗಿದೆ. ಹಾಗಂತ ಉಳಿದೆಲ್ಲಾ ಧರ್ಮವನ್ನು ಇನ್ನಿಲ್ಲದಂತೆ ದ್ವೇಷಿಸು ಅಂತ ನನ್ನ ಧರ್ಮ ಯಾವತ್ತೂ ಹೇಳಿಲ್ಲ..! ಕೆಟ್ಟ ಮುಸ್ಲಿಂ ಆದರೂ ಕ್ಯಾಕರಿಸಿ ಮುಖಕ್ಕುಗಿಯಬೇಕು, ಕೆಟ್ಟ ಹಿಂದುವಾದರೂ ಕ್ಯಾಕರಿಸಿ ಮುಖಕ್ಕುಗಿಯಬೇಕು..! ಹಾಗೇ ಯಾರೇ ಒಳ್ಳೆಯವನಾಗಿದ್ರೂ ಧರ್ಮ ಬದಿಗಿಟ್ಟು ಬೆನ್ನು ತಟ್ಟಬೇಕು..! ಇವತ್ತು ಪರಿಸ್ಥಿತಿ ಬದಲಾಗಿದೆ, ಇನ್ನೊಂದಯ ಧರ್ಮಕ್ಕೆ ಬಾಯಿಗೆ ಬಂದಂತೆ ಬಯ್ದರೆ ಅವನು ಅಪ್ಪಟ ಧರ್ಮನಿಷ್ಠ, ಅನ್ಯ ಧರ್ಮೀಯರ ಸ್ನೇಹ ಮಾಡಿದರೆ ಅವನು ನಿಕೃಷ್ಟ..! ನಮ್ಮ ಮನೆಗೆ ಬಂದು ಹಬ್ಬದಲ್ಲಿ ಹಣೆಗೆ ಕುಂಕುಮವಿಡುವ ಕ್ರಿಶ್ಚಿಯನ್ ಗೆಳೆಯ ನನಗಿದ್ದಾನೆ. ಆರತಿ ತಗೊಂಡು ಪ್ರಸಾದ ತಿನ್ನೋ ಮುಸ್ಲಿಂ ಮಿತ್ರನಿದ್ದಾನೆ. ಪ್ರತಿ ರಕ್ಷಾಬಂಧನಕ್ಕೆ ನನ್ನಮ್ಮನ ಬಳಿ ರಾಖಿ ಕಟ್ಟಿಸಿಕೊಳ್ಳೋ ಮಿರ್ಜಾ ಇಸ್ಮಾಯಿಲ್ ಅನ್ನೋ ಮಾವ ಇದ್ದಾರೆ...  ಹಾಗಿದ್ದಾಗ ಎಲ್ಲಾ ಅನ್ಯಧರ್ಮೀಯರು ಕೆಟ್ಟವರು ಅಂತ ಹೇಗೆ ಹೇಳೋದು..? ನನ್ನ ದೇಹದಲ್ಲಿ ಹರೀತಿರೋದು ಹಿಂದೂ ರಕ್ತವೇ ನಿಜ. ನಾನು ಹೇಳೋದು ಜೈ ಶ್ರೀರಾಮ್, ಜೈ ಹನುಮಾನ್ ನಿಜ... ಅದರರ್ಥ ನಾನು ಮುಸ್ಲಿಂ, ಕ್ರಿಶ್ಚಿಯನ್ ವಿರೋಧಿ ಅಂತಲೂ ಅಲ್ಲ, ವಿರೋಧಿಸಬೇಕು ಅಂತಲೂ ಅಲ್ಲ...!  ನನ್ನ ಧರ್ಮ ನನ್ನ ಹೆಮ್ಮೆ... ನಿಮಗೆ ನಿಮ್ಮ ಧರ್ಮ ಹೇಗೆ ದೊಡ್ಡದೋ, ಹಾಗೇ ನನಗೆ ನನ್ನ ಧರ್ಮ... ನನ್ನ ಧರ್ಮವನ್ನು ನಾನು ಪ್ರೀತಿಸೋ ಮಾತ್ರಕ್ಕೆ ನಾನು ಮುಸ್ಲಿಂ ವಿರೋಧಿ ಹೇಗಾಗಿ ಬಿಡ್ತೀನಿ..? ನಾನು ಹಿಂದೂ, ನನಗೆ ಮುಸ್ಲಿಂ ಗೆಳೆಯರಿರೋ ಕಾರಣಕ್ಕೆ ನಾನು ಹಿಂದೂ ವಿರೋಧಿ ಹೇಗಾಗಿಬಿಡ್ತೀನಿ..? ಇನ್ನೊಂದು ಧರ್ಮವನ್ನು ತುಳಿಯೋದು, ಕೆಟ್ಟದಾಗಿ ಮಾತಾಡೋದು ಧರ್ಮನಿಷ್ಠೆ ಅಲ್ಲ, ಇನ್ನೊಂದು ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡದೇ ನನ್ನ ಧರ್ಮದ ಶ್ರೇಷ್ಟತೆಯನ್ನು ಜಗತ್ತಿಗೆ ಸಾರೋದು ಧರ್ಮನಿಷ್ಟೆ..! ನಾನೊಬ್ಬ ಹಿಂದೂ, ಇಂದೂ ಎಂದೆಂದೂ... ಆದ್ರೆ ನಾನು ಯಾರ ಶತೃವೂ ಅಲ್ಲ, ಯಾವ ಧರ್ಮದ ವಿರೋಧಿಯೂ ಅಲ್ಲ... 'ವಸುದೈವ ಕುಟುಂಬಕಂ' ಅನ್ನೋದನ್ನು ನಂಬೋದಾದ್ರೆ, ಎಲ್ಲರೂ ಕುಟುಂಬದವರಂತೆ ಒಗ್ಗಟ್ಟಾಗಿ ಆ ವಿಷಬೀಜ ಬಿತ್ತುವ ಕೆಟ್ಟ 'ಮನುಷ್ಯರನ್ನು' ನಾಶ ಮಾಡೋಣ. ಅವನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಯಾವ ಧರ್ಮದವನಾದರೂ ಆಗಿರಲಿ... ಇದು ನನ್ನ ಧರ್ಮ ನನಗೆ ಕಲಿಸಿಕೊಟ್ಟ ಪಾಠ.. ಜೈ ಶ್ರೀರಾಮ್...

No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...