ಸಮವಸರಣ

ಪ್ರಿಯ ಸ್ನೇಹಿತರೆ...
 ಧರ್ಮಸ್ಥಳ  ಮಹಾಮಸ್ತಕಾಭಿಷೇಕದಲ್ಲಿ ನಮ್ಮ ತಂಡ ಇನ್ನೊಂದು ವಿಶೇಷವಾದ ಸೆಟ್ ಒಂದನ್ನು ನಿರ್ಮಿಸಿದ್ದೇವೆ, ಅದುವೇ ಸಮವಸರಣ. ಹೌದು ಪೂಜ್ಯ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆಯವರು ಸಮವಸರಣದ ಮೊದಲ ಮೀಟಿಂಗ್ ನಲ್ಲಿ ಅವರ ಕನಸನ್ನು ಪ್ರಸ್ತಾಪಿಸಿದ್ದರು, 20 ವರ್ಷಗಳ ಹಿಂದೆ  ground ಒಂದರಲ್ಲಿ   ಸಮವಸರಣ ರಚನೆ ಮಾಡಬೇಕು ಎಂದುಕೊಂಡಿದ್ದರಂತೆ ಅದು ಸಾಧ್ಯವಾಗಿರಲಿಲ್ಲ,ಈ ಸಂದರ್ಭದಲ್ಲಿ ಮಾಡೋಣ ಎಂದಿದ್ದರು. ಅದರಂತೆ ನಾವು ಈಗ ರಚಿಸಿದ ಸಮವಸರಣದ ವ್ಯಾಸವು 135 ಅಡಿ ಆಗಿದ್ದು ಇದರಲ್ಲಿ ಹೇಮಾವತಿ ಅಮ್ಮನವರ ಒಂದು ಪರಿಕಲ್ಪನೆಯು ಒಳಗೊಂಡಿದೆ. ಈ ಹಿಂದಿನ ಸಮವಸರಣ ಅಂದರೆ ಕಳೆದ ಮಸ್ತಕಾಭಿಷೇಕ ದಲ್ಲಿ ಧರ್ಮಸ್ಥಳದವರು ಮಾಡಿದ ಸಮವಸರಣದಲ್ಲಿ ಪೂಜೆಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದರಂತೆ,ಈ ಬಾರಿಯೂ ಹಾಗೆ ರಚಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. 


ಅದರಂತೆ ಕಾರ್ಯ ಮುಖವಾದ ನಮ್ಮ ತಂಡ ಸಮವಸರಣದ ದಲ್ಲಿ ಬರುವ ಧೂಳಿ ಕೋಟೆಯನ್ನು ಸೃಷ್ಟಿಸಿ ಈ ಬಾರಿಯೂ ಸಮವಸರಣದ ಒಳಗೆ ಪೂಜೆಗೆ ಕೂರುವ ಪರಿಕಲ್ಪನೆಯನ್ನು ಮುಂದುವರಿಸಿದ್ದೇವೆ.ನಾನು ಈ ಹಿಂದೆ ಸಮವಸರಣದ ಕಲಾಕೃತಿಯನ್ನು ರಚಿಸಿದ್ದರು ಇಷ್ಟೊಂದು ಅಧ್ಯಯನ ಮಾಡಿ ರಚಿಸಿ ಇರಲಿಲ್ಲ,  ಅಂದಹಾಗೆ ಶುಭಚಂದ್ರ ಜೈನ್ ಅವರು ಸಮವಸರಣದ ಪರಿಕಲ್ಪನೆಯು  ಗ್ರಂಥಗಳಲ್ಲಿ ಹೇಗಿದೆ ಎನ್ನುವುದನ್ನು study ಮಾಡಿ ನಮಗೆ explain ಮಾಡಿ  ಸೂಕ್ತ ಮಾರ್ಗದರ್ಶನವನ್ನು ನೀಡುವುದರ ಮುಖಾಂತರ ಈ ಸಮವಸರಣ ವನ್ನು ನಾವು ರಚಿಸಲು ನಿರ್ದೇಶಿಸಿದ್ದಾರೆ.

ಒಟ್ಟಾರೆ ಸಮವಸರಣದ work ನನ್ನ ಪಾಲಿಗೆ learning experience, ಈಗಾಗಲೇ ವೈರಲ್ ಆಗಿ ಜೈನ ಸಮುದಾಯದ ಹಲವಾರು ಗ್ರೂಪ್ ಗಳಲ್ಲಿ ಫೇಸ್ಬುಕ್ ನಲ್ಲಿ ಸದ್ದು ಮಾಡುತ್ತಿರುವ ಸಮವಸರಣದ ಕೆಲವು ಫೋಟೋಗಳು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.....













No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...