ಪಂಚ ಮಹಾ ವೈಭವ

*ವೇದಿಕೆ* ಇದು ಕಾರ್ಯಕ್ರಮಗಳ ವೇದಿಕೆಯಂತೆ ಅಲ್ಲ. ಇದರಲ್ಲಿ ಎರಡು ಮಹಾನ್ ಆಸ್ಥಾನಗಳ ಅರಮನೆಯ ದೃಶ್ಯಾವಳಿಗಳನ್ನು ಅಭಿನಯ ರೂಪದಲ್ಲಿ ಕಣ್ಮುಂದೆ ತರಲು, ಮಸ್ತಕಾಭಿಷೇಕ ತಂಡ ಅಂದರೆ ಹೇಮಾವತಿ ಅಮ್ಮನವರ ನೇತೃತ್ವದಲ್ಲಿ , ಪೂಜ್ಯರ ಕನಸನ್ನು ನನಸು ಮಾಡಲಿದ್ದಾರೆ. ಸುಮಾರು ಮುನ್ನೂರಕ್ಕೂ ಹೆಚ್ಚು ಜನ ಕಲಾವಿದರು ಅಭಿನಯಿಸಲಿರುವ ಪಂಚ ಮಹಾವೈಭವದ ದೃಶ್ಯ ರೂಪಕದಲ್ಲಿ ನಮ್ಮ ವೇದಿಕೆ 2 ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಅಯೋಧ್ಯೆ ಮತ್ತು ಪೌದನಪುರ ಅಂದರೆ ಮೊದಲು ವೃಷಭ ತೀರ್ಥಂಕರರ ಅರಮನೆ ಯಾಗಿ ನಂತರ ಭರತನ ಅರಮನೆ ಯಾಗಿ ರೂಪಾಂತರ ಗೊಳ್ಳಲಿದೆ. ಅದಲ್ಲದೆ ಬಾಹುಬಲಿಯ ಮೋಕ್ಷದ ಕ್ಷಣವೂ ಇದೇ ವೇದಿಕೆಯಲ್ಲಿ ಜರುಗಲಿದೆ    120x50 ಅಳತೆಯ ಈ ವೇದಿಕೆಯನ್ನು ನಮ್ಮ ತಂಡ ಸಿದ್ಧಪಡಿಸಿದ್ದು  ಕೆಲವು ಛಾಯಾಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ








*ಗಜ ಪಕ್ಷಿ**  ಗಜ ಪಕ್ಷಿಯ ಬಗ್ಗೆ ಹೇಳುವ ಮೊದಲು, ನಮಗೆ ಮಹಾಮಸ್ತಕಾಭಿಷೇಕದ ಈ ವೇದಿಕೆಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಟ್ಟ ಉದಯಣ್ಣ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಈಗ ವಿಷಯಕ್ಕೆ ಬರೋಣ, ಗಜ ಪಕ್ಷಿಯನ್ನು ನಾನು ಸಿಂಹಾಸನದ ಎರಡು ಭಾಗದಲ್ಲಿ ಬಳಸಿಕೊಂಡಿದ್ದು ಗಜ ಪಕ್ಷಿಯು ಭಾರತೀಯ ಸಂಪ್ರದಾಯ ಶಿಲ್ಪಗಳಲ್ಲಿ ಸಿಗುವ ಅಪರೂಪದ ಶಿಲ್ಪ. ಅದನ್ನು ನಾನು realistic anatomy ಯನ್ನು ಬಳಸಿಕೊಂಡು ರಚಿಸಿದ್ದೇನೆ.



No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...