ಸವ್ಯಸಾಚಿ ಕಲಾವಿದ ಚಿತ್ತಾ ಜಿನೇಂದ್ರ ಎಂ.ಎಂ.

ಸವ್ಯಸಾಚಿ ಕಲಾವಿದ ಎಂ.ಎಂ. ಜಿನೇಂದ್ರ ಜೈನ್
ಜಿನೇಂದ್ರ ಒಬ್ಬ ಸವ್ಯಸಾಚಿ ಕಲಾವಿದ. ಯಾವ ಬಗೆಯ ಕಲಾಕೃತಿ ರಚನೆಗೂ ಇವರು ಸಿದ್ಧ. 
ಸೂಕ್ಷö್ಮ ರೇಖೆಗಳಿಂದ ಭವ್ಯವಾದೊಂದು ಆಧ್ಯಾತ್ಮಿಕ ಆವರಣ ಸೃಷ್ಟಿಸಬೇಕೇ ಅಥವಾ ಸಿನಿಮಾ ಸೆಟ್ 
ಹಾಕಬೇಕೇ, ಜಲವರ್ಣ, ತೈಲವರ್ಣ, ಆಕ್ರಿಲಿಕ್‌ಗಳಲ್ಲಿ ಚಿತ್ರರಚನೆ ಮಾಡಬೇಕೇ, ಅಥವಾ ಪಲ್ಪ್ / 
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ಯಾವುದೇ ಗಾತ್ರದ ಮೂರ್ತಿ ನಿರ್ಮಿಸಬೇಕೇ, - ಇವೆಲ್ಲ ಇರಲಿ, ಕಲ್ಲಿನಲ್ಲಿ 
ಮೂರ್ತಿಯೊಂದನ್ನು ಕೆತ್ತಬೇಕೇ – ಎಲ್ಲಕ್ಕೂ ಸಿದ್ಧ ಈ ಜಿನೇಂದ್ರ !
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಳ್ಳೋಡಿ ಎಂಬ ಕಾಡ ಹಸುರಿನ ಗ್ರಾಮದಲ್ಲಿ ೪-೧೨-
೧೯೮೬ ರಂದು ಜನಿಸಿದ ಶ್ರೀ ಜಿನೇದ್ರ ಬಹುಮುಖೀ ಪ್ರತಿಭೆಯ ಕಲಾವಿದರಾಗಿ ಬೆಳೆದು ನಿಂತಿರುವುದಕ್ಕೆ 
ಅವರ ಪ್ರತಿಭೆ ಮತ್ತು ಅದನ್ನು ರೂಢಿಸಿಕೊಳ್ಳಲು ಅವರು ಸತತವಾಗಿ ಪರಿಶ್ರಮಿಸಿದ್ದೇ ಕಾರಣ. 
ಮೂಲತಃ ಜಿನೇಂದ್ರ ಮಲೆನಾಡಿನ ರೈತಾಪಿ ಜೈನ ಕುಟುಂಬದಿAದ ಬಂದವರು. ತಂದೆ ಶ್ರೀಯುತ 
ಮೇಘರಾಜ್, ತಾಯಿ ಶ್ರೀಮತಿ ಲೀಲಾವತಿ, ಸ್ವಗ್ರಾಮದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ ಇವರು ನಂತರ 
೨೦೦೪ -೦೫ ಶಿವಮೊಗ್ಗೆಗೆ ಕಲೆಯಲ್ಲಿ ಹೆಚ್ಚಿನ ತರಬೇತಿಗಾಗಿ ಬಂದರು. ಲೌಕಿಕ ವಿದ್ಯಾಭ್ಯಾಸದ ಜೊತೆಗೆ 
ಚಿತ್ರಕಲಾಭ್ಯಾಸವನ್ನು ಮುಂದುವರೆಸಿದರು. ಆಗ ಇವರ ಗುರುವಾಗಿದ್ದವರು `ಪುಟ್ಟಣ್ಣ’ ಎಂದೇ ಆತ್ಮೀಯರ 
ಬಳಗದಲ್ಲಿ ಪ್ರಿಯರಾಗಿದ್ದ ಶ್ರೀ ಎಸ್.ಆರ್. ವೆಂಕಟೇಶ್ ಅವರು. ಈ ಪುಟ್ಟಣ್ಣ ಕಲಾಭ್ಯಾಸ ಮಾಡಿದ್ದು 
ಚಂದಮಾಮದ ಕಲಾವಿದ ಶ್ರೀ ಎಂ.ಟಿ.ವಿ. ಆಚರ‍್ಯ ಅವರ ಬಳಿ. ಶಿವಮೊಗ್ಗದ ಖ್ಯಾತ ಶಿಲ್ಪಿ ಕಾಶೀನಾಥ್ 
ಅವರು ಪುಟ್ಟಣ್ಣನ ನೆರೆಯವರು. ಹೀಗಾಗಿ ಜಿನೇಂದ್ರ ಅವರು ಚಿತ್ರಕಲೆ ಮತ್ತು ಮೂರ್ತಿಶಿಲ್ಪ ಎರಡರಲ್ಲೂ 
ಒಟ್ಟೊಟ್ಟಿಗೆ ತರಬೇತಿ ಪಡೆಯುತ್ತಾ ಸಾಗಿದರು. ಇದರ ಜೊತೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ 
ದೃಶ್ಯಕಲಾ ವಿಭಾಗದಿಂದ ಪದವಿ ಅಭ್ಯಾಸ ನಡೆಸಿ ಆ ಪದವಿಯನ್ನೂ ಪಡೆದರು. ಇಲ್ಲಿಗೆ ಶ್ರೀ ಜಿನೇಂದ್ರರ 
ಕಲಾಭ್ಯಾಸ ಒಂದು ಹಂತಕ್ಕೆ ಬಂದAತಾಯಿತು.
ವಿದ್ಯಾಭ್ಯಾಸದ ಜೊತೆಜೊತೆಗೇ ಶಿವಮೊಗ್ಗದಲ್ಲಿ ಗಣೇಶ ಶಿಲ್ಪ ನಿರ್ಮಾಣ, ಭಿತ್ತಿ ಚಿತ್ರಗಳ 
ರಚನೆಯಲ್ಲೂ ತೊಡಗಿದ್ದರು. ಇದನ್ನು ಗಮನಿಸಿದ ಖ್ಯಾತ ಶಿಲ್ಪಿ ಕಾಶೀನಾಥ್‌ರವರು ಬೆಂಗಳೂರಿನಲ್ಲಿ 
ನಡೆಯುತ್ತಿದ್ದ ಅವರ ಪ್ರಾಜೆಕ್ಟ್ ಒಂದರಲ್ಲಿ ಸಹಾಯಕರಾಗಿ ಕೆಲಸ ಮಾಡಲು ಜಿನೇಂದ್ರ ಮತ್ತು ಇವರ 
ಸಹಪಾಠಿಗಳನ್ನು ಬೆಂಗಳೂರಿಗೆ ಕರೆತಂದರು. ಕಾಶೀನಾಥರೊಂದಿಗೆ ಕೆಲಸಮಾಡಿ ಅನುಭವ ಪಡೆದ 
ಜಿನೇಂದ್ರರಿಗೆ ಬೆಂಗಳೂರಿನಲ್ಲಿ ಪರಿಚಿತರ ವಲಯ ಬೆಳೆಯಿತು. ಇದರಿಂದಾಗಿ ಜಿನೇಂದ್ರರು ಸಿನಿಮಾ 
ಸೆಟ್‌ಗಳ ನಿರ್ಮಾಣದತ್ತ ಮುಖ ಮಾಡುವಂತಾಯಿತು. ಈ ಹೊತ್ತಿಗೆ ಖ್ಯಾತ ಕಲಾವಿದರೂ ಕಲಾ 
ವಿಮರ್ಶಕರೂ ಆದ ಶ್ರೀ ಚಿ.ಸು.ಕೃಷ್ಣಶೆಟ್ಟಿ, ಶ್ರೀ ಕೆ.ವಿ.ಸುಬ್ರಹ್ಮಣ್ಯಂ, ಚಂದ್ರನಾಥ ಆಚಾರ್ಯ, ಬಿ.ಕೆ.ಎಸ್.
ವರ್ಮಾ ಸೇರಿದಂತೆ ಹಲವಾರು ಹಿರಿಯ ಕಲಾವಿದರ ಸಂಪರ್ಕ ಬೆಳೆದಿತ್ತು.
ಬೆಂಗಳೂರಿನಲ್ಲಿ...
೨೦೦೯ ರಲ್ಲಿ ಬೆಂಗಳೂರಿಗೆ ಬಂದು ನೆಲೆನಿಂತ ಮೇಲೆ ಜಿನೇಂದ್ರರಿಗೆ ಬಹುಮುಖೀ ಅವಕಾಶಗಳು

ದೊರೆತವು. ಆದರೆ ಅವೆಲ್ಲ ಒಂದಕ್ಕಿಂತ ಒಂದು ಸವಾಲಿನದು. 
ಈ ಕಾಲಕ್ಕಾಗಲೇ ಇವರಿಗೆ ನೇರವಾಗಿ ಕಲಾಕೃತಿಗಳನ್ನು ರಚಿಸಿಕೊಡುವಂತೆ ಹಲವರು ಕೇಳುತ್ತಿದ್ದರು. 
ಅಂದರೆ ಜಿನೇಂದ್ರ ಒಬ್ಬ ಂಡಿಣisಣ iಟಿ ಜemಚಿಟಿಜ ಆಗಿದ್ದರು. ಇವರು ತಾವು ವಾಸವಿದ್ದ ಬಾಡಿಗೆ 
ರೂಮಿನಲ್ಲೇ ಪೇಂಟಿAಗ್ ಮತ್ತು ಶಿಲ್ಪಗಳನ್ನು ಮಾಡುತ್ತಿದ್ದರು. ಕೆಲವೇ ದಿನಗಳ ನಂತರ ಆ ರೂಮಿನ 
ಜಾಗ ಸಾಲದೆಂಬುದು ಅನುಭವಕ್ಕೆ ಬಂದಾಗ ಸ್ವಂತ ಸ್ಟುಡಿಯೋ ನಿರ್ಮಿಸಿಕೊಳ್ಳುವ ಯೋಚನೆ ಬಂತು. 
ಅಲ್ಲೇ ಸಮೀಪದಲ್ಲಿದ್ದ ಖಾಲಿ ಜಾಗವನ್ನು ಬಾಡಿಗೆಗೆ ಪಡೆದುಕೊಂಡು ಶೆಡ್ ನಿರ್ಮಿಸಿ ಸ್ಟುಡಿಯೋ 
ಪ್ರಾರಂಭಿಸಿದರು. ಇದೇ ಶ್ರೀ ಜಿನೇಂದ್ರರ ಉತ್ತರೋತ್ತರ ಅಭಿವೃದ್ಧಿಗೂ, ಜನಪ್ರಿಯತೆಗೂ ಕಾರಣವಾಯಿತು. 
ಈ ಸಾಹಸಕ್ಕೆ ಅವರಿಗೆ ಬೆನ್ನೆಲುಬಾಗಿ ನಿಂತಿದ್ದೆAದರೆ – ಅವರ ಆತ್ಮವಿಶ್ವಾಸ ಮತ್ತು ಪ್ರತಿಭೆ ಎರಡೇ. ಅಲ್ಲಿ 
ಸ್ಥಾಪಿಸಿದ ತಮ್ಮ ಸ್ಟುಡಿಯೋಕ್ಕೆ `ಚಿತ್ತಾ ಆರ್ಟ್ ಸ್ಟುಡಿಯೋ’ ಎಂದು ಹೆಸರಿಟ್ಟರು. ಇದು ಮನಸ್ಸು ಮತ್ತು 
ನಕ್ಷತ್ರ ಎರಡನ್ನೂ ಸೂಚಿಸುತ್ತದೆ. ಇಲ್ಲಿಂದ ಇವರ ಸೃಜನಶೀಲ ಕಲೆ ಹಲವೆಂಟು ಹಾದಿಗಳಲ್ಲಿ ಬೆಳವಣಿಗೆ 
ಕಂಡಿತು. ಕಲಾವಿದರ ಬಳಗದಲ್ಲಿ ಇವರು `ಚಿತ್ತಾ ಜಿನೇಂದ್ರ’ ಎಂದೇ ಆಪ್ತರಾದರು. ನಾಡಿನಾದ್ಯಂತ 
ವಿವಿಧ ಸಂದರ್ಭಗಳಿಗೆ ತಕ್ಕಂತೆ ಟ್ಯಾಬ್ಲೋ, ಪ್ರತಿಮೆಗಳು, ಸಭಾವೇದಿಕೆಗಳಿಂದ ಹಿಡಿದು ಹಲವು ಕಂಪನಿಗಳ 
ಲೋಗೋಗಳವರೆಗೆ ಬೇಡಿಕೆ ಬಂದದ್ದನ್ನೆಲ್ಲಾ ಸೃಷ್ಟಿಸಿದರು. ಒಂದಕ್ಕಿAತ ಒಂದು ಅದ್ಭುತವೆನ್ನಿಸಿಕೊಂಡು 
ಪ್ರಾಯೋಜಕರು ಹಾಗೂ ವೀಕ್ಷಕರ ಮೆಚ್ಚುಗೆ ಪಡೆದವು. ಇದರ ಜೊತೆಗೆ ಗಣಕಯಂತ್ರದಲ್ಲಿನ
ಕಲೆಗೆ ಸಂಬAಧಿಸಿದ ತಂತ್ರಾAಶಗಳನ್ನು ಬಳಸಿ ಹೊಸಬಗೆಯ ಕಲೆ ಸೃಷ್ಟಿಸುವುದನ್ನೂ ಕಲಿತರು. ನಂತರ 
ಛಾಯಾಚಿತ್ರಗಳ ಬೇಕಾದ ಭಾಗಗಳನ್ನಷ್ಟೆ ಬೇರ್ಪಡಿಸಿ ಅವುಗಳಿಗೆ ಕೆಲವು ರೇಖೆಗಳನ್ನು ಸೇರಿಸಿ ಹೊಸ 
ಅರ್ಥ ಹೊಮ್ಮುವಂತೆ ಮಾಡಿದರು. ತಮ್ಮ ಚಿತ್ರಗಳ ಏಕವ್ಯಕ್ತಿ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನಲ್ಲಿ 
ಹಾಗೂ ಇತರ ಕೆಲವು ಕಡೆಗಳಲ್ಲಿ ನಡೆಸಿದರು. ಭೇಟಿಕೊಟ್ಟ ಕಲಾವಿದರು ಮತ್ತು ಕಲಾರಸಿಕರು ಅವನ್ನು 
ನೋಡಿ ಮೆಚ್ಚಿ -`ಈ ತರುಣ ಹೊಸಹಾದಿಯೊಂದನ್ನು ತೆರೆಯುತ್ತಿದ್ದಾನೆ’ ಎಂದುಕೊAಡರು. ಅದು 
ನಿಜವೂ ಆಗಿತ್ತು. 
ಹೀಗೆ ಸಾಗಿರುವ ಶ್ರೀ ಎಂ.ಎA.ಜಿನೇAದ್ರರ ಕಲಾಸೃಷ್ಟಿ ವೈವಿಧ್ಯಮಯವಾಗಿ ಮುನ್ನಡಯುತ್ತಲೇ ಇದೆ. 
ವಿವಿಧ ವಿಭಾಗಗಳಲ್ಲಿನ ಅವರ ಕಲಾಕೃತಿಗಳತ್ತ ಒಂದು ಇಣುಕು ನೋಟ ಮುಂದಿನ ಪುಟಗಳಲ್ಲಿದೆ.
೧. ರೇಖಾಚಿತ್ರಗಳು :
ಜಿನೇಂದ್ರರ ರೇಖಾಚಿತ್ರಗಳೆಂದರೆ ಕೇವಲ ಸ್ಕೆಚ್‌ಗಳಾಗಲೀ ಬಾಹ್ಯರೇಖಾಚಿತ್ರ (ouಣ ಟiಟಿe 
ಜಡಿಚಿತಿiಟಿg) ಗಳಾಗಲೀ ಅಲ್ಲ. ಬೇಲೂರು ಶಿಲಾಬಾಲಿಕೆಯರ ಶಿಲ್ಪದಲ್ಲಿರುವಷ್ಟೇ ನವಿರು, ಸೂಕ್ಷö್ಮತೆ 
ಹಾಗೂ ಪರಿಪೂರ್ಣತೆಗಳನ್ನೊಳಗೊಂಡ ಪೂರ್ಣಮಟ್ಟದ ಕಲಾಕೃತಿಗಳು (ಸಧ್ಯಕ್ಕೆ ಕನ್ನಡದಲ್ಲಿ ಎಲ್ಲಕ್ಕೂ 
ಅಂದರೆ – Sಞeಣಛಿh, ouಣಟiಟಿe ಜಡಿಚಿತಿiಟಿg, ಛಿomಠಿಟeಣeಟಥಿ ಜಿiಟಿisheಜ ಟiಟಿe ಜಡಿಚಿತಿiಟಿg ಗಳಿಗೆ 
`ರೇಖಾಚಿತ್ರ’ ಎಂಬ ಒಂದೇ ಶಬ್ಧವನ್ನು ಬಳಸುವ ರೂಢಿಯಿದೆ. ಬೇರೆಬೇರೆ ಪಾರಿಭಾಷಿಕಗಳನ್ನು 
ರೂಪಿಸಿಕೊಳ್ಳಬೇಕಾದ ಅಗತ್ಯವಿದೆ). ಈ ಪೂರ್ಣಮಟ್ಟದ ರೇಖಾಚಿತ್ರಗಳಲ್ಲಿ ದಾರದ ಎಳೆಗಿಂತಲೂ 
ತೆಳುವಾದ ರೇಖೆಗಳು ವಿಪುಲಸಂಖ್ಯೆಯಲ್ಲಿರುತ್ತವೆ. ಆದರೂ ಅವುಗಳ ನಡುವೆ ಅದ್ಭುತವಾದ ಒಂದು

ಹೊಂದಾಣಿಕೆಯಿರುತ್ತದೆ. ಇದರಿಂದಾಗಿ ಚಿತ್ರದಲ್ಲಿ ಒಂದು ಸೌಷ್ಠವ (Sಥಿmmeಣಡಿಥಿ) ಎದ್ದು ಕಾಣುತ್ತದೆ. 
ಮರದ ಕೆಳಗೆ ತಪಸ್ಸಿಗೆ ನಿಂತ ಬಾಹುಬಲಿ, ಆಕಾಶದಲ್ಲಿ ತೇಲುತ್ತಿರುವಂತೆ ಕಾಣುವ ಗಂಧರ್ವಸ್ತಿçÃಯೊಬ್ಬಳ 
ಮುಖ, ಚೌಕಟ್ಟಿನಿಂದಾಚೆ ಜಿಗಿಯುತ್ತಿರುವ, ಪ್ರಸಾಧನ ಅರ್ಧಮಾತ್ರ ಪೂರ್ಣಗೊಂಡಿರುವ ಯಕ್ಷಗಾನದ 
ದೇವತೆಯೊಬ್ಬಳ ಪಾತ್ರ, ನಂದಿಯ ಮೇಲೆ ನೃತ್ಯಮಾಡುತ್ತಿರುವ ಶಿವ-ಹೀಗೆ ಈ ಗುಂಪಿನ ಯಾವುದೇ 
ಚಿತ್ರ ತೆಗೆದುಕೊಳ್ಳಲಿ - ಅಲ್ಲಿ ವೈಶಿಷ್ಟö್ಯ ಪರಿಪೂರ್ಣತೆ ಮತ್ತು ಕುಸುರಿ ಚಿತ್ರಣ ಎಲ್ಲವೂ ಕಾಣುತ್ತದೆ. 
ಜೊತೆಗೆ ಒಂದು ವಿಶಿಷ್ಟ ಕಲ್ಪನೆ ಅಲ್ಲಿ ಮೈತಳೆದಿರುತ್ತದೆ. ಇದಕ್ಕೆ ಉದಾಹರಣೆಯಾಗಿ ಇವರ ರೆಕ್ಕೆ 
ಬಿಚ್ಚಿದ ಪೌರಾಣಿಕ ಪಕ್ಷಿಯೊಂದರ ಚಿತ್ರ ನೋಡಬಹುದು. ಬರಿ ಪಕ್ಷಿಯೊಂದನ್ನೇ ಚಿತ್ರಿಸಿ ಕೈಬಿಟ್ಟಿಲ್ಲ. 
ಅದರ ಹಿನ್ನೆಲೆಯಲ್ಲಿ ಒಂದು ಅಲಂಕೃತ, ಅರೆಗಳಿಲ್ಲದ ಚಕ್ರ. ಅದನ್ನೂ ಮೀರಿ ಹಕ್ಕಿಯ ಎದುರು 
ಭಾಗಕ್ಕೆ ಹರಡಿರುವ ವೈಭವಯುತ ಅಲಂಕರಣ ಸುರುಳಿರೇಖೆಗಳು – ಇವೆಲ್ಲ ಸೇರಿ ಒಟ್ಟಾರೆ `ಇದು 
ಏನೋ ಒಂದು..’ ಎಂದು ನೋಡುಗ ವಿಸ್ಮಯಗೊಳ್ಳುವಂತೆ ಮಾಡುತ್ತದೆ. ಇಂಥ ರೇಖಾಚಿತ್ರಗಳ 
ಸಂದರ್ಭದಲ್ಲಿ ಜಿನೇಂದ್ರ ಅಲಂಕರಣ ಪ್ರಿಯರು. ಅದು – ಮದನಿಕೆಯಂತಹ ಸುಂದರಿಯೊಬ್ಬಳು 
ಕಲಾವಿದನೊಬ್ಬನಿಗೆ ರೂಪದರ್ಶಿಯಾಗಿ ಲತಾಮಂಟಪದ ಬಳಿ ನಿಂತಿರುವ ಚಿತ್ರವಾಗಿರಬಹುದು, ಅಥವಾ 
ಸುಂದರಿಯೊಬ್ಬಳು ಚಂದ್ರಬಿAಬದ ಹಿನ್ನೆಲೆಯಲ್ಲಿ ತನ್ನ ತೊಡೆಯ ಮೇಲೆ ಧ್ವಜದಂಡವೊAದನ್ನು ಹಿಡಿದು 
ನಿಂತಿದ್ದು ಅವಳ ವಸ್ತçದ ನೆರಿಗೆಗಳು ಬೆನ್ನಹಿಂದೆ ಹಾರಾಡುತ್ತಾ ಅವಳ ಲಲಿತ ಮನೋಲಹರಿಗಳನ್ನು 
ಬಿಂಬಿಸುತ್ತಿರುವುದಾಗಿರಬಹುದು - ಹೀಗೆ ಯಾವುದೇ ಆದರೂ ಅಲ್ಲಿ ಪರಸ್ಪರ ಹೊಂದಾಣಿಕೆಯ 
ವಕ್ರರೇಖೆಗಳ ಮೂಲಕ ಆಕರ್ಷಕವಾದ ಒಂದು ಅಲಂಕರಣ, ಒಂದು ಗುಪ್ತ ಸಂದೇಶದ ಅಭಿವ್ಯಕ್ತಿ 
ಕಾಣಿಸುತ್ತದೆ. (ರೂಪದರ್ಶಿಯಾಗಿ ನಿಂತ ಲಲಿತಾಂಗಿಯ ಎದುರು ಕಲಾವಿದನಿಲ್ಲ. ಅವನ ಡ್ರಾಯಿಂಗ್ 
ಸ್ಟಾö್ಯಂಡ್ ಮಾತ್ರ ಇದೆ. ವೈಭವದ ಸಿಂಹಾಸನದ ಮೇಲೆ ಕೂತ ಗಣಪತಿಯ ಎದುರಿಗೆ ಮೂಷಿಕನು 
ತಿರುಗುತ್ತಿರುವ ಭೂಗೋಲದ ಅಕ್ಷದ ಮೇಲೆ ಕುಳಿತಂತಿದೆ. ಹೀಗೆ ಚಿಕ್ಕದಾದೊಂದು ಮಾರ್ಪಾಡಿನ 
ಮೂಲಕ ಸ್ವಾರಸ್ಯವಾದೊಂದು `ಧ್ವನಿ’ ಇವರ ಈ ರೇಖಾಚಿತ್ರಗಳಲ್ಲಿ ಹೊಮ್ಮುತ್ತದೆ.)
ಎಲ್ಲ ರೇಖಾಚಿತ್ರಗಳೂ ಹೀಗೆ ಇವೆ ಎಂದಲ್ಲ. ಅಸಂಗತ ಚಿತ್ರಣಕೊಡುವಂಥವೂ ಇವೆ. 
ಛಾಯಾಚಿತ್ರಕ್ಕೆ ರೇಖೆಗಳು:
ಈ ರೇಖಾಚಿತ್ರಗಳ ಸರಣಿಯಲ್ಲೇ ಜಿನೇಂದ್ರರು ಮಾಡಿರುವ ಮತ್ತೊಂದು ಪ್ರಯೋಗವೆಂದರೆ 
ಛಾಯಾಚಿತ್ರಗಳಿಂದ ಬೇಕಾದ ಭಾಗವನ್ನಷ್ಟೇ ತೆಗೆದುಕೊಂಡು ಅದಕ್ಕೆ ತಮ್ಮಿಷ್ಟ ಬಂದ ರೇಖೆ/ಚಿತ್ರಗಳನ್ನು 
ಸೇರಿಸಿ ಬೇರೆಯದೇ ವಾತಾವರಣ ಸೃಷ್ಟಿಸಿರುವುದು. ಇದರಿಂದಾಗಿ – ಕೈಯಗಲಿಸಿ ಖುಷಿಯಿಂದ ಆಕಾಶಕ್ಕೆ 
ಜಿಗಿದ ಯುವಕ ಬಟ್ಟೆ ಒಣಹಾಕುವ ಹಗ್ಗದ ಮೇಲಿರುವ ಹಲವು ಬಟ್ಟೆಗಳ ನಡುವೆ ಆ ಕ್ಲಿಪ್‌ಗಳಿಗೆ ತನ್ನ 
ಕೈಬೆರಳುಗಳನ್ನು ಸಿಕ್ಕಿಸಿಕೊಂಡು ನೇತಾಡುತ್ತಿರುವಂತೆ ಕಾಣುತ್ತದೆ.
ಇನ್ನೊಂದೆಡೆ ಬಂಡೆಯಿAದ ಎತ್ತರಕ್ಕೆ ಹಾರುತ್ತಿರುವ ಯುವಕನ ಬೆನ್ನಿಗೆ ರೆಕ್ಕೆಗಳು ಮೂಡಿ ಅವನು 
ಇನ್ನೂ ಮೇಲೇರಲಿರುವಂತೆ ಭಾಸವಾಗುತ್ತದೆ. ಮತ್ತೊಂದರಲ್ಲಿ ಮೇಲಿಂದ ಕೆಳಗೆ ಹಾರುತ್ತಿರುವ ಯುವಕನ 
ಕೈಕಾಲುಗಳಿಗೆ ನೂರಾರು ಬಲೂನುಗಳನ್ನು ಕಟ್ಟಲಾಗಿದೆ - ಹೀಗೇ.
ಇಂಥ ತಂತ್ರ ಜಿನೇಂದ್ರರದ್ದೇ ಪ್ರಥಮವೇನೂ ಆಗಿರಲಾರದು. ಆದರೆ ಇವರ ಇಂಥ ಚಿತ್ರಗಳಲ್ಲಿ

ಕಾಣುವ ಫ್ಯಾಂಟಸಿ ಮಾತ್ರ ಇವರಿಗೇ ವಿಶಿಷ್ಟವಾದುದು. ಸೂರ್ಯೋದಯದ ವೇಳೆ ಬಿರಿದ ತಾವರೆಯ 
ಮೇಲೆ ಲಕ್ಷಿö್ಮಯನ್ನು ಕೂರಿಸಿರುವುದು, ಗೊದ್ದದ ಒಂದು ಬೃಹತ್ ಚಿತ್ರದ ಎದುರು ಆನೆಗಳ ಹಿಂಡಿನ 
ರೇಖಾಚಿತ್ರವನ್ನು ಬರೆದು ಆನೆಗಳೇ ಇರುವೆಯನ್ನು ಮಹದಾಶ್ಚರ್ಯದಿಂದ ನೋಡುತ್ತಿರುವಂತೆ 
ಮಾಡುವುದು – ಇವೆಲ್ಲ ಒಂದು ವಿಚಿತ್ರ ಅನುಭವವನ್ನು ಕೊಡುತ್ತವೆ. 
ಹೀಗೆ – ಜಿನೇಂದ್ರರ ರೇಖಾಚಿತ್ರಗಳಲ್ಲಿ ಒಂದೆಡೆ ಸೂಕ್ಷö್ಮ ರೇಖಾವಿನ್ಯಾಸ, ವೈಭವೀಕರಣ, ಸಮಮಿತಿ 
(Sಥಿmmeಣಡಿಥಿ) ಗಳು ಕಂಡರೆ, ಇನ್ನೊಂದು ಬಗೆಯ ರೇಖಾಚಿತ್ರಗಳಲ್ಲಿ ಅಸಂಗತತೆ ಕಾಣುತ್ತದೆ ಇಂಥ 
ಚಿತ್ರಗಳಿಂದ ಪ್ರೇಕ್ಷಕ ಪಡೆದುಕೊಳ್ಳುವ ಸಂದೇಶಕ್ಕೆ ಆತನೇ ಜವಾಬ್ದಾರ, ಕಲಾವಿದನಲ್ಲ. ಮತ್ತೊಂದು 
ಬಗೆಯ ರೇಖಾಚಿತ್ರಗಳು ಛಾಯಾಚಿತ್ರ ಮತ್ತು ರೇಖೆಗಳ ಸಮ್ಮಿಳನ. ಛಾಯಾಚಿತ್ರ ಕಾಣಿಸುವುದಕ್ಕಿಂತ 
ಬೇರೆಯದೇ ಆದ ಸಂದೇಶವನ್ನು ಕೊಡುವುದು ಇವುಗಳ ಉದ್ದೇಶ. ಇವು – ಜಿನೇಂದ್ರ ಜೈನ್‌ರ 
ರೇಖಾಚಿತ್ರಗಳ ಮೂರು ಗುಂಪುಗಳು. 
ಇಲ್ಲಿ ಅವರ ಸ್ಕೆಚ್ ಬುಕ್‌ನಲ್ಲಿಯ ಸ್ಕೆಚ್‌ಗಳ ಬಗ್ಗೆ ಉದ್ದೇಶಪೂರ್ವಕವಾಗಿಯೇ ಪ್ರಸ್ತಾಪಿಸಿಲ್ಲ. ಕಾರಣ 
- ಪ್ರತಿಯೊಬ್ಬ ಕಲಾವಿದನೂ ಅಂಥ ಒಂದು ಸ್ಕೆಚ್ ಪುಸ್ತಕವನ್ನು ತನ್ನ ಪ್ರಿಯವಸ್ತುವಾಗಿ ಇಟ್ಟುಕೊಂಡೇ 
ಇರುತ್ತಾನೆ ಹಾಗೂ ಅದರಲ್ಲಿ ನೂರಾರು ಸ್ಕೆಚ್‌ಗಳಿದ್ದೇ ಇರುತ್ತವೆ. ಆದ್ದರಿಂದ ಇಲ್ಲಿ ಪೂರ್ಣಗೊಂಡ 
ಅವರ ರೇಖಾಚಿತ್ರಗಳ ವಿಧಗಳು ಮತ್ತು ವೈಶಿಷ್ಟö್ಯಗಳನ್ನಷ್ಟೇ ವಿಶ್ಲೇಷಿಸಲಾಗಿದೆ.
೨. ವರ್ಣ ಚಿತ್ರಗಳು :
ಶಿಲ್ಪ ಹಾಗೂ ಸೆಟ್‌ಗಳ ನಿರ್ಮಾಣಕ್ಕೆ ತೊಡಗಿದ ಮೇಲೆ ವರ್ಣಚಿತ್ರಗಳ ರಚನೆಯಲ್ಲಿ ಶ್ರೀ ಜಿನೇಂದ್ರ 
ಜೈನ್‌ರಿಗೆ ಅಷ್ಟಾಗಿ ಬಿಡುವು ದೊರೆತ ಹಾಗೆ ಕಾಣದು. ಆದರೂ ಅವರ ಮೊದಲ ಪ್ರೀತಿ ರೇಖಾಚಿತ್ರಗಳು 
ಮತ್ತು ವರ್ಣ ಚಿತ್ರಗಳತ್ತಲೇ ಟ್ಯಾಬ್ಲೋ ಹಾಗೂ ಸೆಟ್‌ಗಳನ್ನು ನಿರ್ಮಿಸುವಾಗಲೂ ಸಹ ಮೊದಲು ಅದರ 
ರೇಖಾಚಿತ್ರ ಬರೆದುಕೊಂಡು ಅದಕ್ಕೆ ಬಣ್ಣ ತುಂಬಿಸಿ ನೋಡಬೇಕು ತಾನೆ ? ಆದರೆ ಈ ಮುನ್ನ ಅವರು 
ರಚಿಸಿರುವ ಹಾಗೂ ಈಗಲೂ ಬಿಡುವಾದಾಗ ತಟಕ್ಕನೆ ತೊಡಗಿಕೊಂಡು ರಚಿಸಿರುವ ಹಲವು ಜಲವರ್ಣ 
ಚಿತ್ರಗಳು ಸಹಜವಾಗಿಯೇ ಆಕರ್ಷಕವಾಗಿವೆ. 
ಸಾಮಾನ್ಯವಾಗಿ ಹೆಚ್ಚಿನ ಕಲಾವಿದರಂತೆ – ವರ್ಣಚಿತ್ರಗಳನ್ನು ಬರೆಯುವಾಗ ಜಿನೇಂದ್ರರು ಸಹ 
ನೆಲದೃಶ್ಯ (ಟಚಿಟಿಜsಛಿಚಿಠಿe) ಗಳನ್ನೇ ಆರಿಸಿಕೊಂಡು ಬರೆದರು. ಒಂದಷ್ಟು ಗಿಡಮರ, ಅವುಗಳ ಜೊತೆಗೆ 
ಯಾವುದೋ ಒಂದು ಪಾಳು ಅವಶೇಷ ಅಥವಾ ಕೇವಲ ವನಮಧ್ಯದಲ್ಲಿ ಹಾದುಹೋಗುವ ಮಣ್ಣುಹಾದಿ 
- ಇಂಥವೇ ಇವರ ವರ್ಣಚಿತ್ರದ ದೃಶ್ಯಗಳಾಗಿರುತ್ತವೆ.
ಇಂಥ ಭೂದೃಶ್ಯಗಳನ್ನು ಬಿಟ್ಟರೆ ಇನ್ನೆರಡು ಬಗೆಯ ವರ್ಣಚಿತ್ರಗಳು ಜಿನೇಂದ್ರರ ಒಲವಿನ ಕ್ಷೇತ್ರಗಳಾಗಿವೆ. 
ಅಸಂಗತ ಶೈಲಿಯಲ್ಲಿದ್ದು ಅನುಭಾವ / ಅನುಭಾವಿಯೊಬ್ಬನ ಸಾಧನಾ ಸ್ಥಿತಿಯನ್ನು ಬಿಂಬಿಸುವAಥ 
ಚಿತ್ರಗಳು ಒಂದು ಬಗೆಯಾದರೆ, ಅಸಂಗತ ಪ್ರಕೃತಿ ದೃಶ್ಯಗಳದ್ದು ಇನ್ನೊಂದು ಬಗೆ. ಭೂದೃಶ್ಯಗಳ 
ಚಿತ್ರಣದಲ್ಲಿ ಅಂಥ ವೈಶಿಷ್ಟö್ಯವೇನೂ ಕಾಣುವುದಿಲ್ಲ. ಎಲ್ಲ ಪಳಗಿದ ಚಿತ್ರಕಾರರು ಬರೆಯುವಂತೆಯೇ ಅವು 
ಇವೆ.

೩. ವ್ಯಕ್ತಿ ಚಿತ್ರಗಳು (Poಡಿಣಡಿಚಿiಣs):
ಪ್ರತಿಯೊಬ್ಬ ಕಲಾವಿದನಿಗೂ ವರ್ಣಚಿತ್ರಗಳ ರಚನೆ ಬಗ್ಗೆ ಇರುವಂತೆಯೇ ವ್ಯಕ್ತಿ ಭಾವಚಿತ್ರಗಳ ಬಗೆಗೂ 
ವಿಶೇಷ ಒಲವು (ಈಚಿsಛಿiಟಿಚಿಣioಟಿ) ಇರುತ್ತದೆ. ಆರಂಭದಲ್ಲಿ ತಮ್ಮ ಖುಷಿಗಾಗಿ, ಅಭ್ಯಾಸಕ್ಕಾಗಿ ಇದನ್ನು 
ಮಾಡುವ ಕಲಾವಿದರು ಅನಂತರ ಸಾಮಾನ್ಯವಾಗಿ ಬೇಡಿಕೆ ಬಂದರೆ ಮಾತ್ರ ಮಾಡುತ್ತಾರೆ.
ಜಿನೇಂದ್ರ ಜೈನ್ ಇಂಥ ಕೆಲವು ವ್ಯಕ್ತಿ ಭಾವಚಿತ್ರಗಳನ್ನು ಸೊಗಸಾಗಿ ರಚಿಸಿದ್ದಾರೆ. ತಮ್ಮದೇ ಒಂದು 
ಸ್ವಚಿತ್ರವನ್ನು ರಚಿಸಿರುವುದಲ್ಲದೆ - ಸ್ವಾದಿ ಶ್ರೀ ಜೈನಮಠದ ಸ್ವಾಮೀಜಿಯವರು, ತಮ್ಮ ಕಲಾಗುರು ಎಸ್.
ಆರ್. ವೆಂಕಟೇಶ್, ವಿವೇಕಾನಂದರು, ಸಾಹಿತಿ ಡಾ.ಹಂಪ ನಾಗರಾಜಯ್ಯ - ಹೀಗೆ ಹಲವು ಖ್ಯಾತ ವ್ಯಕ್ತಿ 
ಚಿತ್ರಗಳನ್ನು ಸೊಗಸಾಗಿ ರಚಿಸಿದ್ದಾರೆ. ಇವುಗಳಲ್ಲಿ ಆಯಾ ವ್ಯಕ್ತಿಗಳ ಭೌತಿಕ ಚಹರೆ ಮಾತ್ರವಲ್ಲ, ಅವರ 
ವ್ಯಕ್ತಿತ್ವದ ಮುಖ್ಯಾಂಶ ಕೂಡ ಪರಿಣಾಮಕಾರಿಯಾಗಿ ಅಭಿವ್ಯಕ್ತವಾಗಿದೆ. ವಿವೇಕಾನಂದರ ಆತ್ಮವಿಶ್ವಾಸಭರಿತ 
ಧೀಮಂತಿಕೆ, ಡಾ.ಹಂಪನಾ ಅವರ ಪ್ರಬುದ್ಧ ಹಸನ್ಮುಖತೆ, ಸ್ವಾದಿಮಠದ ಜೈನ ಸ್ವಾಮೀಜಿಯವರ 
ಗಾಂಭರ‍್ಯ, ವೆಂಕಟೇಶ್ ಅವರ ಸ್ನೇಹಪರ ಮುಗುಳ್ನಗೆ ಇವೆಲ್ಲ ಆಯಾ ವ್ಯಕ್ತಿಗಳ ಪ್ರಧಾನ ಅಂಶಗಳೆAದು 
ಅವರನ್ನು ಬಲ್ಲವರಿಗೆ ಗೊತ್ತು. ಹೀಗೆ ವ್ಯಕ್ತಿತ್ವವನ್ನು ಅಭಿವ್ಯಕ್ತಿಸಲು ಆಯಾ ವ್ಯಕ್ತಿಗಳ ಸ್ವಭಾವವನ್ನು 
ಮೌನವಾಗಿ ಅಧ್ಯಯನ ಮಾಡಿರಬೇಕಾಗುತ್ತದೆ. ಜಿನೇಂದ್ರರು ಅದನ್ನು ಮಾಡಿದ್ದಾರೆಂದು ಈ ವ್ಯಕ್ತಿಗಳ 
ಸಶಕ್ತ ಅಭಿವ್ಯಕ್ತಿಯೇ ಸಾಕ್ಷಿ ನುಡಿಯುತ್ತದೆ.
೪. ಮಾದರಿಗಳು, ಸೆಟ್‌ಗಳು :
ಬೆಂಗಳೂರಿನಲ್ಲಿ ಸ್ಟುಡಿಯೋ ಸ್ಥಾಪಿಸಿ ನೆಲೆಗೊಂಡ ಬಳಿಕ ಜಿನೇಂದ್ರರಿಗೆ ಮಾದರಿಗಳು (moಜeಟs), 
ಸಿನಿಮಾ ಮತ್ತಿತರ ಸೆಟ್‌ಗಳು, ಟ್ಯಾಬ್ಲೋಗಳು, ಪ್ಲಾಸ್ಟರ್ ಆಫ್ ಪ್ಯಾರಿಸ್‌ನ ಶಿಲ್ಪಗಳು ಇತ್ಯಾದಿಗಳನ್ನು 
ರೂಪಿಸುವ ಅವಕಾಶ ಹೆಚ್ಚಾಗಿ ದೊರೆಯಿತು. ಇಂಥ ಕೆಲಸಗಳನ್ನು ನಿರ್ವಹಿಸುವಲ್ಲಿ ಕಲಾವಿದನಿಗೆ ಎರಡು 
ಬಗೆಯ ಸವಾಲುಗಳಿರುತ್ತವೆ. ತನ್ನದೇ ಆದ ಸಹಾಯಕರ ತಂಡವೊAದನ್ನು ರೂಪಿಸಿಕೊಂಡು ಅದರ 
ಸದಸ್ಯರಿಗ ತನ್ನ ಕಲ್ಪನೆಯನ್ನು ವಿವರಿಸಿ ಒಂದೊAದು ಕೆಲಸವನ್ನು ಒಬ್ಬೊಬ್ಬರಿಗೆ ವಹಿಸಿಕೊಟ್ಟು ಅದರ 
ಮೇಲ್ವಿಚಾರಣೆ ಮಾಡುವುದು. ಎರಡನೆಯ ಸವಾಲೆಂದರೆ - ಹೆಚ್ಚು ವೆಚ್ಚದ ಇಂಥ ಪ್ರಾಜೆಕ್ಟ್ಗಳನ್ನು 
ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾಗಿ ಪೂರೈಸಿ ಕೆಲಸವಹಿಸಿದವರಿಗೆ ತೃಪ್ತಿಯನ್ನುಂಟು ಮಾಡುವುದು.
ಜಿನೇಂದ್ರ ಈ ಎರಡೂ ಸಮಸ್ಯೆಗಳನ್ನು ನಿವಾರಿಸಿಕೊಂಡು ಹಲವಾರು ಉತ್ತಮ ಮಾದರಿಗಳು / ಸೆಟ್ 
/ ಶಿಲ್ಪ ಇತ್ಯಾದಿಗಳನ್ನು ವೈಶಿಷ್ಟö್ಯಪೂರ್ಣ ರೀತಿಯಲ್ಲಿ ನಿರ್ಮಿಸಿ ಸೈ ಎನ್ನಿಸಿಕೊಂಡಿದ್ದಾರೆ.
ಹೊಸದುರ್ಗದ `ಗಣೇಶ ಸದನ’ ಸಂಸ್ಥೆಯ ಗಣೇಶೋತ್ಸವಕ್ಕೆ ೨೦೧೩ ರಿಂದಲೂ ಇವರಿಂದಲೇ 
ದೊಡ್ಡ ಸೆಟ್ ಹಾಕಿಸಲಾಗುತ್ತಿದೆ. ಧರ್ಮಸ್ಥಳದಲ್ಲಿ ೨೦೧೮ ರಲ್ಲಿ ನಡೆದ ಗೊಮ್ಮಟ ಮಹಾಮಸ್ತಕಾಭಿಷೇಕದ 
ಸಂದರ್ಭದಲ್ಲಿ ಇವರು ಹಾಕಿದ ೧೨೦’ x ೧೨೦’ ಅಳತೆಯ `ಸಮವಸರಣ’ದ ಸೆಟ್ ಅಲ್ಲಿಗೆ 
ಭೇಟಿಕೊಟ್ಟ ಲಕ್ಷಾಂತರ ಜನರ ಕಣ್‌ಮನಗಳನ್ನು ತುಂಬಿತು. ಈ ಸಮವಸರಣದ ಮೂರ್ತೀಕರಣವೆಂದರೆ 
ಅದರಲ್ಲಿ ನೂರಾರು ವಿವಿಧ ಪ್ರತಿಮೆಗಳು ಹಾಗೂ ಸನ್ನಿವೇಶ ರಚನೆ ಇರುತ್ತದೆ. ತೀರ್ಥಂಕರನಾದವನು 
ಉಪದೇಶ ಕೊಡುವ ಧಾರ್ಮಿಕ ಸಮಾವೇಶವೇ ಸಮವಸರಣ. ಇದು ವೃತ್ತಾಕಾರವಾಗಿರುವ ಒಂದು

ಶೋಭಾಯಮಾನವಾದ ನಗರದಂತಿರುತ್ತದೆ ಎಂದು `ಮಹಾಪುರಾಣ’ದಲ್ಲಿ ಬರುವ ಇದರ ವರ್ಣನೆಯಿಂದ 
ತಿಳಿಯುತ್ತದೆ. ಈ ಸಭಾ ಆವರಣಕ್ಕೆ ನಾಲ್ಕು ಕಡೆಯಿಂದ ಪ್ರವೇಶದ್ವಾರಗಳು, ಪ್ರತಿದ್ವಾರವೂ ಆಕರ್ಷಕ; 
ಅದರೆದುರಲ್ಲಿ ಒಂದು ಮಾನಸ್ಥಂಭ; ಅದರ ಬಳಿ ತಲೆಯ ಮೇಲೆ ಧರ್ಮಚಕ್ರವನ್ನು ಎತ್ತಿ ಹಿಡಿದು ನಿಂತ 
ಸರ್ವಾಹ್ಣ ಯಕ್ಷ; ಇದನ್ನು ದಾಟಿ ಒಳಹೋದರೆ ಒಂದರೊಳಗೊAದರAತಿರುವ ಹಲವು ವೃತ್ತಗಳು. 
ಇವುಗಳಲ್ಲಿ – ಕೊಳಗಳು, ಉದ್ಯಾನಗಳು, ಲತಾ ಮಂಟಪಗಳು; ಕೇಂದ್ರಭಾಗದ ಸುತ್ತಲೂ ಹಲವು 
ವಿಭಾಗಗಳಲ್ಲಿ ಮುನಿಗಳು, ಆರ್ಯಿಕೆಯರು, ಸಾಮಾನ್ಯ ಜನರು, ಪ್ರಾಣಿಗಳು – ಇತ್ಯಾದಿ. ಕೇಂದ್ರದಲ್ಲಿ –
ಮೂರು ಹಂತದ ಒಂದು ಪೀಠ . ಅದು ನಾಲ್ಕು ಸಿಂಹಾಕೃತಿಗಳ ಮೇಲೆ ಆಧಾರಿತ. ಅದರ ಮೇಲೆ 
ಸಹಸ್ರದಳ ಕಮಲ. ಅದರ ಮೇಲೆ ನಾಲ್ಕು ಬೆರಳೆತ್ತರದಲ್ಲಿ ವಿರಾಜಮಾನರಾಗಿರುವ ತೀರ್ಥಂಕರ ಸ್ವಾಮಿ: 
ಇವರು ನಾಲ್ಕೂ ಕಡೆಗೂ ಇರುವ ಎಲ್ಲ ಜೀವಿಗಳಿಗೂ ಕಾಣುತ್ತಿರುತ್ತಾರೆ. ಆದ್ದರಿಂದ ನಾಲ್ಕು ಮೂರ್ತಿಗಳನ್ನು 
ಈ ಕಮಲಪೀಠದ ಮೇಲೆ ಕೂರಿಸಬೇಕು. ಈ ಸ್ವಾಮಿಯ ತಲೆಯ ಮೇಲೆ ಮುಕ್ಕೊಡೆ ಅಥವಾ ಮೂರು 
ಹಂತದಲ್ಲಿರುವAತೆ ಕಾಣುವ ಛತ್ರಿ. ಅದಕ್ಕಿಂತ ಮೇಲೆ ಅಶೋಕವೃಕ್ಷ ! – ಇದು ಸಮವಸರಣದ ರಚನೆ. 
ಇಷ್ಟೆಲ್ಲಾ ವಿವರಗಳನ್ನು ಉಳ್ಳ ಒಂದು ಪ್ರತಿಕೃತಿಯನ್ನು ರೂಪಿಸಬೇಕಾದರೆ ಎಷ್ಟೊಂದು ತನ್ಮಯತೆ, 
ಎಷ್ಟು ಮಂದಿಯ ತೊಡಗಿಸಿಕೊಳ್ಳುವಿಕೆ, ಕಲಾ ಪರಿಣತಿ ಹಾಗೂ ತಾಂತ್ರಿಕ ಪರಿಣತಿ ಇರಬೇಕು 
ಎಂಬುದನ್ನು ನಾವು ಊಹಿಸಕೊಳ್ಳಬಹುದು. ಅದರಲ್ಲೂ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ 
ಅವರ ಪರಿವಾರದವರು ಹಲವು ಕಡೆ ತಿರುಗಾಡಿ ಹಲಬಗೆಯ ಕಲಾಕೃತಿಗಳನ್ನು ನೋಡಿರುವವರು. 
ಅವರನ್ನು ತೃಪ್ತಿಪಡಿಸುವುದು ಅಷ್ಟು ಸುಲಭವಲ್ಲ. ಅವರೆಲ್ಲರೂ ಜಿನೇಂದ್ರರ ಈ ಸಮವಸರಣ 
ಸೃಷ್ಟಿಯಿಂದ ಸಂತೋಷಪಟ್ಟರೆAದರೆ ಈ ನಿರ್ಮಾಣದ ಉತ್ಕೃಷ್ಟತೆ ಎಂಥದ್ದಿರಬೇಕೆAಬುದನ್ನು ನಾವು 
ಊಹಿಸಿಕೊಳ್ಳಬಹುದು. ಕಲಾಭಿಜ್ಞರಾದ ಅವರೇ ಅಷ್ಟು ತೃಪ್ತಿಪಟ್ಟರೆಂದ ಮೇಲೆ ಉಳಿದ ಸಾಮಾನ್ಯ 
ಸಂದರ್ಶಕರು ಇನ್ನೆಷ್ಟು ಸಂತೋಷಗೊAಡಿರಬಹುದೆAಬುದನ್ನು ನಾವು ಊಹಿಸಬಹುದು. ಜಿನೇಂದ್ರ 
ಅವರ ತೊಡಗಿಕೊಳ್ಳುವಿಕೆ, ಕಲಾಪರಿಣತಿ ಆ ಮಟ್ಟದ್ದು.
೨೦೧೯ರ ಡಿಸೆಂಬರಿನಲ್ಲಿ ತುಮಕೂರಿನ ಗಾಜಿನಮನೆಯಲ್ಲೂ ಜಿನೇಂದ್ರರು ಸಮವಸರಣದ 
ಪ್ರತಿಕೃತಿಯೊಂದನ್ನು ತುಮಕೂರಿನ ಜೈನ ಸಮಿತಿಯೊಂದರ ಕೋರಿಕೆಯಂತೆ ರಚಿಸಿದ್ದರು. ಅದು 
ಚೆನ್ನಾಗಿದ್ದರೂ ಧರ್ಮಸ್ಥಳದಲ್ಲಿನಷ್ಟು ಸೊಗಸಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ - ಬಜೆಟ್, ಅಷ್ಟೇ! 
ತುಮಕೂರಿನದು ಸುಮಾರು ಮೂರು ಲಕ್ಷ ರೂಪಾಯಿಗಳ ವೆಚ್ಚದ್ದಾದರೆ, ಧರ್ಮಸ್ಥಳದ ಸಮವಸರಣ 
ಮೂವತ್ತೆöÊದು ಲಕ್ಷ ರೂಪಾಯಿಗಳ ಬಜೆಟ್ಟಿನದು !
ಧರ್ಮಸ್ಥಳದಲ್ಲಿ ಇದೇ ಸಂದರ್ಭದಲ್ಲಿ ರಂಗವೇದಿಕೆಯೊAದನ್ನು ರೂಪಿಸುವ ಜವಾಬ್ದಾರಿಯನ್ನೂ 
ಜಿನೇಂದ್ರರಿಗೆ ನೀಡಲಾಗಿತ್ತು. ೧೮೦’ x ೬೦’ ಅಳತೆಯ ಆ ಬೃಹತ್ ರಂಗವೇದಿಕೆಯಲ್ಲಿ ಪಂಪನ 
`ಆದಿಪುರಾಣ’ದ ನಾಟಕಾಭಿನಯಕ್ಕೆ ಅನುಕೂಲವಾದ ರೀತಿಯಲ್ಲಿ ರೂಪಿಸಬೇಕಾಗಿತ್ತು. ಇದರಲ್ಲಿ ಒಂದು 
ದಿನ – ದೇವೇಂದ್ರನ ಆಸ್ಥಾನವನ್ನು ಮತ್ತೊಂದು ದಿನ ಪೌದನಾಪುರದಲ್ಲಿ ಬಾಹುಬಲಿಯ ಅರಮನೆಯನ್ನು 
(ಅದರಲ್ಲಿ ಆ ಕಾಲದ್ದೆನಿಸುವಂತಹ ಕಿಟಕಿಗಳು, ಸಿಂಹಾಸನ – ಇತ್ಯಾದಿ ಎಲ್ಲ ಸೇರಿ) ಮತ್ತೊಂದು 
ದಿನ ತಪೋಭೂಮಿಯನ್ನು - ಸೃಷ್ಟಿಸಬೇಕಿತ್ತು. ಈ ಮಾರ್ಪಾಟುಗಳು ತುಂಬಾ ಸುಲಭವಾಗಿ ಆಗಲು 
ಸಾಧ್ಯವಾಗುವಂತೆ ರೂಪಿಸಿದ್ದು ಜಿನೇಂದ್ರರ ಹೆಗ್ಗಳಿಕೆ. ಈ ವೇದಿಕೆಯಲ್ಲಿ ನಡೆದ ಪ್ರದರ್ಶನಗಳು ತುಂಬ
ಮೆಚ್ಚುಗೆ ಪಡೆದವು.
ಜಿನೇಂದ್ರ ಅವರು ರಚಿಸಿದ್ದ ಇನ್ನೊಂದು ಸರಳ ಆದರೆ ಉಲ್ಲೇಖಾರ್ಹ ಸೆಟ್ ಎಂದರೆ ಉದಯ ಟಿ.ವಿ. 
ವಾಹಿನಿಯವರು ನಡೆಸುತ್ತಿದ್ದ `ಹರಟೆ’ ಕಾರ್ಯಕ್ರಮಕ್ಕೆ ಹಾಕಿಕೊಟ್ಟ ಸೆಟ್. ಹನ್ನೆರಡು ಕಂತುಗಳವರೆಗೂ 
ಈ ಸೆಟ್ ಅನ್ನು ಅವರು ಬಳಸಿಕೊಂಡರು. ಇಷ್ಟು ಎಪಿಸೋಡ್‌ಗಳಿಗೂ ಇವರೇ ಕಲಾ ನಿರ್ದೇಶಕರೂ 
ಆಗಿದ್ದರು. 
ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ಅರಮನೆಯ ಎದುರು ಹಾಕಿದ್ದ ೮೦’ x ೪೦’ 
ಅಡಿಯ ಸೆಟ್ ಶ್ರೀ ಜಿನೇಂದ್ರರ ಮತ್ತೊಂದು ಸುಂದರ ಸೃಷ್ಟಿ. ಅರಮನೆಯ ಮುಂಭಾಗದ ನೋಟವನ್ನೇ 
ಹೋಲುವಂತಿದ್ದ ಈ ಸೆಟ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬ ಸೊಗಸಾಗಿ ನಡೆದವು. 
ಇದಲ್ಲದೆ ಮತ್ತೊಂದು ಕಡೆ ಇವರು ತಿರುಪತಿ ತಿಮ್ಮಪ್ಪನ ದೇಗುಲದ ಸೆಟ್ ಅನ್ನೂ ಹಾಕಿದ್ದರು. 
ಬೆಂಗಳೂರಿನ ಸುಪ್ರಸಿದ್ಧ ದಿ||ಎಂ.ಎಸ್. ರಾಮಯ್ಯನವರ ಮೊಮ್ಮಗನ ಮದುವೆಗೆ ಭರ್ಜರಿ ಸೆಟ್ ಹಾಕಲೂ 
ಸಹ ಜಿನೇಂದ್ರರನ್ನೇ ಕೋರಲಾಗಿತ್ತು.
ಹೀಗೆಯೇ ವಿವಿಧ ಕಡೆಗಳಲ್ಲಿ ಬೇಡಿಕೆಗೆ ತಕ್ಕಂತೆ ಕಲಾತ್ಮಕ ಸೆಟ್‌ಗಳನ್ನು ಶೀಘ್ರವಾಗಿ 
ನಿರ್ಮಿಸಿಕೊಡುವುದರಲ್ಲಿ ಜಿನೇಂದ್ರ ಸಿದ್ಧಹಸ್ತರು. ಅವರ ಕಲ್ಪನಾಶಕ್ತಿ ಹಾಗೂ ಚುರುಕುತನ ಆ ಮಟ್ಟದ್ದು. 
ಬೆಟ್ಟವೊಂದರ ಮೇಲೆ ನಿಂತು ಬಾಣ ಬಿಡಲು ಸಿದ್ಧನಾಗುತ್ತಿರುವ ಶ್ರೀರಾಮ ದೇವಾಲಯವೊಂದರ 
ಮುಂಭಾಗ- ಇತ್ಯಾದಿ ಹಲವು ಬಗೆಯ ಸೆಟ್‌ಗಳನ್ನು ಈ ಕಲಾವಿದ ಒಂದೆರಡೇ ದಿನಗಳಷ್ಟು ಅಲ್ಪ 
ಸಮಯದಲ್ಲಿ ರೂಪಿಸಬಲ್ಲರು. ಅವರ ಮೆದುಳು ಮತ್ತು ಕೈಗಳು ಅಷ್ಟು ಚುರುಕು !
ಇದೇ ರೀತಿ ಇವರು ನಿರ್ಮಿಸಿದ – ವೈಕುಂಠ ದರ್ಶನ, ಚಿತ್ರಕೂಟದಲ್ಲಿ ಶ್ರೀರಾಮ, ಕೈಲಾಸದರ್ಶನ, 
ಹೊಯ್ಸಳ ದೇವಾಲಯ,- ಇವೇ ಮೊದಲಾದ ಆಕರ್ಷಕ ಸೆಟ್‌ಗಳು ನೋಡುಗರ ಮನ ಮೆಚ್ಚಿಸಿವೆ.
ಜಿನೇಂದ್ರ ಅವರು ಕನಸುಕಂಡು ಯಾರೂ ಲಕ್ಷಿಸದೇ ಮೂಲೆಗುಂಪಾದ ಒಂದು ಯೋಜನೆಯಿದೆ. 
ಅದೆಂದರೆ - ಬೆಂಗಳೂರಿನ ಮೆಟ್ರೋ ನಿಲ್ದಾಣವೊಂದನ್ನು ಹೊಯ್ಸಳ ದೇಗುಲವೊಂದರ ರೀತಿಯಲ್ಲಿ 
ನಿರ್ಮಿಸುವುದು ! ಇದಕ್ಕೆ ಅವರಿಗೆ ಪ್ರೇರಣೆಯಾದ ಅಂಶವೆAದರೆ -``ಅಕಸ್ಮಾತ್ ಹೊಯ್ಸಳರ ಕಾಲದಲ್ಲಿ 
ಮೆಟ್ರೋಗಳಿದ್ದಿದರೆ ಆಗ ಅವರು ನಿರ್ಮಿಸುತ್ತಿದ್ದ ಸ್ಟೇಷನ್‌ಗಳು ಹೇಗಿರುತ್ತಿದ್ದವು ?’’- ಎಂಬ ಕಲ್ಪನೆಯ 
ಮಿಂಚು ಅವರ ತಲೆಯಲ್ಲಿ ಮೂಡಿದ್ದು. ಅದೊಂದು ಸುವರ್ಣ ಕ್ಷಣ. ಅದೇ ಕಲ್ಪನೆಯನ್ನು ಹಿಂಬಾಲಿಸಿ 
ಅವರು ಕಂಪ್ಯೂಟರಿನಲ್ಲಿ ವಿನ್ಯಾಸವೊಂದನ್ನು ರೂಪಿಸಿದರು. ತಮ್ಮ ಚಿತ್ರ ಪ್ರದರ್ಶನದ ವೇಳೆಯಲ್ಲಿ 
ಅದನ್ನು ಪ್ರದರ್ಶಿಸಿದರು ಕೂಡ. ತುಂಬ ಸೊಗಸಾದ ವಿನ್ಯಾಸವದು. ಆದರೆ ಜಿನೇಂದ್ರರು ಅದನ್ನು ಆಗಿನ 
ಮುಖ್ಯಮಂತ್ರಿಗಳಿಗಾಗಲೀ, ಮೆಟ್ರೋ ಯೋಜನೆಯ ಮುಖ್ಯ ನಿರ್ದೇಶಕರಿಗಾಗಲೀ ತೋರಿಸಿ ವಿವರಿಸಲು 
ಸಾಧ್ಯವಾಗಲಿಲ್ಲ.
ಹಾಗೊಮ್ಮೆ ಪ್ರಯತ್ನಿಸಿ ಅದು ಒಪ್ಪಿಗೆ ಪಡೆದಿದ್ದರೆ ಬೆಂಗಳೂರಿನಲ್ಲಿ ಪ್ರಪಂಚದಲ್ಲೇ ವಿಶಿಷ್ಟವಾದ 
ಅತ್ಯಾಕರ್ಷಕ ಮೆಟ್ರೋ ನಿಲ್ದಾಣವೊಂದು ಎದ್ದು ನಿಲ್ಲುತ್ತಿತ್ತು.
``ಆದರೆ ಈ ರೀತಿಯ ವಿನ್ಯಾಸಕ್ಕೆ ತುಂಬ ಹಣ ಖರ್ಚಾಗುವುದಲ್ಲವೆ?’’ – ಎಂದು ನಾನೊಮ್ಮೆ ಕೇಳಿದೆ 
ಅವರನ್ನು.
``ಖಂಡಿತಾ ಇಲ್ಲ ಸರ್, ಈಗ ಏನು ಖರ್ಚಾಗಿದೆಯೋ ಅದರ ಕಾಲುಭಾಗದಷ್ಟು ಮಾತ್ರ ಹೆಚ್ಚು 
ಖರ್ಚಾಗುತ್ತಿತ್ತಷ್ಟೆ’’-ಎಂದು ಅವರು ಈಗ ಬಳಸಿರುವ ವಸ್ತುಗಳನ್ನೇ ಹೇಗೆ ಆ ವಿನ್ಯಾಸಕ್ಕೂ ಬಳಸಬಹುದಿತ್ತು 
ಎಂಬುದನ್ನು ವಿವರಿಸಿದರು.
ಮುಂದೊAದು ಮೆಟ್ರೋ ಸ್ಟೇಷನ್‌ಗಾದರೂ ಆ ವಿನ್ಯಾಸ ಒಪ್ಪಿಗೆ ಪಡೆದರೆ ಅದು ನಿಜಕ್ಕೂ ಒಂದು 
ಮಹತ್ವದ ಕಲಾಕೃತಿಯಂತೆ ಎದ್ದುನಿಲ್ಲುತ್ತದೆ.
ಈ ವಿನ್ಯಾಸದ ಕಲ್ಪನಾಶೀಲತೆ ಮತ್ತು ಅನನ್ಯತೆಯನ್ನು ಕಂಡೇ ಇವರಿಗೆ ಶಂಕರ್‌ನಾಗ್ ಪ್ರಶಸ್ತಿಯನ್ನು 
ಬೆಂಗಳೂರಿನ ಪ್ರತಿಷ್ಠಿತ ಖಿhe ಖighಣ ಇveಟಿಣ ಸಂಸ್ಥೆಯವರು ಹತ್ತು ಸಾವಿರ ರೂಪಾಯಿಗಳ ನಿಧಿ 
ಸಹಿತವಾಗಿ ಅರ್ಪಿಸಿ ಸನ್ಮಾನಿಸಿದರು. ಹಾಗೆ ಇವರನ್ನು ಆಯ್ಕೆ ಮಾಡುವ ಮುನ್ನ ಇವರ ಸ್ಟುಡಿಯೋಗೆ 
ಬಂದು ಇವರ ಇತರ ಕಲಾಕೃತಿಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಂಡರು.
ಕೆಲವೊಮ್ಮೆ ಇವರು - ಹಲವು ಪ್ರಾಚೀನಾವಶೇಷಗಳು / ದೇವಾಲಯಗಳಿರುವ ಸೆಟ್‌ಗಳನ್ನೂ 
ನಿರ್ಮಿಸಿರುವುದುಂಟು.
ಬೃಹತ್ ಮೂರ್ತಿಗಳು :
ನೂರಾರು ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್, ಜೇಡಿಮಣ್ಣು ಇತ್ಯಾದಿಗಳಲ್ಲೂ, ಒಂದೆರಡು 
ಮೂರ್ತಿಗಳನ್ನು ಕಲ್ಲಿನಲ್ಲಿಯೂ ರೂಪಿಸಿರುವ ಜಿನೇಂದ್ರ ಅವರು ರೂಪಿಸಿರುವ ಬಗ್ಗೆ ಹಿಂದೆ ಹೇಳಲಾಗಿದೆ. 
ಈಗ ಅವರು ಮಾಡಿರುವ ದೊಡ್ಡ ಗಾತ್ರದ ಮೂರ್ತಿ ಶಿಲ್ಪಗಳ ಬಗ್ಗೆ ಒಂದಷ್ಟು ತಿಳಿಯಬಹುದು.
ಬೆಂಗಳೂರಿನ ಅರಮನೆ ಆವರಣದಲ್ಲಿ ೨೦೧೬ ರಲ್ಲಿ ನಡೆದ ವೈದ್ಯ ಸಮಾವೇಶಕ್ಕಾಗಿ ಧನ್ವಂತರಿಯ 
ಮೂರ್ತಿಯೊಂದನ್ನು ನಿರ್ಮಿಸಿ ಕೊಡಲು ಶ್ರೀ ಜಿನೇಂದ್ರ ಅವರನ್ನು ಕೋರಲಾಯಿತು. ಆ ವಿಶಾಲ 
ಮೈದಾನದಲ್ಲಿ , ಬೃಹತ್ ಪೆಂಡಾಲಿನೆದರು ನಿಲ್ಲಿಸಲು ಸಾಕಷ್ಟು ಎತ್ತರದ ಮೂರ್ತಿಯೇ ಬೇಕಿತ್ತು. ಜಿನೇಂದ್ರರು 
ಬರೋಬ್ಬರಿ ೧೨೫ ಅಡಿ ಎತ್ತರದ ಮೂರ್ತಿಯನ್ನೇ ನಿರ್ಮಿಸಿದರು ! ಬಹುಶಃ ಅದು ಅವರು ಈವರೆಗೆ 
ನಿರ್ಮಿಸಿದ ಮೂರ್ತಿಗಳಲ್ಲೇ ಅತಿ ಎತ್ತರದ್ದು! ಕೇವಲ ೧೫ ದಿನದಲ್ಲಿ ಅದನ್ನು ನಿರ್ಮಿಸಿದ್ದರು.
ಧನ್ವಂತರಿ ದೇವವೈದ್ಯ. ಜನರ ರೋಗ ನಿವಾರಣೆಗೆಂದು ವಿವಿಧ ಔಷಧಗಳನ್ನು ಕೊಟ್ಟವನು ಈ 
ದೇವರೇ ಎಂದು ಆಯುರ್ವೇದ ಗ್ರಂಥಗಳಲ್ಲಿ ಹೇಳಲಾಗಿದೆ. ಆ ಗ್ರಂಥಾದಿಯಲ್ಲಿ ಧನ್ವಂತರಿಯನ್ನು ಹೀಗೆ 
ಸ್ತುತಿಸಲಾಗಿದೆ –
ನಮಾಮಿ ಧನ್ವಂತರಿಮಾದಿದೇವA
ಸುರಾಸುರೈರ್ವAದಿತ ಪಾದಪದ್ಮಂ |
ಲೋಕೇ ಜರಾಋಗ್‌ಭಯ ಮೃತ್ಯುನಾಶಂ
ದಾತಾರಮೀಶA ವಿವಿಧೌಷಧೀನಾಂ ||
(ಸುರರು ಅಸುರರಿಂದ ವಂದಿಸಲ್ಪಡುವ ಪಾದಕಮಲಗಳನ್ನುಳ್ಳ, ಲೋಕದಲ್ಲಿ ಮುಪ್ಪು, ರೋಗ, ಭಯ –
ಇವೆಲ್ಲ ನಾಶವಾಗಲೆಂದು ವಿವಿಧ ಔಷಧಿಗಳನ್ನು ತಂದುಕೊಟ್ಟ ಆದಿ ದೇವನಾದ ಧನ್ವಂತರಿಯನ್ನು ನಾನು 
ವಂದಿಸುತ್ತೇನೆ.)
ಆ ಸಮಾವೇಶಕ್ಕೆ ಬಂದವರೆಲ್ಲರೂ ಈ ಮೇಲಿನ ಸ್ತೋತ್ರದ ಸಾಕ್ಷಾತ್ ಅಭಿವ್ಯಕ್ತಿಯಂತಿರುವ ಆ 
ಮೂರ್ತಿಯನ್ನು ನೋಡಿ ಸಂತೋಷಪಟ್ಟರು. ಈ ಧನ್ವಂತರಿ ಮೂರ್ತಿಯ ಮುಖ ಮತ್ತು ಕೈಗಳನ್ನು 
ಮಾತ್ರ ಥರ್ಮಾಕೋಲ್‌ನಿಂದ ಮಾಡಿ ಇಡೀ ದೇಹವನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್‌ನಲ್ಲಿ ರೂಪಿಸಿ ಒಂದು 
ಹಂದರದ ಆಧಾರಕ್ಕೆ ಜೋಡಿಸಿ ರೂಪಿಸಲಾಗಿತ್ತು. ಈ ಮೂರ್ತಿ `ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ 
ದಾಖಲಾಗಿದೆ.
ಗಣಪತಿ ಉತ್ಸವದ ಮಂಟಪವೊAದರಲ್ಲಿರಿಸಲು ಅಗತ್ಯವಾದ ಶಿವಾಜಿ ಮಹಾರಾಜರ ಮೂರ್ತಿಯೊಂದನ್ನು 
ಜಿನೇಂದ್ರರು ನಿರ್ಮಿಸಿದ್ದುಂಟು. ಇಪ್ಪತ್ತೆöÊದು ಅಡಿ ಎತ್ತರದ ಈ ಮೂರ್ತಿಯನ್ನು ಥರ್ಮಾಕೋಲ್‌ನಿಂದ 
ಮಾಡಿದ್ದರು. ಸಿಂಹಾಸನದ ಮೇಲೆ ಗತ್ತಿನಿಂದ ಕುಳಿತಂತಿದ್ದ ಈ ಶಿವಾಜಿ ಮಹಾರಾಜ್ ಕಲಾಕೃತಿಯ 
ಶೋಭೆ ಬಹು ಪ್ರಶಂಸೆಯನ್ನು ಪಡೆದಿತ್ತು.
`ಕೆ.ಜಿ.ಎಫ್’ ಚಲನಚಿತ್ರಕ್ಕೆಂದು ಮಾರಿದೇವತೆಯ ಮೂರ್ತಿಯನ್ನು ನಿರ್ಮಿಸಿಕೊಡಲು ಕೇಳಿದಾಗ ಇಪ್ಪತ್ತು 
ಅಡಿ ಎತ್ತರದ ಮೂರ್ತಿಯನ್ನು ನಿರ್ಮಿಸಿದರು. ಯಶ್ ನಟನೆಯ ಈ ಚಿತ್ರದ ಪರಾಕಾಷ್ಠೆಯ ದೃಶ್ಯದಲ್ಲಿ 
ಈ ಮೂರ್ತಿಯ ಬಳಕೆಯಾಗಿತ್ತು. ಮದಗಜ ಚಲನಚಿತ್ರಕ್ಕಾಗಿ ವಿಶಿಷ್ಟ ವಿನ್ಯಾಸದ ಖುರ್ಚಿಯೊಂದನ್ನು 
ರೂಪಿಸಲು ಕೇಳಿದಾಗ ಎಲ್ಲಾ ಬಿಟ್ಟು ಚೇಳಿನ ಆಕಾರವನ್ನು ಆರಿಸಿಕೊಂಡ ಜಿನೇಂದ್ರ ಏಳು ಅಡಿ ಎತ್ತರದ 
ಆಸನವನ್ನು ರೂಪಿಸಿದರು. ಚೇಳಿನ ಬೆನ್ನ ಮೇಲೆ ವ್ಯಕ್ತಿ ಕೂರುವ ಜಾಗವಿದ್ದು ಚೇಳಿನ ಬಾಲದ ಭಾಗವು 
ವ್ಯಕ್ತಿಯ ಬೆನ್ನಕಡೆಯಿಂದ ಬಾಗಿ ಮೇಲೇರಿ ಕೂತ ವ್ಯಕ್ತಿಯ ತಲೆಯಮೇಲೆ ಕೊನೆಗೊಳ್ಳುವಂತಿತ್ತು. ಈ 
ವಿಶಿಷ್ಟ ವಿನ್ಯಾಸ ಹಲವರನ್ನು ಬೆರಗಾಗಿಸಿತು.
ಶ್ರೀ ಜಿನೇಂದ್ರರು ನಿರ್ಮಿಸಿದ್ದ ಒಂದು ಗಣೇಶನ ಮೂರ್ತಿ ೨೫ ಅಡಿ ಎತ್ತರವಾಗಿತ್ತು. 
ಬೃಹತ್ ಬುದ್ಧ ಮೂರ್ತಿಗಳನ್ನೂ ಸಹ ಕೆಲವು ಸಭೆ, ಸಮಾವೇಶಗಳಿಗಾಗಿ ಜಿನೇಂದ್ರರು ನಿರ್ಮಿಸಿದ್ದಾರೆ. 
ಕಲ್ಲಿನಲ್ಲಿ ಕಡೆದಿರುವ ಬುದ್ಧಮೂರ್ತಿ ಮಾತ್ರ ಸುಮಾರು ಮೂರು ಅಡಿ ಎತ್ತರದ ಎದೆ ಮಟ್ಟದ ಪ್ರತಿಮೆ. 
ವರನಟ ರಾಜ್‌ಕುಮಾರ್ ಸೇರಿದಂತೆ ಹಲವರ ಎದೆಮಟ್ಟದ ಪ್ರತಿಮೆಗಳನ್ನೂ ಈ ಕಲಾವಿದ 
ನಿರ್ಮಿಸಿರುವುದಲ್ಲದೆ ಸ್ವಾಮಿ ವಿವೇಕಾನಂದರ ನಿಂತಿರುವ ಭಂಗಿಯ ಆಳೆತ್ತರದ ಪ್ರತಿಮೆಯನ್ನೂ 
ಮಾಡಿದ್ದಾರೆ. ಸಿದ್ಧಗಂಗೆ ಮಹಾಯತಿ ಡಾ.ಶಿವಕುಮಾರ ಸ್ವಾಮೀಜಿಯವರು ಖುರ್ಚಿಯ ಮೇಲೆ 
ಸರಳವಾಗಿ ಕುಳಿತಿರುವ ಮೂರ್ತಿಯನ್ನು ಜಿನೇಂದ್ರರು ರೂಪಿಸಿದ್ದು ಆ ಪೂಜ್ಯರನ್ನು ಎದುರಿಗೇ ಕಂಡಷ್ಟು 
ಸಂತೋಷವನ್ನು ಕೊಡುತ್ತಿತ್ತು.
ಅನೇಕ ಕಡೆಗಳಲ್ಲಿ ಮ್ಯೂರಲ್‌ಗಳನ್ನೂ ರಚಿಸಿರುವ ಶ್ರೀ ಜಿನೇಂದ್ರ ಎಲ್ಲ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು 
ರಚಿಸಿರುವ ಒಬ್ಬ ಪ್ರತಿಭಾಶಾಲಿ ಕಲಾವಿದ.
ಜಿನೇಂದ್ರರ ಕಲಾಭಿವ್ಯಕ್ತಿಗೆ ಮಿತಿಗಳಿಲ್ಲ. ಅವರು ಅಸಂಗತ ಶೈಲಿಯಲ್ಲಿ, ರೊಮ್ಯಾಂಟಿಕ್ ಕಲ್ಪನೆಯಲ್ಲಿ, 
ಸಾಂಪ್ರದಾಯಿಕ ರೀತಿಯಲ್ಲಿ, ಕೊಲಾಜ್ ತಂತ್ರದಲ್ಲಿ ಹೀಗೆ ಹಲವು ಬಗೆಯ ಶೈಲಿಗಳನ್ನು ತಂತ್ರಗಳನ್ನು 
ಅಗತ್ಯಕ್ಕೆ ತಕ್ಕಂತೆ ಬಳಸಬಲ್ಲರು. ಹೀಗೆ ಸಲೀಸಾಗಿ ಒಂದು ಮಾಧ್ಯಮದಿಂದ ಮತ್ತೊಂದಕ್ಕೆ, ಒಂದು 
ಶೈಲಿಯಿಂದ ಇನ್ನೊಂದಕ್ಕೆ ಹಾರಬಲ್ಲ ಕಲಾವಿದರ ಸಂಖ್ಯೆ ಕಡಿಮೆ. ಆದ್ದರಿಂದಲೇ ಶ್ರೀ ಜಿನೇಂದ್ರರು 
ಎಲ್ಲಿಯೂ ಸಲ್ಲಬಲ್ಲ, ಯಾವ ಬಗೆಯ ಕಲಾಕೈಂಕರ್ಯಕ್ಕಾದರೂ ಬಳಸಿಕೊಳ್ಳಲು ಸಾಧ್ಯವಿರುವ 
ಕಲಾವಿದರಾಗಿದ್ದಾರೆ.
ಸಿನೆಮಾರಂಗದ ನಂಟು :
ಶ್ರೀ ಜಿನೇಂದ್ರರು ಚಿತ್ರರಂಗದಲ್ಲಿ ಮಾಡಿರುವ ಒಂದೆರಡು ಕೆಲಸಗಣನ್ನು ಹಿಂದೆಯೇ ಹೇಳಿದೆ. 
ಕೆ.ಜಿ.ಎಫ್. ಚಿತ್ರಕ್ಕಾಗಿ ಗೃಹತ್ ಮಾರಿಯ ಮೂರ್ತಿ ನಿರ್ಮಿಸಿದ್ದು, `ಮದಗಜ’ಕ್ಕಾಗಿ ಚೇಳಿನ ರೂಪದ 
ಆಸನ ತಯಾರಿಸಿದ್ದು ಆ ಉಲ್ಲೇಖಗಳು.
ಆದರೆ ಚಿತ್ರರಂಗದೊಡನೆ ಜಿನೇಂದ್ರರ ನಂಟು ಇಷ್ಟಕ್ಕೇ ನಿಲ್ಲುವುದಿಲ್ಲ. ಅವರ ಈ ನಂಟು 
ಆರಂಭವಾದದ್ದು `ಪೊರ್ಕಿ’- ಎಂಬ ಸಿನಿಮಾದೊಂದಿಗೆ. `ವಿರಾಟಪರ್ವ’- ಸೇರಿದಂತೆ ಕೆಲವು ಚಿತ್ರಗಳಿಗೆ 
ಕಲಾನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಪುರಸ್ಕಾರಗಳು :
ಶ್ರೀ ಎಂ.ಎಂ.ಜಿನೇಂದ್ರರ ಈ ಬಹುಮುಖೀ ಕಲಾಪ್ರತಿಭೆಯನ್ನು ಗುರುತಿಸಿದ ಕೆಲವು ಸಂಸ್ಥೆಗಳು 
ಇವರನ್ನು ಸನ್ಮಾನಿಸಿರುವುದಂಟು. ಈ ಪೈಕಿ ಈಗಾಗಲೇ ಉಲ್ಲೇಖಿಸಿರುವ `ಶಂಕರ್‌ನಾಗ್ ಪ್ರಶಸ್ತಿ’ಯಲ್ಲದೆ, 
ಶ್ರವಣಬೆಳ್ಗೊಳದ ಶ್ರೀಗಳವರು ೨೦೧೮ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ -``ಆದರ್ಶ ಯುವ 
ಪ್ರಶಸ್ತಿ’’ಯನ್ನು ನೀಡಿ ಗೌರವಿಸಿದ್ದಾರೆ. ಇದಲ್ಲದೆ ಇವರನ್ನು ಕರೆದು ಸನ್ಮಾನಿಸಿರುವ ಸಂಸ್ಥೆಗಳೆಷ್ಟೋ !
ಸಾಮಾಜಿಕ ಕರ‍್ಯಗಳು :
ಶ್ರೀ ಜಿನೇಂದ್ರರು ಕಲಾವಿದರಾಗಿರುವಂತೆಯೇ ಸಮಾಜವನ್ನು ಆಧ್ಯಾತ್ಮಿಕ ಹಾಗೂ ಕಲಾಭಿಮುಖವಾಗಿ 
ಜಾಗೃತಗೊಳಿಸುವ, ಅದರಲ್ಲಿ ತೊಡಗಿಸಿಕೊಳ್ಳಬಯಸುವ ಸಂಘಟಕರೂ ಆಗಿದ್ದಾರೆ. ಅಲ್ಪಸಂಖ್ಯಾತ 
ಜೈನಧರ್ಮಕ್ಕೆ ಸೇರಿದ ಇವರು ಜೈನಧರ್ಮದ ಮೂಲತತ್ವವಾದ ಅಹಿಂಸೆ ಇತ್ಯಾದಿಗಳ ಸಂಬAಧಿ 
ಚಟುವಟಿಕೆಗಳಲ್ಲೂ, ಜೈನ ಸಮುದಾಯದಲ್ಲಿ ಕಲಾಭಿರುಚಿಯನ್ನು ಹೆಚ್ಚಿಸುವ ಕಾರ್ಯದಲ್ಲೂ ಆಸಕ್ತರು.
`ಜೈನ್ ಮಿಲನ್’ – ಎಂಬುದೊAದು ಅಖಿಲ ಭಾರತೀಯ ಜೈನ ಸಂಘಟನೆ. ಅದರ ಶಾಖೆಗಳು 
ಭಾರತಾದ್ಯಂತ ಇವೆ. ಅವು ನಿಯಮಿತವಾಗಿ ಸಭೆ ಸೇರುತ್ತವೆ. ವರ್ಷದಲ್ಲಿ ಒಂದೆರಡು ಬಾರಿ ವಿಶೇಷ 
ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತವೆ. ಆರೋಗ್ಯ ಶಿಬಿರದಂತಹ ಸಾರ್ವಜನಿಕ ಕ್ಷೇಮದ 
ಕಾರ್ಯಕ್ರಮಗಳನ್ನು ನಡೆಸುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅನ್ನೂ ನೀಡುತ್ತವೆ.
ಶ್ರೀ ಜಿನೇಂದ್ರರು ಬೆಂಗಳೂರಿನಲ್ಲಿ `ಸುಹಾಸ್ತಿ ಜೈನ್‌ಮಿಲನ್’ ಎಂಬ ಶಾಖೆಯೊಂದನ್ನು ಆರಂಭಿಸಿದ್ದಾರೆ. 
ಇದರ ಮೂಲಕ ಯುವ ಜೈನರನ್ನು ಸಂಘಟಿಸಿ ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.
``ಕರ್ನಾಟಕದಲ್ಲಿ ಜೈನಧರ್ಮ’’, `ಕರ್ನಾಟಕದ ಜೈನರು’ ಎಂಬೆರಡು ವಾಟ್ಸಪ್ ಗ್ರೂಪ್‌ಗಳನ್ನು ರೂಪಿಸಿ 
ಅವುಗಳ ಮೂಲಕ ನಿಯಮಿತವಾಗಿ ಉಪನ್ಯಾಸಗಳು, ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಈ ತಂಡದಿAದ 
ಅಂತಾರಾಷ್ಟಿçÃಯ `ಜಿನಸಮ್ಮಿಲನ’ವನ್ನೂ ಇವರು ೨೦೨೦ರ ಡಿಸೆಂಬರ್‌ನಲ್ಲಿ ಆಯೋಜಿಸಿದ್ದರು. ಇದರ 
ಫಲವಾಗಿ ದೇಶವಿದೇಶಗಳಲ್ಲಿರುವ ಜೈನರು ಒಂದು ವೇದಿಕೆಯಲ್ಲಿ ಸೇರಲು ಅವಕಾಶವಾಯಿತು. 
ಈ ಆನ್‌ಲೈನ್ ಸಮಾವೇಶದಲ್ಲಿ ಸ್ವರಚಿತ ಕವಿತಾ ವಾಚನ, ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, 
ಕಿರುವಿಡಿಯೋಗ್ರಹಣ ಸ್ಪರ್ಧೆ ಇವನ್ನೆಲ್ಲಾ ಸಂಘಟಿಸಿದರು.
ಹೀಗೆ ಕಲೆಯ ಬಹುಮುಖೀ ಸಾಧ್ಯತೆಗಳ ಅನಾವರಣದಲ್ಲಿ ತೊಡಗಿರುವ ಶ್ರೀ ಎಂ.ಎA.ಜಿನೇAದ್ರರವರು 
ಇನ್ನೂ ಯುವಾವಸ್ಥೆಯಲ್ಲಿರುವಾಗಲೇ ಸಾಕಷ್ಟು ದೂರ ಕ್ರಮಿಸಿದ್ದಾರೆ. ಆದರೆ ಅವರ ಅನ್ವೇಷಕ ಪ್ರವೃತ್ತಿ 
ಇನ್ನೂ ನವೋನವವಾದುದನ್ನು ಕಂಡರಿಸಲು ಹಾತೊರೆಯುತ್ತಲೇ ಇದೆ. ಅದಕ್ಕಾಗಿ ಪ್ರಯತ್ನಿಸುವಲ್ಲಿ 
ಅವರಿಗೆ ದಣಿವಿಲ್ಲ. ಇವರ ರೇಖಾಚಿತ್ರಗಳನ್ನು ನೋಡಿ ಖ್ಯಾತ ಕಲಾವಿಮರ್ಶಕ ಕೆ.ವಿ.ಸುಬ್ರಹ್ಮಣ್ಯಂ 
-``ಇಲ್ಲಿ ಪರಂಪರೆ ಮತ್ತು ಸಮಕಾಲೀನತೆಗಳ ಮುಖಾಮುಖಿ ಇದ್ದಂತೆ ಎಂದು ಉದ್ಗರಿಸಿರುವುದು 
ಯಥಾರ್ಥವಾಗಿರುವುದಷ್ಟೇ ಅಲ್ಲ – ಈ ಮಾತನ್ನು ಅವರ ಇತರ ಹಲವು ಬಗೆಯ ಸೃಷ್ಟಿಗಳಿಗೂ 
ಅನ್ವಯಿಸಬಹುದಾಗಿದೆ. ಅವರ ಪ್ರತಿಭೆ ಸರ್ವಂಕಷವಾದದ್ದು.
ಸರಳ ವ್ಯಕ್ತಿಯಾದ ಶ್ರೀ ಜಿನೇಂದ್ರರ ಪ್ರಯೋಗಶೀಲತೆ ಹಾಗೂ ಪರಿಶ್ರಮ ದೊಡ್ಡ ಮಟ್ಟದ್ದು. ಭವಿಷ್ಯದಲ್ಲಿ 
ಇವರು ತುಂಬ ಎತ್ತರಕ್ಕೇರುವುದರಲ್ಲಿ ಸಂಶಯವಿಲ್ಲ.


No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...