ಇಂದು ಪ್ರವಾಸಿ ಸ್ಥಳಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿರುವುದು ಕಾಲಿ ವಾಟರ್ ಬಾಟಲ್ ಗಳು


ಸ್ವಚ್ಛಂದ ಹಸಿರಿನ ಸಿರಿ ಮುಳ್ಳಯ್ಯ ಋಷಿ ತಪೋಭೂಮಿ ಮುಳ್ಳಯ್ಯನಗಿರಿ ಕರ್ನಾಟಕದ ಅತ್ಯಂತ ಎತ್ತರದ ಶಿಖರ ಚಾರಣಪ್ರಿಯರ ಸ್ವರ್ಗ ಇಲ್ಲಿಗೆ ನಮಸ್ತೆ ಇಂಡಿಯಾ ಪೌಂಡೇಶನ್ ಮುಖಾಂತರ ಪ್ಲಾಸ್ಟಿಕ್ ಮುಕ್ತ ಮುಳ್ಳಯ್ಯನಗಿರಿ ಟ್ರಕಿಂಗ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಮೇಲ್ನೋಟಕ್ಕೆ ಸ್ವಚ್ಛವಾಗಿ ಕಾಣಿಸುವ ಮುಳ್ಳಯ್ಯನಗಿರಿ ಡ್ರಿಂಕಿಂಗ್ ವಾಟರ್ ಬಾಟಲ್ ಮತ್ತು ಹಾರ್ಡ್ ಡ್ರಿಂಕ್ಸ್ ಬಾಟಲ್ ನಿಂದ ಕಲುಷಿತಗೊಂಡಿದೆ. 65 ಜನರು ಇದ್ದ ನಮ್ಮ ತಂಡ ತೆಗೆದುಕೊಂಡು ಹೋಗಿದ್ದ ಅಷ್ಟು ಚೀಲಗಳು ಕೆಲವೇ ಗಂಟೆಗಳಲ್ಲಿ ಭರ್ತಿಯಾಗಿದ್ದವು ಈ ಮುಖೇನ ನಮಗನಿಸಿದ್ದು *ಇಂದು ಪ್ರವಾಸಿ ಸ್ಥಳಗಳಿಗೆ ದೊಡ್ಡ ಶಾಪವಾಗಿ ಕಾಡುತ್ತಿರುವುದು ಕಾಲಿ ವಾಟರ್ ಬಾಟಲ್ ಗಳು* ಹೌದು ಪ್ರವಾಸಿಸ್ಥಳ ಸ್ಥಳಗಳಿಗೆ ಭೇಟಿ ನೀಡುವ ಚಾರಣಪ್ರಿಯರಿಗೆ ನಮ್ಮದೊಂದು *ಕಳಕಳಿಯ ಮನವಿ ನೀವು ಕಾಲಿ ವಾಟರ್ ಬಾಟಲ್ ಗಳನ್ನು ಅಲ್ಲಿ ಬಿಸಾಕಿ ಬರಬೇಡಿ* ಸಾಧ್ಯವಾದರೆ ಮನೆಯಿಂದಲೇ ತೆಗೆದುಕೊಂಡು ಹೋಗಿ ಮತ್ತೆ ಪುನಹ ತನ್ನಿ ಅಲ್ಲಿ ಬಿಸಾಕಿ ಬರಬೇಡಿ
        ಚಿತ್ತಾ ಜಿನೇಂದ್ರ ಎಂ ಎಂ





No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...