#chittha_ganesh_set_work
 #my_ganesh_set_work
ಪ್ರತಿವರ್ಷದಂತೆ ಈ ವರ್ಷವೂ ನಾವು ಗಣೇಶ ಚತುರ್ಥಿಗೆ ಕೆಲವು ಸೆಟ್ ಗಳನ್ನು ಹಾಕಿದ್ದೇವೆ ಅದರಲ್ಲಿ ಪ್ರಮುಖವಾದ ಸೆಟ್ ಇದು. ತಮಿಳುನಾಡಿನ ಕಂಚಿಯಲ್ಲಿ ಇರುವ ವರದರಾಜ ಸ್ವಾಮಿ ದೇವಾಲಯದ ಸೆಟ್. 40 ವರ್ಷಕ್ಕೊಮ್ಮೆ ದೇವಸ್ಥಾನದ ಕಲ್ಯಾಣಿ ಇರುವ ವರದರಾಜ ಸ್ವಾಮಿಯನ್ನು ಹೊರತೆಗೆದು ಪೂಜೆ ಲಾಗುತ್ತದೆ.  ಈ  ವರ್ಷ ಅಂತಹ ಮಹಾನ್ ಪೂಜೆಗೆ ಸಾಕ್ಷಿಯಾಗಿತ್ತು ತಮಿಳುನಾಡಿನ ಕಂಚಿಪುರಂ  ಈ ಸಂದರ್ಭದಲ್ಲಿ ಕೆಲವು  ಜನಸಾಮಾನ್ಯರಿಗೆ ಹೋಗಿ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ.  ಈ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ನಾವು ನಮ್ಮೂರಿನಲ್ಲಿ ಈ ಬಾರಿಯ ಗಣೇಶ ಉತ್ಸವದ ಸೆಟ್ಟನ್ನು ಇದೇ ತರ ಹಾಕಬೇಕು ಅಂದುಕೊಂಡಿದ್ದರು ಡೆಂಕಣಿಕೋಟೆ ಯುವಕರ ತಂಡ ಈ ವಿಷಯವನ್ನು ನನ್ನೊಂದಿಗೆ ಪ್ರಸ್ತಾಪಿಸಿದಾಗ ನನಗೆ ಸಂತೋಷವಾಯಿತು ಅದೇ ಖುಷಿಯಲ್ಲಿ ಕೆಲವೊಂದಿಷ್ಟು ವಿಷಯಗಳನ್ನು ಸಂಗ್ರಹಿಸಿ ಕಾರ್ಯೋನ್ಮುಖ ವಾದ ನಮ್ಮ ತಂಡ ನೂರಾರು ಎಕರೆ ಜಾಗದಲ್ಲಿ ಇರುವ ಈ ದೇವಸ್ಥಾನವನ್ನು ಡೆಂಕಣಿಕೋಟೆ ರಸ್ತೆಯ ಸಂಧಿಗೆ ತಂದು ಹತ್ತಿ ವರ್ದರ್ ದೇವಸ್ಥಾನದ ಫೀಲ್ ತರಲು ಕೆಲವೊಂದಿಷ್ಟು ಭಾಗಗಳನ್ನು ಆಯ್ದುಕೊಂಡು ಪ್ರಯತ್ನಿಸಿದ್ದೇವೆ ಅಲ್ಲಿಯ ದೇವಸ್ಥಾನದ ಮುಖಮಂಟಪ ಕೆಲವೊಂದಿಷ್ಟು ಸ್ತಂಭಗಳು ದೇವರನ್ನು ಮಲಗಿಸಿದ ರೀತಿ ಇದನ್ನೆಲ್ಲ ಆಯ್ದುಕೊಂಡು ಒಂದು ಮಾಡೆಲ್ ಸಿದ್ಧಪಡಿಸಿ ನಂತರ ಈ ಸೆಟ್ಟನ್ನು ಹಾಕಿದ್ದು. ಹತ್ತಿ ವರ್ದರ್ ವರದರಾಜ ಸ್ವಾಮಿ ದರ್ಶನ ಪಡೆಯದವರು ಹೋಗಿ ದರ್ಶನ ಪಡೆಯಬಹುದು. ಬೆಂಗಳೂರಿನಿಂದ 70 ಕಿಲೋ ಮೀಟರ್ ದೂರದಲ್ಲಿರುವ ಹೊಸೂರು ಸಮೀಪದ ಕೃಷ್ಣಗಿರಿ ಡಿಸ್ಟ್ರಿಕ್ಟ್ ಸೇರಿದ  ಡೆಂಕಣಿಕೋಟೆ ಎಲ್ಲಿ ಮುಂದಿನ ಭಾನುವಾರದವರೆಗೆ ವರದರಾಜಸ್ವಾಮಿ ಪ್ರತಿರೂಪ ಹಾಗೂ ದೇವಾಲಯದ ಸೆಟ್ ನೋಡಲು ನಿಮಗೆ ಸಿಗುತ್ತದೆ . ಇದಲ್ಲದೆ ಇನ್ನೂ ಎರಡು ಸೆಟ್ ಗಳನ್ನು ನಾವು ಹಾಕಿದ್ದು ನಾಳೆ ನಾಡಿದ್ದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ
ಜಿನೇಂದ್ರ ಎಂ ಎಂ





No comments:

Post a Comment

ಸಾಗರದಾಚೆ ಜಿನಧರ್ಮ ಪ್ರಭಾವನೆ : ಡಿ. 3-4 ದುಬೈ ನಲ್ಲಿ ಜಿನ ಸಮ್ಮಿಲನ

     ▫️ವಿಶ್ವಕ್ಕೆ ಶಾಂತಿ ಅಹಿಂಸೆ ಸಂದೇಶ ಸಾರಿದ ಜೈನ ಧರ್ಮ ಪ್ರಾಚೀನ ವಿಶ್ವ ಧರ್ಮ ಎನ್ನುವದು ಅಷ್ಟೇ ಸತ್ಯ. ಸಂಖ್ಯಾ ದೃಷ್ಟಿಯಿಂದ ಜೈನರು ತುಂಬಾ ಕಡಿಮೆಯಿರಬಹುದು ಆದರೆ ...